ಜಾನಪದ ಕಲೆಗಳು ದೇಶಿಯ ಸಂಸ್ಕೃತಿ ಪ್ರತೀಕ: ಶೇರಿ
Team Udayavani, May 24, 2022, 11:05 AM IST
ಆಳಂದ: ಈ ನಾಡಿನ ಅಸಂಖ್ಯಾತ ಜಾನಪದ ಕಲೆಗಳು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಣಮಂತ ಶೇರಿ ಅಭಿಪ್ರಾಯಪಟ್ಟರು.
ಗಡಿಗ್ರಾಮ ತುಗಾಂವನಲ್ಲಿ ಸೋಮವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಅಕುಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವೆಲ್ಫೆರ್ ಚಾರಿಟೇಬಲ್ ಟ್ರಸ್ಟ್ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಗಡಿನಾಡು ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳಿಗೆ, ಕಲಾವಿದರಿಗೆ ಸಾವಿಲ್ಲ. ಜಾನಪದ ಕಲಾವಿದರು ವಂಶಪಾರಂಪರ್ಯವಾಗಿ ತಮ್ಮ ಆತ್ಮಸಂತೃಪ್ತಿಗಾಗಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ದೇಶ ನಾಡಿನಲ್ಲಿ ಹಲವು ಭಾಷೆ, ಧರ್ಮ, ಮತ, ಪಂಥಗಳ ನಡುವೆ ಗ್ರಾಮೀಣ ಕಲಾವಿದರು ಇಂದಿಗೂ ವಿಭಿನ್ನವಾದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಈ ಜಾನಪದ ಕಲೆಗೆ ಆಧುನಿಕ ಸ್ಪರ್ಶದ ಅಗತ್ಯವಿದೆ. ಇಂಥ ಕಾರ್ಯಕ್ರಮ ಮೂಲಕ ಕಲೆ, ಕಲಾವಿದರ ಮೇಲೆ ಬೆಳಕು ಚೆಲ್ಲುವಂತಾಗಿದೆ ಎಂದರು.
ಪ್ರಕಾಶ ಢೋಲೆ ಗಡಿಭಾಗದಲ್ಲಿ ಕನ್ನಡದ ಸ್ಥಿತಿಗತಿ ಕುರಿತು, ಧೂಳಪ್ಪ ದ್ಯಾಮನಕರ ಗಡಿಭಾಗದ ಜಾನಪದ ಸಂಸ್ಕೃತಿ ಕುರಿತು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶ್ರುತಿ ಬಿರಾದಾರ ಶ್ರೀಹರ್ಷಾ ಅಧ್ಯಕ್ಷತೆ ವಹಿಸಿದ್ದರು. ಜಾವಳಿಯ ವೀರಭದ್ರ ಖೂನೆ, ಪ್ರಕಾಶ ಕಟಕೆ, ವೈಶಾಲಿ ಕಾಂಬಳೆ, ಅರುಣ ಯಾದವ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ತುಗಾಂವ, ಅಣೂರ, ಹೊದಲೂರಿನ ಜಾನಪದ ಕಲಾ ತಂಡಗಳು ಕಲೆಯನ್ನು ಪ್ರಸ್ತುತಪಡಿಸಿದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.