ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ
ಚೀನಾದಂತಹ ಅತೀ ದೊಡ್ಡ ದೇಶ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ.
Team Udayavani, May 24, 2022, 5:09 PM IST
ಟೋಕಿಯೋ: ಕೋವಿಡ್ 19 ಸೋಂಕು ರೋಗವನ್ನು ಪ್ರಧಾನ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ರೀತಿಯಲ್ಲಿ ಯಶಸ್ವಿಯಾಗಿ ನಿಭಾಯಿಸಿರುವುದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶ್ಲಾಘಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್
ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಎರಡು ದಿನಗಳ ಕ್ವಾಡ್ ಶೃಂಗ ಸಭೆಯ ಮುಕ್ತಾಯಗೊಂಡಿದ್ದು, ಈ ಸಂದರ್ಭದಲ್ಲಿ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಕ್ರಮವನ್ನು ಹೊಗಳಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.
ಪ್ರಧಾನಿ ಮೋದಿ ಅವರ ಯಶಸ್ಸು ಪ್ರಜಾಪ್ರಭುತ್ವ ನೀಡಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ಚೀನಾ ಮತ್ತು ರಷ್ಯಾದಂತಹ ನಿರಂಕುಶಾಧಿಕಾರಿಗಳು ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಲ್ಲೆವು ಎಂಬ ಸುಳ್ಳು ಕೂಡಾ ಬಯಲಾಗಿದೆ ಎಂದು ಜೋ ಬೈಡೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾದಂತಹ ಅತೀ ದೊಡ್ಡ ದೇಶ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಭಾರತ ಯಶಸ್ಸು ಕಂಡಿದೆ. ರಷ್ಯಾ ಕೂಡಾ ದೊಡ್ಡ ದೇಶವಾಗಿದ್ದರೂ ಕೂಡಾ ತಮ್ಮ ನಿರಂಕುಶಾಧಿಕಾರದಿಂದ ಜನರ ದಿಕ್ಕು ತಪ್ಪಿಸಿದೆ ಎಂದು ಬೈಡೆನ್ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಲಸಿಕೆಯನ್ನು ಸಿದ್ದಪಡಿಸಿ ಇತರ ದೇಶಗಳಿಗೆ ಸರಬರಾಜು ಮಾಡಿರುವುದು ಕೂಡಾ ಭಾರತದ ಹೆಗ್ಗಳಿಕೆಯಾಗಿದೆ. ಇದು ಭಾರತದ ಯಶಸ್ಸಿಗೆ ಕಾರಣ ಎಂದು ಆಸ್ಟ್ರೇಲಿಯಾದ ನಿಯೋಜಿತ ನೂತನ ಪ್ರಧಾನಿ ಆ್ಯಂಟೊನಿ ಅಲ್ಬನೀಸ್ ಕೂಡಾ ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.