ಕಷ್ಟದಲ್ಲಿದ್ದವರಿಗೆ ನೆರವಾಗುವ ಕೆಲಸವಾಗಲಿ
ಸಮುದಾಯಕ್ಕೆ ತೊಂದರೆಯಾದರೆ ರಕ್ಷಣೆ ನೀಡುವ ಕಾರ್ಯವಾಗಬೇಕಿದೆ: ಸ್ಪೀಕರ್ ಕಾಗೇರಿ
Team Udayavani, May 22, 2022, 11:58 AM IST
ಶಿರಸಿ: ಸಮಾಜದಲ್ಲಿ ಕಷ್ಟದಲ್ಲಿ ಇದ್ದವರಿಗೆ ನೆರವಾಗುವ ಕೆಲಸ ಮಾಡಲೇಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಶನಿವಾರ ಅವರು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಿಪ್ರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಸಂಘ ಜೀವಿ. ಸಂಘಟನೆ ಆಗಲೇಬೇಕು. ಸಮಾಜ ಎಲ್ಲ ಹಂತದಲ್ಲಿ ಸಂಘಟನೆ ಅಗಬೇಕು. ಎಲ್ಲ ಸಂಘನೆಗಳು ಒಂದಕ್ಕೊಂದು ವಿರುದ್ಧವಲ್ಲ. ಸಮಾಜವನ್ನು ಮುನ್ನಡೆಸುವ ಪ್ರಯತ್ನದ ಭಾಗವಾಗಬೇಕು. ಮಾರ್ಗದರ್ಶಕ ಸಂಘಟನೆಗಳೇ ಆಗಬೇಕು ಎಂದರು.
ದೊಡ್ಡ ಬಲವುಳ್ಳ ಜನಸಂಖ್ಯೆಯ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮದಲ್ಲಿದೆ. ಅದನ್ನು ವರ್ಷದಲ್ಲಿ ಆಚರಿಸುವಂತಾಗಬೇಕು. ಮುಂದಿನ ನೀಲ ನಕ್ಷೆಗೆ ಈ ವೇದಿಕೆ ಅನಿವಾರ್ಯ ಎಂದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ, ಆರ್ಥಿಕ ಹಿಂದುಳಿದವರ ಪಟ್ಟಿಯಲ್ಲಿ ಇದ್ದರೂ ಮೂರ್ನಾಲ್ಕು ಜಾತಿ ಮರಳಿ ಸೇರಿದೆ. ಉದ್ಯೋಗಕ್ಕೆ ಮಾತ್ರ ಮೀಸಲಾತಿ ಸಿಕ್ಕರೆ ಉಪಯೋಗ ಆಗುತ್ತದೆ. ಪುನಃ ಈ ಸಮಸ್ಯೆ ನಿವಾರಿಸಲು ಪ್ರಯತ್ನ ಮಾಡುತ್ತೇವೆ ಎಂದರು.
ಬ್ರಾಹ್ಮಣ್ಯದ ಬಗ್ಗೆ ಮಾತನಾಡಿದರೆ ಏನಾದರೂ ಅಂಟಿಕೊಳ್ಳುತ್ತದೆ ಎಂಬ ಭಯವಿದೆ. ಸಮುದಾಯದ ಬಗ್ಗೆ ಮಾತನಾಡಿದರೆ ಸಮಸ್ಯೆ ಆದರೆ ರಕ್ಷಣೆ ನೀಡುವ ಕಾರ್ಯ ಆಗಬೇಕು. ಬಡ, ಪ್ರತಿಭಾವಂತ ಮಕ್ಕಳ ದತ್ತು ಪಡೆದು ಬೆಂಬಲಿಸಬೇಕು ಎಂದರು.
ಶಾಸಕ ಆರ್.ವಿ. ದೇಶಪಾಂಡೆ, ಸಮಾಜದ ಅಭಿವೃದ್ಧಿ ಆಗಬೇಕು. ಆದರೆ, ರಾಜಕೀಯ ಕ್ಷೇತ್ರದಲ್ಲಿ ಬೆಳೆಸಲು ನಾವೇನು ಮಾಡಿದ್ದೇವೆ? ರಾಜಕೀಯ ನಾಯಕತ್ವ ಇದ್ದವರನ್ನು ಬೆಳೆಸಿಲ್ಲ. ಆರೋಗ್ಯ ಮತ್ತು ಶಿಕ್ಷಣದ ಕಡೆಗೆ ಮಹಾಸಭೆ ಗಮನ ಕೊಡಬೇಕು. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಇಡಬೇಕು ಎಂದೂ ಸಲಹೆ ಮಾಡಿದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ ಹಾರ್ನಳ್ಳಿ, ಬ್ರಾಹ್ಮಣರು ತೊಂದರೆ ಆಗಿದೆ ಎಂದು ಹೇಳಿಕೊಳ್ಳುತ್ತಿಲ್ಲ. ಈಗ ಸಾಧನೆ ಮಾಡಿದವರು ಸ್ವಸಾಮರ್ಥಯದ ಮೇಲೆ ಬಂದವರು. ಆರ್ಥಿಕ ಹಿಂದುಳಿದ ನಮ್ಮ ಮಕ್ಕಳಿಗೆ ಸಂವಿಧಾನದಲ್ಲಿ ಇದ್ದರೂ ಆಗಿಲ್ಲ. ತಾಂತ್ರಿಕ ತೊಂದರೆ ಅದನ್ನು ಸರಿ ಮಾಡಲು ಎಷ್ಟು ದಿನ ಬೇಕು. ಸಿಎಂ ಬಳಿ ಕೂಡ ಸರಿ ಮಾಡಲು ಮತ್ತೆ ಮನವಿ ಮಾಡುತ್ತೇವೆ. ಬ್ರಾಹ್ಮಣರ ಎಲ್ಲ ಉಪ ಪಂಗಡಗಳೂ ಸೇರಬೇಕು ಎಂದೂ ಹೇಳಿದರು.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಬ್ರಾಹ್ಮಣರಿಗೆ ಕಲಿಯುಗದಲ್ಲಿ ಅನಾಯಕತ್ವ ಇದೆ ಎಂಬ ಸಂಸ್ಕೃತ ಉಕ್ತಿ ಇದೆ. ಆದರೆ, ಬ್ರಾಹ್ಮಣ ಮಹಾಸಭಾ ಒಂದು ಕೋಲ್ಮಿಂಚಾಗಿ ಕಾಣುತ್ತಿದೆ ಎಂದ ಅವರು, ಬ್ರಾಹ್ಮಣರು ಬೇಡುವುದು ಬೇಡ. ಮೀಸಲಾತಿ ನೀಡಿದರೆ ವಿದೇಶದಲ್ಲೂ ರಾಯಭಾರಿಗಳಾಗಲು ಆಗುತ್ತಿರಲಿಲ್ಲ. ಬ್ರಾಹ್ಮಣರು ಸ್ವಾಭಿಮಾನದ ಪ್ರತೀಕ ಎಂದರು.
ಪಂಚಾಯತ್ ರಾಜ್ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ರಾಮಚಂದ್ರಾಪುರ ಮಠಾಧೀಶ ಆರ್.ಎಸ್. ಹೆಗಡೆ ಹರಗಿ, ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಇದ್ದರು. ಎಚ್.ಆರ್. ಗಣೇಶ, ಪ್ರಸಾದ ಹೆಗಡೆ, ಶ್ರೀಪಾದ ರಾಯ್ಸದ, ನಾರಾಯಣ ಹೆಗಡೆ, ಕೆ.ಎಸ್.ಆನಗೋಡ ಇತರರು ವಿವಿಧ ಜವಾಬ್ದಾರಿ ನಿರ್ವಹಿಸಿದರು. ರಾಜ್ಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಸ್ವಾಗತಿಸಿದರು. ಸಿಂಧೂ ಹೆಹಡೆ ನಿರ್ವಹಿಸಿದರು. ಇದೇ ವೇಳೆ ಅಶೋಕ ಹಾರ್ನಳ್ಳಿ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.