ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌


Team Udayavani, May 23, 2022, 1:35 PM IST

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಬೆಂಗಳೂರು ಫ್ಯಾಷನ್‌ ಹಾಗೂ ಸಿನಿ ಲೋಕಕ್ಕೆ ಸಮೀಪ. ಸೊಂಟ ಅರ್ಧ ಇಂಚು ದಪ್ಪವಾದರೆ ಎಲ್ಲಿ ಸೌಂದರ್ಯ ಕಡಿಮೆಯಾಗುತ್ತದೆಯೋ ಎನ್ನುವ ಆತಂಕದಲ್ಲಿ ಕಾಸ್ಮೆಟಿಕ್‌ ಶಸ್ತ್ರ ಚಿಕಿತ್ಸೆಗಾಗಿ ಒಳಗಾಗುತ್ತಿರುವವರ ಸಂಖ್ಯೆಯಲ್ಲಿ ಯುವಜನರಲ್ಲಿ ಮಾತ್ರವಲ್ಲದೇ ವಯಸ್ಕರಲ್ಲಿಯೂ ಕಂಡು ಬರುತ್ತಿದೆ. ಸರಿಯಾಗಿ ಚಿಕಿತ್ಸೆ ಸಿಗದೇ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಬೆಂಗಳೂರು: ಸುಂದರವಾಗಿ ಕಾಣಬೇಕು ಎಂಬ ಹಂಬಲ ಎಲ್ಲರಲ್ಲಿಯೂ ಇರುತ್ತದೆ. ಬದಲಾದ ಜೀವನ ಶೈಲಿ ಹಾಗೂ ಒತ್ತಡ, ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಥೈರಾಯಿಡ್‌ ಸಮಸ್ಯೆಮತ್ತು ಹಾರ್ಮೋನುಗಳ ಅಸಮತೋಲನಗಳಿಂದ ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗುತ್ತಿದೆ. ಇದನ್ನು ಕರಗಿಸಿಕೊಳ್ಳಲು ದೈಹಿಕ ಶ್ರಮ ಹಾಗೂ ಆಹಾರ ಕ್ರಮ ಬದಲಾಯಿಸಲು ಇಚ್ಛಿಸಿದವರು ಸಲುಭವಾಗಿ ಫ್ಯಾಟ್‌ ರಿಮೂವಲ್‌ ಸೇರಿದಂತೆ ಇತರೆ ದೇಹದ ಭಾಗಗಳ ಸರ್ಜರಿಗೆ ಒಳಗಾಗುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಬೆಂಗಳೂರು ನಗರದಲ್ಲಿ ಸೌಂದರ್ಯ ಚಿಕಿತ್ಸೆಗಳು ಟ್ರೆಂಡ್‌ ಆಗಿ ಬೆಳೆಯುತ್ತಿವೆ.

ಸಾಮಾನ್ಯವಾಗಿ ಹೊಟ್ಟೆ, ಎದೆ, ಒಳ ಮೊಣಕಾಲುಗಳು, ಸೊಂಟ, ಪಾಶ್ವ, ಕಂಠರೇಖೆ ಮತ್ತು ಗಲ್ಲದ ಅಡಿಯಲ್ಲಿನ ಭಾಗ, ತೊಡೆಗಳು, ಹೊರ ಮತ್ತು ಒಳ ತೊಡೆಗಳು, ಮೇಲಿನ ತೋಳುಗಳಲ್ಲಿ ಇರುವ ಹೆಚ್ಚಿನಕೊಬ್ಬನ್ನು ತೆಗೆಯಲು ಸೌಂದರ್ಯ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ.ತೂಕವನ್ನು ಕಡಿಮೆ ಮಾಡಲು ಮತ್ತು ತೂಕ-ಸಂಬಂಧಿತ ಅಸ್ವಸ್ಥತೆಗಳು ಅಥವಾ ಸಹ-ಅಸ್ವಸ್ಥತೆಗಳನ್ನು ನಿವಾರಿಸುವುದಕ್ಕೆ ಬೇರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ (ತೂಕ-ಸಂಬಂಧಿತ ಅಸ್ವಸ್ಥತೆಗಳು ನಿವಾರಿಸುವುದು) ಹಾಗೂ ಅನಗತ್ಯ ಕೊಬ್ಬನ್ನು ಕರಗಿಸಲು ಲಿಪೊಸಕ್ಷನ್‌ಗೆ ಒಳಪಡುತ್ತಾರೆ.

ಬೆಂಗಳೂರಿನಲ್ಲಿ ಅಸಮತೋಲನ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ತೂಕವನ್ನು ಹೆಚ್ಚಿಸುವುದರ ಜತೆಗೆ ಸೌಂದರ್ಯದ ಬಗ್ಗೆಅತೀಯಾದ ಕಾಳಜಿ ಹೊಂದಿರುವವರು ಮಹಿಳೆಯರು ಸೇರಿದಂತೆ ಪುರುಷರು ಬೊಜ್ಜನ್ನು ಕರಗಿಸಲು ಹೆಚ್ಚಾಗಿ ಲಿಪೊಸಕ್ಷನ್‌ ಶಸ್ತ್ರ ಚಿಕಿತ್ಸೆ ಮೊರೆ ಹೋಗುತ್ತಿದ್ದಾರೆ. ಲೇಸರ್‌ ಚಿಕಿತ್ಸೆ ಇದಾಗಿದೆ.

ಸಣ್ಣ ರಂಧ್ರ ಕೊರೆದು ವಿದ್ಯುತ್‌ ಪ್ರವಹಿಸುತ್ತಾ ಕೊಬ್ಬು ಕರಗಿಸಲಾಗುತ್ತದೆ. ಸರ್ಜರಿ ಮಾಡುವಾಗ ರೋಗಿಗೆ ತುರ್ತು ಚಿಕಿತ್ಸೆಗೆ ಸರಿಯಾದ ಸಿದ್ಧತೆಯಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದರೆ, ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗುವುದರೊಂದಿಗೆ ವ್ಯಕ್ತಿಯ ಜೀವವೇ ಹೋಗಬಹುದು.

ಆರೋಗ್ಯಕರ ಜೀವನಶೈಲಿ: ಶಸ್ತ್ರಚಿಕಿತ್ಸೆ ಮೂಲಕ ತೂಕ ಇಳಿಸಿಕೊಂಡವರು ಮತ್ತೆ ಅನಾರೋಗ್ಯಕ್ಕೀಡಾಗಿ ದೇಹದ ತೂಕದ ಜತೆಗೆ ಹಾಸಿಗೆ ಹಿಡಿಯುವ ಪರಿಸ್ಥಿತಿ ಎದುರಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಕೊಬ್ಬಿನ ಕೋಶಗಳನ್ನು ಶಾಶ್ವತ ವಾಗಿ ತೆಗೆದು ಹಾಕಿದ ಬಳಿಕ ದೇಹದ ಆಕಾರವನ್ನು ಬದಲಾಯಿಸುತ್ತದೆ. ಸುಮಾರು 3 ವಾರದಿಂದ 3 ತಿಂಗಳು ಗುಣಮುಖರಾಗಲು ಸಮಯದ ಅಗತ್ಯವಿದೆ. ಈ ವೇಳೆ ರೋಗಿಯು ಆರೋಗ್ಯಕರ ಜೀವನ ಶೈಲಿಯನ್ನು ನಡೆಸದಿದ್ದರೆ, ಉಳಿದ ಕೊಬ್ಬಿನ ಕೋಶ ಗಳು ದೊಡ್ಡದಾಗಿ ಬೆಳೆಯುವ ಅಪಾಯವಿದೆ. ಜೊತೆಗೆ ಸೋಂಕು, ಮರ ಗಟ್ಟುವಿಕೆ

ಮತ್ತು ಗುರುತು ಉಳಿದು ಕೊಳ್ಳುವುದು ಸೇರಿದಂತೆ ಕೆಲವು ಅಪಾಯಗಳಿವೆ. ನಿಯಮಿತ ಆರೋಗ್ಯಕರವಾದ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ಸೌಲಭ್ಯ ಬಗ್ಗೆ ಮಾಹಿತಿಯೇ ಇಲ್ಲ :  ಲಿಪೊಸಕ್ಷನ್‌ ಶಸ್ತ್ರಚಿಕಿತ್ಸೆಯಲ್ಲಿ ಕೊಬ್ಬಿನ ಕೋಶಗಳನ್ನು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ. ಇದು ದೇಹದ ಆಕಾರವನ್ನು ಬದಲಾಯಿಸುತ್ತದೆ. ಪ್ರಸ್ತುತ ನಗರದಲ್ಲಿನ ಕಾಸ್ಮೆಟಿಕ್‌ ಸರ್ಜರಿ ಕೇಂದ್ರಗಳಲ್ಲಿ ವ್ಯವಸ್ಥೆಗಳಿಲ್ಲದೆ ಇರುವುದು ಕಂಡು ಬರುತ್ತಿದೆ. ಕಾಸ್ಮೆಟಿಕ್‌ ಸರ್ಜರಿ, ಪ್ಲಾಸ್ಟಿಕ್‌ ಸರ್ಜರಿ ಕೇಂದ್ರಗಳಲ್ಲಿ ಅಂತಹ ಸೌಕರ್ಯಗಳಿವೆಯೇ ಎಂಬುದು ಜನರಿಗೆಮಾಹಿತಿಯೇ ಇಲ್ಲ. ಬೆಂಗಳೂರು ನಗರದಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸುವ ಆಸ್ಪತ್ರೆಗಳು ಮತ್ತುಕ್ಲಿನಿಕ್‌ಗಳು ತಲೆ ಎತ್ತಿ ನಿಂತಿವೆ. ಅವುಗಳಲ್ಲಿ ಏನೆಲ್ಲ ವ್ಯವಸ್ಥೆ, ಯಾರು ಶಸ್ತ್ರ ಚಿಕಿತ್ಸೆ ಮಾಡುತ್ತಾರೆ, ಆಸ್ಪತ್ರೆಯ ಅರ್ಹತೆಯುಳ್ಳ ವೈದ್ಯರು ಕಾರ್ಯಾಚರಣೆ, ಆಸ್ಪತ್ರೆಗಳು ಸೂಕ್ತ ಲೈಸೆನ್ಸ್ ಇದೆಯೋ ಅಥವಾ ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಸಾಕಷ್ಟು ಸೌಂದರ್ಯ ಶಸ್ತ್ರ ಚಿಕಿತ್ಸೆ ಮಾಡುವ ಕ್ಲಿನಿಕ್‌ ತಲೆ ಎತ್ತಿವೆ.

ಬುಲೆಟ್‌ ಪ್ರಕಾಶ್‌ ನಿಧನ : ಚಂದನವನದ ಹಾಸ್ಯ ನಟ ಬುಲೆಟ್‌ ಪ್ರಕಾಶ್‌(46) ಫ್ಯಾಟ್‌ ಸರ್ಜರಿಗೆ ಒಳಗಾಗಿದ್ದರು. 2018ರಲ್ಲಿ ತೂಕ ಹೆಚ್ಚಾಗಿದ್ದ ಕಾರಣ ನಟ ಪ್ರಕಾಶ್‌ ಫ್ಯಾಟ್‌ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ನಂತರ 35 ಕೆ.ಜಿ ತೂಕವನ್ನು ಇಳಿಸಿಕೊಂಡರು. ಅನಂತರದ ಕಿಡ್ನಿ ಹಾಗೂ ಲಿವರ್‌ ವೈಫ‌ಲ್ಯ ಅವರನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು. 2020 ಏಪ್ರಿಲ್‌ 6ರಂದು ಅನಾರೋಗ್ಯದಿಂದ ನಿಧನರಾದರು.

ಚೇತನಾ ರಾಜ್‌ :

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೀತಾ, ದೊರೆಸಾನಿ ಹಾಗು ಒಲವಿನ ನಿಲ್ದಾಣ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ಚೇತನಾ ರಾಜ್ (21) ಕೂಡ ಬೆಂಗಳೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಫ್ಯಾಟ್‌ ಸರ್ಜರಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿಯೇ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ಬೆಳಕಿಗೆ ಬಾರದವೆಷ್ಟೂ? :

ಕೇವಲ ಫ್ಯಾಟ್‌ ಸರ್ಜರಿ ಮಾತ್ರವಲ್ಲದೇ ಬೆಂಗಳೂರು ನಗರದಲ್ಲಿ ಕೂದಲು ಕಸಿ ಮಾಡಿಕೊಳ್ಳುವ ಸಂದರ್ಭದಲ್ಲಿ ಸಹ ಮೃತಪಟ್ಟಿರುವ ಪ್ರಕರಣಗಳಿವೆ. ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ. ಕಸಿ ಹಾಗೂ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಮೃತಪಟ್ಟಿರುವವರಲ್ಲಿ ಕೇವಲ ಚಿತ್ರ ರಂಗ ನಟ-ನಟಿಯರ ಪ್ರಕರಣಗಳಲ್ಲಿ ಮಾತ್ರ ಪ್ರಸ್ತುತ ಬೆಳಕಿಗೆ ಬರುತ್ತಿದೆ. ಜನಸಾಮಾನ್ಯರು, ಶಾಸ್ತ್ರ ಚಿಕಿತ್ಸೆಯ ಮೂರರಿಂದ 4 ತಿಂಗಳ ಬಳಿಕ ಮೃತಪಡುವ ಪ್ರಕರಣಗಳು ಇನ್ನೂ ಬೆಳಕಿಗೆ ಬಂದಿಲ್ಲ.

ಫ್ಯಾಟ್‌, ಲೀಪ್‌ ಸೇರಿದಂತೆ ಇತರೆ ಸರ್ಜರಿಗಳು ಶೇ.99ರಷ್ಟು ಜನರಿಗೆ ಹೊಂದಿಕೆಯಾಗುವುದಿಲ್ಲ. ಶೇ.1ರಷ್ಟು ಮಂದಿಗೆ ಮಾತ್ರ ಹೊಂದಿಕೆಯಾಗುತ್ತದೆ.2013ರಲ್ಲಿ ನಾನು ಸಾಕಷ್ಟು ಸ್ಲಿಮ್‌ ಇದ್ದರೂ, ಫ್ಯಾಟ್‌ಸರ್ಜರಿಗೆ ಒಳಗಾಗಿದ್ದೆ. ಇದಾದ ಬಳಿಕ ನನ್ನ ಆತ್ಮ ವಿಶ್ವಾಸ ಸಂಪೂರ್ಣವಾಗಿ ಕುಸಿತವಾಗಿತ್ತು. ನಂತರ ದಿನದಲ್ಲಿ ಇರುವುದರಲ್ಲಿ ಖುಷಿಪಟ್ಟೆ. ನಮ್ಮನ್ನು ನಾವು ಪ್ರೀತಿಸಿಕೊಂಡಾಗ ಇಡೀ ಜಗತ್ತು ನಮ್ಮಗೆ ಸುಂದರವಾಗಿ ಕಾಣುತ್ತದೆ. – ನೀತು , ಚಲನಚಿತ್ರ ನಟಿ

ಶಸ್ತ್ರಚಿಕಿತ್ಸೆಗೆ ಬೇಕಾಗುವ ಸಲಕರಣೆ ಮತ್ತು ಸೌಕರ್ಯಗಳನ್ನು ಆಸ್ಪತ್ರೆ ಅಥವಾ ಕ್ಲಿನಿಕ್‌ ಹೊಂದಿರಬೇಕು. ಡೆರ್ಮಾಟೋಲೊಜಿಸ್ಟ್ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರೆ ಅರಿವಳಿಕೆ ಹಾಗೂ ಪ್ಲಾಸ್ಟಿಕ್‌ ಸರ್ಜನ್‌ ಉಪಸ್ಥಿತರಿಬೇಕು. ಗುಣಮುಖರಾಗಲು ಮೂರು ವಾರದಿಂದ 3 ತಿಂಗಳು ಅಗತ್ಯವಿದೆ. ಈ ವೇಳೆ ರೋಗಿಯು ಆರೋಗ್ಯಕರ ಜೀವನಶೈಲಿಯನ್ನು ನಡೆಸದಿದ್ದರೆ, ಉಳಿದ ಕೊಬ್ಬಿನ ಕೋಶಗಳು ದೊಡ್ಡದಾಗಿ ಬೆಳೆಯುವ ಅಪಾಯವಿದೆ.– ಡಾ| ಭವ್ಯಶ್ರೀ, ಡೆರ್ಮಾಟೋಲೊಜಿಸ್ಟ್ ಸರ್ಜನ್‌, ಬೆಂಗಳೂರು

 

– ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.