ಫ್ರಾನ್ಸ್ ನಲ್ಲಿ ಚಿನ್ನ ಗೆದ್ದ ಪ್ರೇರಣಾಗೆ ಶಿರಸಿಯಲ್ಲಿ ನಾಗರಿಕ ಸಮ್ಮಾನ
ಈ ಸಾಧನೆಗೆ ತೃಪ್ತಿ ಪಡಬಾರದು, ಒಲಿಂಪಿಕ್ ಸಾಧನೆ ಆಗಬೇಕು: ಸ್ಪೀಕರ್ ಕಾಗೇರಿ
Team Udayavani, May 23, 2022, 6:52 PM IST
ಶಿರಸಿ: ಫ್ರಾನ್ಸ್ ದೇಶದ ನಾರ್ಮುಂಡಿಯಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬಂಗಾರ ಪದಕ ವಿಜೇತ ಪ್ರೇರಣಾ ನಂದಕುಮಾರ ಶೇಟ್ ಗೆ ನಗರದ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಾಗರಿಕ ಸಮ್ಮಾನ ಮಾಡಲಾಯಿತು.
ನಾಗರಿಕ ಸಮ್ಮಾನ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ, ಜಿಲ್ಲೆಯ ಹೆಮ್ಮೆ ಅಭಿಮಾನ ಪಡೆಯುವ ಸಾಧನೆ ಆಗುತ್ತಿದೆ. ಪ್ರೇರಣಾ ಸಾಧನೆ ಆ ಸಾಲಿನಲ್ಲಿ ಸೇರಿದೆ. ಈ ಸಾಧನೆಗೆ ತೃಪ್ತಿ ಪಡೆಯದೇ ಮುಂದೆ ಹೋಗಬೇಕು. ಒಲಿಂಪಿಕ್ ಸಾಧನೆ ಆಗಬೇಕು. ಸಂತೋಷ ಪಡಬೇಕು, ಆದರೆ ತೃಪ್ತಿ ಪಡಬಾರದು. ಗುರಿ ತಲುಪುವ ತನಕ ನಿರಂತರ ಮುನ್ನಡೆಯಬೇಕು. ಸರಕಾರದಿಂದ ಎರಡು ಲ.ರೂ. ಪ್ರೋತ್ಸಾಹ ಕೊಡಲಾಗುತ್ತದೆ. ಕಾಲೇಜಿನ ಓದಿನ ವೆಚ್ಚ ಕೂಡ ಭರಿಸುತ್ತದೆ. ಅಮೃತ ಕ್ರೀಡಾದತ್ತು ಯೋಜನೆಯಲ್ಲಿ ಒಲಿಂಪಿಕ್ ಸಿದ್ದತೆಗೆ 75 ಕ್ರೀಡಾಳುಗಳಲ್ಲಿ ಪ್ರೇರಣಾಳನ್ನೂ ಆಯ್ಕೆ ಮಾಡಲಾಗುತ್ತದೆ ಎಂದರು.
ಲಯನ್ ರವಿ ಹೂವಿನಮನೆ, ಸಾಧನೆ ಮಾಡುವದರ ಜೊತೆ ನಿರಂತರ ಉಳಿಸಿಕೊಳ್ಳುವ ಕಾರ್ಯ ಕೂಡ ಆಗಬೇಕು ಎಂದರು.ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್ ವಿಜಿ ಭಟ್ ಮಾತನಾಡಿ, ಪ್ರೇರಣಾ ರಾಷ್ಟ್ರದ ಕೀರ್ತಿ ಬೆಳಗಲಿ ಎಂದರು.
ಡಿವೈಎಸ್ಪಿ ರವಿ ನಾಯಕ, ಬಿಇಓ ಎಂ.ಎಸ್.ಹೆಗಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಲಯನ್ಸ್ ಅಧ್ಯಕ್ಷ ಉದಯ ಸ್ವಾದಿ, ಲಯನ್ಸ್ ಗೌರವಾಧ್ಯಕ್ಷ ರವಿ ನಾಯಕ, ನಂದಕುಮಾರ ಶೇಟ್, ಸ್ವಾತಿ ಶೇಟ್, ಗುರುರಾಜ ಹೆಗಡೆ, ಮನಿಷ್ ಇತರರು ಇದ್ದರು.
ಸೀತಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಸ್ವಾಗತಿಸಿದರು. ವಿ.ಎಂ.ಭಟ್ಟ ನಿರ್ವಹಿಸಿದರು. ವಿನಯ ಬಸವನಕಟ್ಟೆ ವಂದಿಸಿದರು. ನಗರದ ಪ್ರಮುಖ ಸಂಘಟನೆಗಳು ಚಿನ್ನದ ಹುಡುಗಿಯನ್ನು ಅಭಿನಂದಿಸಿದರು. ಫ್ರಾನ್ಸ್ ನಿಂದ ಶಿರಸಿಗೆ ಆಗಮಿಸಿದ ಪ್ರೇರಣಾಳನ್ನು ನಿಲೆಕಣಿಯಿಂದ ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.