ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ : ರೈತರ ಬೆಳೆ ಹಾನಿ
Team Udayavani, May 21, 2022, 11:01 PM IST
ಮೂಡಿಗೆರೆ : ತಾಲೂಕಿನ ಊರುಬಗೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಊರುಬಗೆ ಹೊಸಹಳ್ಳಿ ಕುಂಬರಡಿ ಗೌಡಹಳ್ಳಿ ಹೊಸಕೆರೆ ಸತ್ತಿಗನಹಳ್ಳಿ ಮುಂತಾದ ಊರುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಬೆಳೆಹಾನಿ ಮಾಡುತ್ತಿವೆ.
ಇದರಿಂದ ಭತ್ತದ ಬೆಳೆ ಬೆಳೆಯದೆ ಸಾವಿರಾರು ಎಕರೆ ಗದ್ದೆಗಳು ಹಾಳು ಗದ್ದೆಗಳಾಗಿವೆ. ಊರುಬಗೆ ಗ್ರಾಮದಲ್ಲಿನ ಹೊಸಹಳ್ಳಿ ಉಮೇಶ್ ರವರ ತೋಟದಲ್ಲಿ ನಿನ್ನೆಯಿಂದ ಆನೆಗಳು ಬೀಡುಬಿಟ್ಟಿದ್ದು ಬಾಳೆ ಮೆಣಸು ಕಾಫಿ ಗಿಡಗಳನ್ನು ತುಳಿದು ಕಿತ್ತು ಹಾಕಿ ನಷ್ಟ ಉಂಟು ಮಾಡಿವೆ.ಇದರಿಂದ ಗದ್ದೆ ತೋಟ ಗಳಿಗೆ ಹೋಗಿ ಕೆಲಸ ನಿರ್ವಹಿಸುವುದು ಕಷ್ಟ ವಾಗಿದೆ.
ಆದರಿಂದ ಕಾಡಾನೆಗಳ ಹಿಡಿದು ಬೇರೆಡೆ ಸ್ಥಳಾಂತರ ಮಾಡುವ ಮೂಲಕ ರೈತರಿಗೆ ಉಂಟಾಗುವ ತೊಂದರೆ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಶಾಪಿಂಗ್ ಮಾಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.