ನೀರಿನ ಕೊರತೆಯಿಂದ ಆಹಾರಕ್ಕೆ ಕೊಕ್ಕರೆಗಳ ಪರದಾಟ

Team Udayavani, May 23, 2022, 3:44 PM IST

ನೀರಿನ ಕೊರತೆಯಿಂದ ಆಹಾರಕ್ಕೆ ಕೊಕ್ಕರೆಗಳ ಪರದಾಟ

ದೇವನಹಳ್ಳಿ: ತಾಲೂಕಿನ ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಕೆರೆಯಾದ ಬನ್ನಿಮಂಗಲ ಕೆರೆಯಲ್ಲಿ ಕೊಕ್ಕರೆಗಳ ಕಲರವದ ದೃಶ್ಯ ನೋಡಬಹುದಾಗಿದೆ. ಮಳೆಯಿಂದಾಗಿ ಕೆರೆಯ

ತಳಭಾಗದಲ್ಲಿ ಒಂದಿಷ್ಟು ನೀರಿನಲ್ಲಿ ಮೀನುಗಾರಿಕೆ ಇಲಾಖೆಯವರು ಮೀನುಮರಿಗಳನ್ನು ಟೆಂಡರ್‌ ಮೂಲಕ ಬಿಡಲಾಗಿದೆ. ಮೀನುಗಳನ್ನು ತಿಂದು ಬದುಕುವಂತಹ ಕೊಕ್ಕರೆಗಳಿಗೆ ಮತ್ತು ಮೀನುಗಳಿಗೆ ಕೆರೆಯಲ್ಲಿರಬೇಕಾದಷ್ಟು ನೀರು ಇಲ್ಲದಿರುವುದು ವಿಪರ್ಯಾಸವಾಗಿದೆ.

ಪಕ್ಷಿಗಳ ಕಲರವದಿಂದ ಹೊಸ ಕಳೆ: ಬನ್ನಿಮಂಗಲ ಕೆರೆಯಲ್ಲಿ ದಕ್ಷಿಣ ಭಾರತದ ಕೊಕ್ಕರೆ ಪ್ರಭೇದಗಳ ಅವಾಸಸ್ಥಾನವಾಗಿರುವುದರಿಂದ ಸಾಮಾನ್ಯವಾಗಿ ಇಲ್ಲಿಗೆ ಮಧ್ಯ ಏಷ್ಯಾದ ಗ್ರೇಹೆರಾನ್‌, ವೈಟ್‌ ಪೆಲಿಕಾನ್‌, ಗ್ರೇವೆಲಿಕಾನ್‌, ಪೈಂಟೆಂಡ್‌ ಸ್ಟ್ರಾಕ್‌ ಇತ್ರೆ ಹೊಸ ಪ್ರಭೇದಗಳ ಪಕ್ಷಿಗಳು ಬಂದು ಕೆರೆಗೆ ಮತ್ತಷ್ಟು ಮೆರಗು ನೀಡಲಿವೆ. ಸರ್ಕಾರ ಇಂತಹ ಕೆರೆಗಳಿಗೆ ಮೊದಲ ಆದ್ಯತೆ ನೀಡಿದರೆ, ಇಲ್ಲಿನ ವಾತಾವರಣ ಕೊಕ್ಕರೆ ಬೆಳ್ಳೂರಿನಂತೆ ಕಂಗೊಳಿಸುವಲ್ಲಿ ಎರಡು ಮಾತಿಲ್ಲ.

ಸಾಮಾನ್ಯವಾಗಿ ಪೆಲಿಕಾನ್‌ ಪಕ್ಷಿಗಳು ಹೆಚ್ಚಿನ ನೀರಿರುವ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಪ್ರಸ್ತತ ತಾಲೂಕಿನ ಬನ್ನಿಮಂಗಲ ಕೆರೆಯಲ್ಲಿ ಹೆಚ್ಚು ನೀರು ಇಲ್ಲದಿದ್ದರೂ ಸಹ ಇರುವ ನೀರಿನಲ್ಲಿ ಮೀನುಗಳಿರುವುದರಿಂದ ಆಹಾರಕ್ಕಾಗಿ ಪಕ್ಷಿಗಳು ಬೆಳ್ಳಂಬೆಳಗ್ಗೆ ಗುಂಪು ಗುಂಪಾಗಿರುವುದನ್ನು ಕಾಣಬಹುದು.

ಅಂತರ್ಜಲ ಹೆಚ್ಚಿಸಿ: ಕೆರೆಯು ಸುಮಾರು ಎಕರೆಯಷ್ಟು ವಿಸ್ತೀರ್ಣ ಹೊಂದಿರುವುದರಿಂದ ಈ ಹಿಂದೆ ಸರ್ಕಾರದ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಬಿಡಲು ಪ್ರಸ್ತಾಪಿಸಲಾಗಿತ್ತು. ದುರದೃಷ್ಟವಷತ್‌ ಕೆರೆಗೆ ಪೈಪ್‌ಲೇನ್‌ ಸಹ ಆಗಿಲ್ಲ. ಬನ್ನಿಮಂಗಲದ ಕೆರೆಯಲ್ಲಿ ತಮಿಳು ಗ್ರಂಥಲಿಪಿ ಶಾಸನವೂ ಸಹ ಇದ್ದು, ಕೆರೆಗೆನೀರು ಹಾಯಿಸಿದರೆ ಅಂತರ್ಜಲ ಹೆಚ್ಚಾಗಿ ಈ ಭಾಗದಲ್ಲಿ ಹಚ್ಚ ಹಸಿರಿನ ಸಮೃದ್ಧ ವಾತಾವರಣಸೃಷ್ಟಿಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ನೀರಿನ ಕೊರತೆಯಲ್ಲೂ ಆಹಾರ ಅರೆಸಿ ಬರುವಂತಹ ಕೊಕ್ಕರೆಗಳು ಕೆರೆಯಂಗಳದಲ್ಲಿಬಿಡಾರಹೂಡಿದ್ದು ನೋಡುಗರ ಕಣ್ಮನಸೆಳೆಯುತ್ತಿವೆ. ಕೆರೆಗೆ ಮರುಜೀವ ನೀಡಲು ಸರ್ಕಾರ

ಮುಂದಾಗಲಿ: ಬಿರು ಬೇಸಿಗೆಯಲ್ಲಿ ಬತ್ತಿಹೋಗುವ ಕೆರೆಗೆ ಮರುಜೀವ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಕೆರೆ ಅಭಿವೃದ್ಧಿಪಡಿಸಿ ವರ್ಷ ಕಳೆಯುತ್ತಿದ್ದರೂ ಸಹ ಕೆರೆಯ ಮಡಿಲು ಮಾತ್ರಬರಿದಾಗಿದೆ. ಕಳೆದ ವರ್ಷದಲ್ಲಂತೂ ಕೆರೆಯಲ್ಲಿಒಂದು ತೊಟ್ಟು ನೀರು ಸಹ ಇರಲಿಲ್ಲ. ಇದೀಗ ಮಳೆಯಿಂದಾಗಿ ಅಲ್ಪಸ್ವಲ್ಪ ನೀರು ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶವಾಗಿರುವ ದೊಡ್ಡಬಳ್ಳಾಪುರತಾಲೂಕಿನ ಗಡಿಯಂಚಿನಲ್ಲಿರುವ ಈ ಕೆರೆಯೂದೊಡ್ಡಬಳ್ಳಾಪುರದಿಂದ ಸುಮಾರು 10 ಕಿ.ಮೀ.ದೂರದಲ್ಲಿದೆ. ಆಲೂರುದುದ್ದನಹಳ್ಳಿ ಗ್ರಾಪಂಗೆಸೇರಿರುವ ಕೆರೆಗೆ ಮರುಜೀವ ನೀಡುವ ಕೈಂಕರ್ಯಕ್ಕೆ ಸರ್ಕಾರ ಮುಂದಾಗಬೇಕಾಗಿದೆ.

ಬಿರು ಬೇಸಿಗೆಯಲ್ಲಿ ಪಕ್ಷಿ ಪ್ರಭೇದಗಳಿಗೆ ಕೆರೆ, ಕುಂಟೆ ಮತ್ತು ಇತರೆ ನೀರಿನ ಮೂಲಗಳೇ ಜೀವಾಳ. ಆದರೆ, ಬನ್ನಿಮಂಗಲ ಕೆರೆಯಲ್ಲಿ ನೀರಿಲ್ಲದೆ ಬರಿದಾಗುತ್ತಿರುವುದು ಪಕ್ಷಿಗಳ ಅವನತಿಗೆ ಮತ್ತು ಕೆರೆಯ ನಿರ್ಲಕ್ಷ್ಯತನಕ್ಕೆ ಕೈಗನ್ನಡಿಯಾಗಿದೆ. – ಮೀನಾಕುಮಾರಿ, ಗ್ರಾಪಂ ಸದಸ್ಯೆ, ಆಲೂರುದುದ್ದನಹಳ್ಳಿ

ನೀರಿನ ಕೊರತೆಯಲ್ಲೂ ಮುಂಜಾನೆಯಲ್ಲಿ ಪಕ್ಷಿಗಳ ಕಲರವನ್ನು ಕೆರೆಯಲ್ಲಿ ನೋಡಬಹುದು. ಸರ್ಕಾರದ ನಿರ್ಲಕ್ಷ್ಯದಿಂದಕೆರೆಗೆ ನೀರು ಬಂದಿಲ್ಲ. ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬನ್ನಿ ಮಂಗಲ ಕೆರೆಯೂ ದೊಡ್ಡಕೆರೆಯಾಗಿರುವು ದರಿಂದ ಈ ಕೆರೆಗೆ ಆದಷ್ಟು ಬೇಗ ನೀರು ತುಂಬಿಸಲು ಸರ್ಕಾರ ಮನಸ್ಸು ಮಾಡಬೇಕು. – ಆರ್‌.ರಘು, ಗ್ರಾಪಂ ಸದಸ್ಯ, ಆಲೂರುದುದ್ದನಹಳ್ಳಿ

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.