![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 21, 2022, 2:50 PM IST
ಮಲಯಾಳಂ ಚಿತ್ರರಂಗದ ಎವರ್ ಗ್ರೀನ್ ಹೀರೋ ಮೋಹನ್ ಲಾಲ್ ತಮ್ಮ ನಾಲ್ಕು ದಶಕಗಳ ಸಿನಿಮಾರಂಗದ ವೃತ್ತಿ ಜೀವನದಲ್ಲಿ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಇಂದು (ಮೇ 21) 62 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಮಾಲಿವುಡ್ ನಲ್ಲಿ ಲಾಲೆಟ್ಟನ್ ಎಂದೇ ಜನಪ್ರಿಯರಾಗಿರುವ ಮೋಹನ್ ಲಾಲ್ ತಮ್ಮ ವೈವಿಧ್ಯಮಯ ಪಾತ್ರಗಳ ಅಭಿನಯದ ಮೂಲಕ ಭಾರತ ಸೇರಿದಂತೆ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಮೋಹನ್ ಲಾಲ್.
ಇದನ್ನೂ ಓದಿ:ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ
ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಕುಸ್ತಿಪಟುವಾಗಿದ್ದರು!
ನಟರಾಗಿ ಜನಪ್ರಿಯತೆ ಗಳಿಸಿರುವ ಮೋಹನ್ ಲಾಲ್ ಅವರು ಹೆಸರಾಂತ ನಿರ್ಮಾಪಕರು ಹೌದು, ಹಿನ್ನೆಲೆ ಗಾಯಕ, ದಾನಿಯಾಗಿದ್ದು, ಲಾಲೆಟ್ಟನ್ ಕೇರಳ ರಾಜ್ಯ ಕುಸ್ತಿ ಪಂದ್ಯದ ಚಾಂಪಿಯನ್ ಆಗಿದ್ದರು ಎಂಬ ವಿಚಾರ ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ. ಲಾಲೆಟ್ಟನ್ ಕುಸ್ತಿ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ…
ಕುಸ್ತಿ ಚಾಂಪಿಯನ್ ಟು ಚಿತ್ರರಂಗದ ಸ್ಟಾರ್ ಗಿರಿವರೆಗೆ:
1978ರಲ್ಲಿ ಮೋಹನ್ ಲಾಲ್ ಮತ್ತು ಅವರ ಸ್ನೇಹಿತರೆಲ್ಲ (ಮನಿಯಾನ್ ಪಿಲ್ಲಾ ರಾಜು, ಸುರೇಶ್ ಕುಮಾರ್, ಉನ್ನಿ ಪ್ರಿಯದರ್ಶನ್, ರವಿ ಕುಮಾರ್) ಸೇರಿ ನಿರ್ಮಿಸಿದ “ತಿರನೋತ್ತಮ್ ಸಿನಿಮಾದಲ್ಲಿ ನಟನಾಗಿ ನಟಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಆದರೆ ಸೆನ್ಸಾರ್ ಮಂಡಳಿಯ ಕೆಲವು ಸಮಸ್ಯೆಗಳಿಂದಾಗಿ ಈ ಸಿನಿಮಾ ಸುಮಾರು 25 ವರ್ಷಗಳ ನಂತರ ಬಿಡುಗಡೆ ಕಂಡಿತ್ತು. ನಟನಾಗುವ ಮೊದಲು ಮೋಹನ್ ಲಾಲ್ ಅವರು ಕುಸ್ತಿ, ಕ್ರೀಡೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದರು.
1977-1978ರಲ್ಲಿ ಮೋಹನ್ ಲಾಲ್ ಅವರು ಕುಸ್ತಿ ಪಂದ್ಯದಲ್ಲಿ ಸ್ಟೇಟ್ ಚಾಂಪಿಯನ್ ಆಗಿದ್ದರು. ಇವರು ರಾಜ್ಯದಲ್ಲಿ ನಡೆದ ಹಲವಾರು ಕುಸ್ತಿ ಪಂದ್ಯಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದರು. ಕುಸ್ತಿಯಲ್ಲಿ ರಾಜ್ಯ ಚಾಂಪಿಯನ್ ಶಿಪ್ ಪಡೆದ ನಂತರ ಮೋಹನ್ ಲಾಲ್ ಅವರನ್ನು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್ ಶಿಫ್ ಗೆ ಆಯ್ಕೆ ಮಾಡಲಾಗಿತ್ತು.
ಯೂಟರ್ನ್:
ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಮೋಹನ್ ಲಾಲ್ ಅವರು ತೆರಳಲು ಸಿದ್ಧವಾಗಿದ್ದ ಸಂದರ್ಭದಲ್ಲಿ “ ಮಂಜಿಲ್ ವಿರಿಂಜಾ ಪೂಕ್ಕಳ್” ಸಿನಿಮಾದ ಆಡಿಷನ್ ಗಾಗಿ ದೂರವಾಣಿ ಕರೆ ಬಂದಿತ್ತು. ಆಗ ಮೋಹನ್ ಲಾಲ್ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್ ಶಿಪ್ ಗೆ ತೆರಳುವ ನಿರ್ಧಾರ ಕೈಬಿಟ್ಟು, ಆಡಿಷನ್ ಗೆ ಹೋಗಲು ನಿರ್ಧರಿಸುವ ಮೂಲಕ ಲಾಲೆಟ್ಟನ್ ಬದುಕಿಗೊಂದು ತಿರುವು ಸಿಕ್ಕಿತ್ತು.
ನಿರ್ದೇಶಕ ಫಾಸಿಲ್ ಅವರು ಮಂಜಿಲ್ ವಿರಿಂಜಾ ಸಿನಿಮಾಕ್ಕೆ ಮೋಹನ್ ಲಾಲ್ ಹೀರೋ ಎಂಬುದಾಗಿ ನಿರ್ಧರಿಸಿಬಿಟ್ಟಿದ್ದರು. ಈ ಸಿನಿಮಾ ಬಿಡುಗಡೆಯಾದ ನಂತರ ಭರ್ಜರಿ ಯಶಸ್ಸು ಗಳಿಸಿತ್ತು. ಆ ಬಳಿಕ ಮೋಹನ್ ಲಾಲ್ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿಲ್ಲ. ರೊಮ್ಯಾನ್ಸ್, ಆ್ಯಕ್ಷನ್ ನಿಂದ ಹಿಡಿದು ಐತಿಹಾಸಿಕ ಸಿನಿಮಾಗಳಲ್ಲಿನ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಇಂದಿಗೂ ಲಕ್ಷಾಂತರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ…
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.