ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ


Team Udayavani, May 21, 2022, 1:28 PM IST

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

ಕಡಲ ತಡಿಯ ನಗರಗಳಾದ ಚೆನ್ನೈ, ಮುಂಬೈಗಿಂತ ಸುರಕ್ಷಿತ ನಗರ ಎಂದೇ ಗುರುತಿಸಿಕೊಳ್ಳುವ ರಾಜಧಾನಿ ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಪೀಡಿತ ಮಹಾನಗರವಾಗಿ ಪರಿವರ್ತನೆಯಾಗುತ್ತಿದೆ. ಯೋಜನಾಬದ್ಧವಲ್ಲದ ರಾಜಕಾಲುವೆ ನಿರ್ವಹಣೆ, ಕೆರೆ, ಮಳೆ ನೀರುಗಾಲುವೆ ಒತ್ತುವರಿ…. ಹೀಗೆ ಹಲವು ಕಾರಣಗಳಿಂದ ಮಳೆ ನೀರು ಸರಾಗವಾಗಿ ಹರಿಯದೆ ಬಡಾವಣೆಗಳು ಪ್ರವಾಹಕ್ಕೆ ತುತ್ತಾಗುತ್ತಿವೆ. ಪ್ರತಿವರ್ಷ ರಾಜಕಾಲುವೆ ನಿರ್ವಹಣೆಗಾಗಿಯೇ ಸಾವಿರಾರು ಕೋಟಿ ರೂ. ವ್ಯಯಿಸುತ್ತಿದ್ದರೂ ಅದು ವ್ಯರ್ಥವಾಗುತ್ತಿದೆ. ಮಳೆಯಿಂದ ಸೃಷ್ಟಿಯಾಗುವ ಪ್ರವಾಹಕ್ಕೆ ತುತ್ತಾದ ಜನರ ಸ್ಥಿತಿ, ಪ್ರವಾಹ ತಡೆಯಲು ಕೈಗೊಳ್ಳಬೇಕಾದ ಕ್ರಮಗಳಗಳ ಬಗ್ಗೆ ಬೆಳಕು ಚೆಲ್ಲುವ ಸರಣಿ.

ಬೆಂಗಳೂರು: ಹಸಿದ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ, ಬೇಳೆ ಚರಂಡಿ ಸೇರಿವೆ. ಹಗಲು ರಾತ್ರಿಯೆನ್ನದೆ ದುಡಿದು ತಂದ ವಸ್ತುಗಳು ನೀರು ಪಾಲಾಗಿದೆ. ಇದೆಲ್ಲದರ ನಡುವೆ ಅಲ್ಲಿನ ಜನರಿಗೆ ಮಾತ್ರ ನಾಳೆಯತಮ್ಮ ಭವಿಷ್ಯವೇನು ಎಂಬ ಚಿಂತೆ ಕಾಡುತ್ತಿದೆ. ಇದು ಕಳೆದ ಮಂಗಳವಾರ ಸುರಿದ ಭಾರಿ ಮಳೆಯಿಂದಜಲಾವೃತವಾದ ಎಚ್‌ಬಿಆರ್‌ ಲೇಔಟ್‌ನ ಶ್ರೀಸಾಯಿ ಬಡಾವಣೆ ನಿವಾಸಿಗಳ ಪರಿಸ್ಥಿತಿ.

ಮಳೆ ನಿಂತು ಮೂರು ದಿನಗಳಾದರೂಸಾಯಿ ಬಡಾವಣೆಯಲ್ಲಿ ಇನ್ನೂ ಪ್ರವಾಹ ಸ್ಥಿತಿ ಕಡಿಮೆಯಾಗಿಲ್ಲ. ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ಕಳೆದ 3 ದಿನಗಳಿಂದಬಡಾವಣೆಯಿಂದ ನೀರು ಹೊರಹಾಕುತ್ತಿದ್ದರೂ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಜನರುಮನೆಯಲ್ಲಿ ಮಲಗಲು ಸಾಧ್ಯವಾಗದೆ ಅಕ್ಕಪಕ್ಕದ ನಿರ್ಮಾಣ ಹಂತದಕಟ್ಟಡಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಬಿಬಿಎಂಪಿನೀಡುವ ಆಹಾರ ಸೇವಿಸುತ್ತಾ ಮುಂದೇನು ಎಂಬಚಿಂತೆಯಲ್ಲೇ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರ ನಡುವೆ ಬಡಾವಣೆಯಿಂದ ನೀರು ಹೊರಹೋದ ನಂತರ ಎದುರಾಗುವ ಸಾಂಕ್ರಾಮಿಕ ರೋಗಗಳ ಭೀತಿಯೂ ಕಾಡುತ್ತಿದೆ.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಶ್ರೀ ಸಾಯಿ ಬಡಾವಣೆ ಸಂಪೂರ್ಣ ಜಲಾವೃತವಾಗಿದೆ. ಮಳೆ ಸುರಿದ ದಿನದಂದು ಬಡಾವಣೆಯಲ್ಲಿ 4ರಿಂದ5 ಅಡಿಗಳಷ್ಟು ನೀರು ನಿಂತು ಜನರು ರಾತ್ರಿಯಿಡೀಜಾಗರಣೆ ಮಾಡುವಂತಾಗಿತ್ತು. ಬುಧವಾರ ಬೆಳಗ್ಗೆವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗಿ ಎಂದಿನಂತೆ ಜೀವನ ಸಾಗಿಸಬಹುದು ಎಂದುಕೊಂಡಿದ್ದನಿವಾಸಿಗಳಿಗೆ ಶುಕ್ರವಾರವಾದರೂ ಪ್ರವಾಹ ಪರಿಸ್ಥಿತಿ ಕಡಿಮೆಯಾಗದಿರುವುದು ದಿಕ್ಕೇ ತೋಚದಂತಾಗಿದೆ.  ಮನೆಯೊಳಗಿನ ನೀರು ಹೊರಹಾಕಲು ಜನರುಹರಸಾಹಸ ಪಡುತ್ತಿದ್ದಾರೆ.

ರೋಗದ ಭೀತಿಯಲ್ಲಿ ಜನರು: ಪ್ರವಾಹ ಪರಿಸ್ಥಿತಿ ನಿವಾರಣೆಯಾದ ನಂತರಎದುರಾಗುವ ರೋಗಗಳ ಬಗ್ಗೆ ಜನರಲ್ಲಿ ಭೀತಿ ಕಾಡುತ್ತಿದೆ. ಪ್ರಮುಖವಾಗಿ ಸೊಳ್ಳೆಗಳು ಹೆಚ್ಚಲಿದ್ದುಅವುಗಳ ಕಡಿತದಿಂದ ಉಂಟಾಗುವ ರೋಗಗಳಿಂದ ರಕ್ಷಣೆ ಹೇಗೆ? ಎಂಬ ಯೋಚನೆಯಲ್ಲಿದ್ದಾರೆ. ಅಲ್ಲದೆ, ನೀರಿನಲ್ಲಿ ನೆನೆ ದ ವಸ್ತುಗಳು ಕೊಳೆಯಲಾರಂಭಿಸಿದನಂತರ ಅವುಗಳಿಂದ ದುರ್ನಾತ ಉಂಟಾಗಲಿದ್ದು ಆ ವಸ್ತುಗಳ ವಿಲೇವಾರಿ ಬಗ್ಗೆಯೂ ಜನರು ಚಿಂತೆಗೀಡಾಗಿದ್ದಾರೆ.

ಶ್ರೀ ಸಾಯಿ ಬಡಾವಣೆಯಲ್ಲಿ ಹಲವು ಕಾರ್ಮಿಕ ಕುಟುಂಬಗಳಿವೆ. ಬಾಡಿಗೆ ಮನೆಯಲ್ಲಿರುವಅವರೆಲ್ಲರ ಬದುಕು ಈಗ ಬೀದಿಗೆ ಬಂದಿದೆ. ಆಹಾರಪದಾರ್ಥಗಳು, ಬಟ್ಟೆ ಹೀಗೆ ಎಲ್ಲವೂ ನೀರು ಪಾಲಾಗಿವೆ. ಮನೆಯಲ್ಲಿ ತುಂಬಿರುವ ನೀರು ಇನ್ನೂಹೊರತೆಗೆದಿಲ್ಲ. ಹೀಗಾಗಿ ಐದಕ್ಕೂ ಹೆಚ್ಚಿನಕುಟುಂಬಗಳು ನಿರ್ಮಾಣ ಹಂತದ ಕಟ್ಟಡದಲ್ಲಿ ಆಶ್ರಯ ಪಡೆದಿವೆ.

ಶ್ರೀ ಸಾಯಿ ಬಡಾವಣೆಯಲ್ಲಿ ಪ್ರತಿವರ್ಷ ಪ್ರವಾಹ ಉಂಟಾಗುತ್ತಿದೆ. 2021ರಲ್ಲಿಯೂ ಪ್ರವಾಹಸೃಷ್ಟಿಯಾಗಿತ್ತು. ಆಗಲೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಪ್ರವಾಹಕ್ಕೆ ತುತ್ತಾದ ಮನೆಗಳಿಗೆ ತಲಾ 10 ಸಾವಿರ ರೂ. ಪರಿಹಾರನೀಡುವ ಭರವಸೆ ನೀಡಿದ್ದರು. ಆದರೆ, ಈವರೆಗೆಪರಿಹಾರ ಜನರ ಕೈ ಸೇರಿಲ್ಲ. ಈಗ ಮತ್ತೆ ಪರಿಹಾರದ ಭರವಸೆ ನೀಡಲಾಗಿದೆ. ಅದು ಸಿಗುತ್ತದೆ ಎಂಬ ವಿಶ್ವಾಸ ಮಾತ್ರ ಜನರಿಗಿಲ್ಲ.

ಪ್ರವಾಹಕ್ಕೆ ಕಾರಣಗಳೇನು? :  ಎಚ್‌ಬಿಆರ್‌ ಲೇಔಟ್‌ನಲ್ಲಿ ಹಾದು ಹೋಗುವ ರಾಜಕಾಲುವೆ ಅಗಲ 30 ಅಡಿಯಿದೆ. ಆದರೆ ಅದೇ ರಾಜಕಾಲುವೆ ಒಡ್ಡರಪಾಳ್ಯದ ರೈಲ್ವೆ ಹಳಿಯ ಕೆಳಭಾಗದಲ್ಲಿ10 ಅಡಿಗೆ ಅಗಲವಾಗಿದೆ. ಅದರಿಂದ ಮಳೆ ನೀರು ಸರಾಗವಾಗಿ ಹರಿಯದೆ ವಾಪಸ್‌ ಬರುತ್ತಿದೆ. ಹಾಗೆಯೇ, ಶ್ರೀ ಸಾಯಿ ಬಡಾವಣೆ ಪಕ್ಕದಲ್ಲಿಯೇ ಬಿಡಿಎ ಅರ್ಕಾವತಿ ಬಡಾವಣೆ ನಿರ್ಮಿಸಿದೆ. ಈ ಬಡಾವಣೆಯನ್ನು ಶ್ರೀ ಸಾಯಿ ಬಡಾವಣೆಗಿಂತ ಎತ್ತರದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಅರ್ಕಾವತಿ ಬಡಾವಣೆಯ ನೀರು ಸಾಯಿ ಬಡಾವಣೆಗೆ ಹರಿಯುತ್ತಿದೆ. ಈ ಕಾರಣಗಳಿಂದ ಪ್ರತಿವರ್ಷ ಮಳೆಗೆ ಶ್ರೀ ಸಾಯಿ ಬಡಾವಣೆ ಮುಳುಗುವಂತಾಗುತ್ತಿದೆ.

ಪರಿಹಾರವೇನು? :

ರೈಲ್ವೆ ಹಳಿಯ ಕೆಳಭಾಗದಲ್ಲಿ ಸದ್ಯ 5ರಿಂದ 6 ಅಡಿ ವಿಸ್ತೀರ್ಣದ 2 ಕಾಲುವೆ ನಿರ್ಮಿಸಲಾಗಿದೆ. ಆ ಕಾಲುವೆಯನ್ನು ಅಗಲ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅದರಆಳವನ್ನು ಹೆಚ್ಚಿಸಬೇಕು ಅಥವಾ ಪ್ರತ್ಯೇಕಕಾಲುವೆ ರಚಿಸಬೇಕು. ಹಾಗೆಯೆ, ಅರ್ಕಾವತಿ ಬಡಾವಣೆಯ ನೀರು ಶ್ರೀ ಸಾಯಿಬಡಾವಣೆಗೆ ಹರಿಯದಂತೆ ಮಾಡಿ,ನೇರವಾಗಿ ಮಳೆನೀರು ಕಾಲುವೆಗೆ ಸೇರುವಂತೆ ಮಾಡಬೇಕು ಅಥವಾ ಮಳೆ ನೀರು ಸಂಗ್ರಹಿಸಿ ಮರುಬಳಕೆಗೆ ಒತ್ತು ನೀಡಬೇಕು.

ಸಂತಸ ತರದ ಎಸ್ಸೆಸ್ಸೆಲ್ಸಿ ಫ‌ಲಿತಾಂಶ :  ಶ್ರೀ ಸಾಯಿಬಡಾವಣೆಯ ಜೇಕಬ್‌ಎಂಬುವರ ಮಗಳುಸಾರಾ ಗುರುವಾರಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 96.5ಅಂಕ ಪಡೆದಿದ್ದಾಳೆ.ಆದರೆ ಮಳೆಯಿಂದ ಮನೆಯಲ್ಲಿನಪರಿಸ್ಥಿತಿಯಿಂದಾಗಿ ಉತ್ತಮ ಅಂಕಗಳಿಕೆಯ ಸಂತಸವೇ ಆಕೆಯಲ್ಲಿ ಇಲ್ಲದಂತಾಗಿದೆ.

ಶ್ರೀಸಾಯಿ ಬಡಾವಣೆಯ ಸಮಸ್ಯೆ ನಿವಾರಿಸಲು ರೈಲ್ವೆ ಅಧಿಕಾರಿಗಳಜತೆ ಮಾತುಕತೆ ನಡೆಸಲಾಗಿದೆ. ರೈಲ್ವೆ ಹಳಿಕೆಳಗೆ ಇನ್ನೊಂದು ಕಾಲುವೆ ನಿರ್ಮಿಸಲು ಇಲಾಖೆಯಿಂದ ಮೌಖೀಕವಾಗಿ ಒಪ್ಪಿಗೆ ಸಿಕ್ಕಿದೆ. ಈ ಬಗ್ಗೆ ಮಾತುಕತೆ ನಡೆಸಿ ಅಧಿಕೃತವಾಗಿ ಅನುಮತಿ ಪಡೆಯಲಾಗುವುದು. – ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ

ಪತ್ನಿ 6 ತಿಂಗಳ ಗರ್ಭಿಣಿ. ಮಳೆಯಿಂದ ಮನೆಗೆ ನೀರು ನುಗ್ಗಿದಾಗ ಏನುಮಾಡಬೇಕೆಂಬುದೇತೋಚಲಿಲ್ಲ. ಪ್ರತಿವರ್ಷ ಇದೇಪರಿಸ್ಥಿತಿ ಎದುರಿಸುತ್ತಿದ್ದೇವೆ. ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. – ಭೀಮಾಶಂಕರ್‌, ನಿವಾಸಿ

ಕಳೆದ ವರ್ಷವೂ ಬಿಬಿಎಂಪಿ ಅಧಿಕಾರಿಗಳು ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ ಅದು ಬರಲಿಲ್ಲ. ಈಗಲೂ ಅದು ಬರುತ್ತದೆಎಂಬ ನಂಬಿಕೆಯಿಲ್ಲ. ಮಳೆಯಿಂದಾಗಿಬದುಕು ಬೀದಿಗೆ ಬಂದಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ರಾತ್ರಿ ಕಳೆಯುತ್ತಿದ್ದೇವೆ. – ಮಲ್ಲಿಕಾ, ನಿವಾಸಿ

ರೈಲ್ವೆ ಹಳಿ ಕೆಳಗಿನ ಕಾಲುವೆ ಸಣ್ಣದಾಗಿರುವುದರಿಂದ ಪ್ರವಾಹಉಂಟಾಗುತ್ತಿದೆ. ಪ್ರತಿವರ್ಷ ಸಮಸ್ಯೆಬಗೆಹರಿಸುತ್ತೇವೆ ಎಂದು ಹೇಳುವಅಧಿಕಾರಿಗಳು ಅದಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಮಾತ್ರ ಪ್ರತಿವರ್ಷ ಸಮಸ್ಯೆಗೆ ಸಿಲುಕುವಂತಾಗಿದೆ.– ಪೊನ್ನಪ್ಪ, ನಿವಾಸಿ

– ಗೀರಿಶ್‌ ಗರಗ

ಟಾಪ್ ನ್ಯೂಸ್

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

7

Udupi ನಗರಸಭೆಗೆ ಸರಕಾರದಿಂದ 5 ಸದಸ್ಯರ ನಾಮ ನಿರ್ದೇಶನ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Court Verdict: ಕೊಲ್ಕತ್ತಾ ಅತ್ಯಾಚಾರ ಪ್ರಕರಣ: ಆರೋಪಿ ಸಂಜಯ್ ರಾಯ್ ದೋಷಿ, ಕೋರ್ಟ್ ತೀರ್ಪು

Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ

12-metro

Metro: ನಾಡಿದ್ದಿನಿಂದ ಮೆಟ್ರೋ ಪ್ರಯಾಣ ದರ ಏರಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Ban: ಏರ್‌ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್‌ ಬಳಕೆ ನಿಷೇಧ: ಪಾಲಿಕೆ ಆದೇಶ

19-

EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್‌ 1 ಸ್ಥಾನ ಪಡೆದ ಕರ್ನಾಟಕ

18-

US visa: ಬೆಂಗಳೂರಿನಲ್ಲೇ ಅಮೆರಿಕ ವೀಸಾ: ಕನಸು ಸನ್ನಿಹಿತ

17-BNG

Bengaluru: ಕೆಂಪೇಗೌಡ ಲೇಔಟ್‌ನಲ್ಲಿ ಅನಧಿಕೃತ ನಿವೇಶನ ತೆರವು

16-bng

Bengaluru: ವಿವಾಹ ತಿರಸ್ಕರಿಸಿದ ನರ್ಸ್‌ಗೆ ಚೂರಿ ಇರಿದ ಪಾಗಲ್‌ ಪ್ರೇಮಿ!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

20

Ban: ಏರ್‌ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್‌ ಬಳಕೆ ನಿಷೇಧ: ಪಾಲಿಕೆ ಆದೇಶ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

19-

EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್‌ 1 ಸ್ಥಾನ ಪಡೆದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.