ದುಡಿಮೆಯ ಒಂದು ಭಾಗ ಧರ್ಮ ರಕ್ಷ ಣೆಗೆ ಮೀಸಲಿಡಿ
ವಿರಾಟ್ ಹಿಂದೂ ಸಮಾಜೋತ್ಸವ-ಹಿಂದೂ ರಾಷ್ಟ್ರ ಉದಯೋತ್ಸವದಲ್ಲಿ ವಾಗ್ಮಿ ಚೈತ್ರಾ ಕುಂದಾಪುರ ಕರೆ
Team Udayavani, May 24, 2022, 5:45 PM IST
ಆನವಟ್ಟಿ: ಯುವಕರು ದುಡಿಮೆಯ ಬದುಕಿನ ಒಂದು ಭಾಗವನ್ನು ದರ್ಮ ರಕ್ಷಣೆಗಾಗಿ ಮೀಸಲಿಡಬೇಕು. ಇಲ್ಲವಾದರೆ ಜ್ಞಾನವಾಪಿ ಎಂಬ ಮಸೀದಿಯಲ್ಲಿರುವ ಶಿವಲಿಂಗಕ್ಕೆ ಬಂದ ಪರಿಸ್ಥಿತಿ ಮುಂದೆ ನಿಮ್ಮೂರಿನ ದೇವಸ್ಥಾನದಲ್ಲಿರುವ ಶಿವನಿಗೂ ಬರಬಹುದು. ಹಿಂದೂಗಳ ರಕ್ಷಣೆಗಾಗಿ ಹಿಂದೂ ಸಮಾಜ ಸಂಘಟಿತವಾಗಬೇಕು ಎಂದು ಖ್ಯಾತ ವಾಗ್ಮಿ ಚೈತ್ರಾ ಕುಂದಾಪುರ ಕರೆ ನೀಡಿದರು.
ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾವೇಶದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಶ್ಮೀರ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಹಿಂದೂಗಳ ಹತ್ಯೆಯಾಗಿದೆ. ನಮಗೇನೂ ನಮ್ಮಲ್ಲಿ ಅಂತಹದ್ದು ಇಲ್ಲ ಎಂದು ಹಿಂದೂಗಳು ಸುಮ್ಮನೆ ಇರದೆ ಎಲ್ಲಾ ಹಿಂದೂ ಸಮಾಜದವರು ಎಚ್ಚೆತ್ತು ಸಂಘಟಿತರಾಗುವ ಅವಶ್ಯಕತೆ ಇದೆ ಎಂದರು.
ಬೈಬಲ್ ಪುಸ್ತಕ ಹಿಡಿದು ಶಾಂತಿದೂತರು ಎಂದು ಹೇಳಿ, ಬಡತನವನ್ನು ಮತಾಂತರಕ್ಕೆ ಬಳಸಿಕೊಳ್ಳುವ ಕ್ರೈಸ್ತ ಮಿಶನರಿಗಳ ಬಗ್ಗೆ ಎಚ್ಚರವಿರಲಿ. ತುಳಸಿ, ಆಲದಮರಕ್ಕೆ ಪೂಜಾ ಭಾವನೆಯಿಂದ ಪೂಜೆ ಮಾಡುವುದನ್ನು ಮೌಡ್ಯ ಎಂದು ಕರೆಯುವ ಅವರಿಗೆ ಇದರಲ್ಲಿ ವಿಜ್ಞಾನ ಅಡಗಿದೆ ಎಂಬ ಸತ್ಯ ಗೊತ್ತಿಲ್ಲ. ಕ್ರಿಸ್‌ಮಸ್ ಹಬ್ಬಕ್ಕೆ ಗಿಡವನ್ನು ತೆಗೆದು ಕತ್ತರಿಸಿ ತಂದು ಕ್ರಿಸ್‌ಮಸ್ ಟ್ರೀ ಎಂದು ತೋರಿಸುವುದು ಮೌಡ್ಯವಲ್ಲವೇ ಎಂದು ಪ್ರಶ್ನಿಸಿದರು.
ಕೋರ್ಟ್ ಹಿಜಾಬ್ ತೀರ್ಪು ನೀಡಿದಾಗ ಹಿಂದೂ ವಿರೋಧಿ ಸಂಘಟನೆಯವರು ನ್ಯಾಯಾಧಿಧೀಶರನ್ನೇ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುವುದನ್ನು ನೋಡಿದರೆ ನಾವು ಹಿಂದೂಗಳು ಸಂಘಟಿತರಾಗಬೇಕಾದ ಅಗತ್ಯ ಕಂಡು ಬರುತ್ತದೆ. ಕ್ರೈಸ್ತ ಮಿಶನರಿಗಳ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ಮಕ್ಕಳಿಗೆ ಕುಂಕುಮ, ಬಳೆ, ವಿಭೂತಿ ಹಚ್ಚಬಾರದು ಎಂಬ ನಿಯಮವಿದೆ. ಇಂತಹ ಶಾಲೆಗಳಿಗೆ ನಮ್ಮ ಮಕ್ಕಳನ್ನು ಏಕೆ ಕಳಿಸಬೇಕು. ಹಿಂದೂ ಮಕ್ಕಳಿಗೆ ನಮ್ಮ ಸಂಪ್ರಾದಾಯ, ಆಚಾರ-ವಿಚಾರ ಕಲಿಸಬೇಕು. ಬಸವಣ್ಣರ ಆದಿಯಾಗಿ ಶರಣರ ವಚನ ಸಾಹಿತ್ಯ ಪಠಿಸಬೇಕು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮಕ್ಕಳಿಗೆ ಕಲಿಸುವಂತಹ ಶಿಕ್ಷಣ ಬೇಕು ಎಂದರು.
ಮಕ್ಕಳಿಗೆ ಕಲಿಸುವುದಾದರೆ ಮಯೂರ ವರ್ಮನ ಇತಿಹಾಸ, ಹುಲಿಯನ್ನು ಸೀಳಿ ಹೊಯ್ಸಳ ಸಾಮ್ರಾಜ್ಯ ಕಟ್ಟಿದ ಹೊಯ್ಸಳನ ಸಾಹಸದ ಬಗ್ಗೆ ಕಲಿಸಬೇಕು. ಅದನ್ನು ಬಿಟ್ಟು ಯಾರೋ ಪೈಂಟಿಂಗ್ ಚಿತ್ರದಲ್ಲಿ ಹುಲಿ ಹಿಡಿದುಕೊಂಡ ತಕ್ಷಣ ಮೈಸೂರು ಹುಲಿಯಾಗುವುದಿಲ್ಲ. ಅಂತಹ ಇತಿಹಾಸ ಮಕ್ಕಳಿಗೆ ಕಲಿಸುವುದಲ್ಲ ಎಂದರು. ಮುಸ್ಲಿಂ ದಾಳಿಕೋರರು ನಮ್ಮ ಮಂದಿರ, ದೇವಸ್ಥಾನಗಳನ್ನು ನಾಶ ಮಾಡಿ ಮಸೀದಿಗಳನ್ನು ಕಟ್ಟಿದ್ದಾರೆ. ಅವುಗಳನ್ನು ಕಳೆದುಕೊಂಡಾಗ ನಮ್ಮ ಹಿರಿಯರು ಅನುಭವಿಸಿದ ನೋವು, ಸಂಕಟ ನಮ್ಮ ಮುಂದಿನ ಪೀಳಿಗೆಗೆ ಬರಬಾರದು. ಆದ್ದರಿಂದ ಹಿಂದೂಗಳಾದ ನಾವು ಒಂದಾಗಬೇಕಾಗಿದೆ ಎಂದರು.
ಡಿಜೆಗೆ ಅವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ
ಆನವಟ್ಟಿ ಸಮೀಪದ ಕೋಟಿಪುರ ಗ್ರಾಮದಿಂದ ಗ್ರಾಮದ ಕೆ.ಪಿ.ಎಸ್. ಶಾಲೆಯವರೆಗೂ ಡಿಜೆಯೊಂದಿಗೆ ಬಾನುವಾರ ಮೆರವಣಿಗೆಯನ್ನು ಆನವಟ್ಟಿ ಹಿಂದೂ ಸಭಾ ಕಾರ್ಯಕರ್ತರು ಹಮ್ಮಿಕೊಂಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಡಿಜೆಗೆ ಅನುಮತಿ ನೀಡದೆ ತೆರವುಗೊಳಿಸಲಾಯಿತು. ಡಿ.ಜೆ ಅನುಮತಿ ನೀಡುವಂತೆ ಹಿಂದೂ ಸಭಾ ಕಾರ್ಯಕರ್ತರು ಸ್ಥಳದಲ್ಲಿಯೇ ಸುಮಾರು 45 ನಿಮಿಷಗಳ ಕಾಲ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು, ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಇದನ್ನರಿತ ಸಿ.ಪಿ.ಐ., ಪಿ.ಎಸ್.ಐ. ಅವರು ಪ್ರತಿಭಟನಾಕಾರರ ಮನವೊಲಿಸಿ ಡಿ.ಜೆ ಬದಲಾಗಿ ಕಡಿಮೆ ಸೌಂಡ್ ಬಳಸಿ ಮೆರವಣಿಗೆ ನಡೆಸಲು ಸಲಹೆ ನೀಡಿದರು.
ನಂತರ ಕೋಟಿಪುರದಿಂದ ಪ್ರಾರಂಭವಾದ ಹಿಂದೂ ಸಮಾವೇಶದ ಬೃಹತ್ ಶೋಭಾಯಾತ್ರೆಯು ಆನವಟ್ಟಿಯ ಪಬ್ಲಿಕ್ ಶಾಲೆಯವರೆಗೆ ಅದ್ಧೂರಿಯಾಗಿ ನಡೆಯಿತು. ಶೋಭಾಯಾತ್ರೆಯಲ್ಲಿ ಆನವಟ್ಟಿಯ ಅಕ್ಕಪಕ್ಕದ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೇಸರಿ ಶಾಲು ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುತ್ತ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
Anandapur: ತೋಟಕ್ಕೆ ಕಾಡಾನೆ ಹಾವಳಿ… ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.