ದೇವನಹಳ್ಳಿ; 27ರಿಂದ ಮಾವು ಮೇಳ ಆಯೋಜನೆ

ಬೆಳೆಗಾರರು ಹಾಗೂ ಗ್ರಾಹಕರು ಮೇಳದ ಪ್ರಯೋಜನ ಪಡೆಯಬೇಕು.

Team Udayavani, May 24, 2022, 5:46 PM IST

ದೇವನಹಳ್ಳಿ; 27ರಿಂದ ಮಾವು ಮೇಳ ಆಯೋಜನೆ

ದೇವನಹಳ್ಳಿ: ಜಿಲ್ಲಾಡಳಿತ ದೇವನಹಳ್ಳಿ ತಾಲೂಕಿಗೆ ಸ್ಥಳಾಂತರಗೊಂಡ ಬಳಿಕ ರೈತರಿಂದ ನೇರವಾಗಿ ಗ್ರಾಹಕರಿಗೆ ನೈಸರ್ಗಿಕವಾದ ಮಾಗಿದ ಮಾವಿನ ಹಣ್ಣನ್ನು
ತಲುಪಿಸುವ ಉದ್ದೇಶದಿಂದ ಎರಡನೇ ಬಾರಿಗೆ ಮಾವು ಮೇಳ ಹಮ್ಮಿಕೊಂಡಿದ್ದು, ಮಾವು ಬೆಳೆಗಾರರ ಸಂಕಷ್ಟಕ್ಕೆ ಅನುಕೂಲ ಆಗುವ ದೃಷ್ಟಿಯಿಂದ ಹಾಗೂ ಗ್ರಾಹಕರಿಗೆ ನೇರವಾಗಿ ರೈತರಿಂದಲೇ ಸ್ವಾದಿಷ್ಟಭರಿತ ಮಾವಿನ ಹಣ್ಣು ಒದಗಿಸುವ ನಿಟ್ಟಿನಲ್ಲಿ ಮೇಳವನ್ನು ಆಯೋಜಿಸಿದೆ.

ಪಟ್ಟಣದ ರಾಣಿ ಸರ್ಕಲ್‌ ಸಮೀಪದಲ್ಲಿರುವ ನಂದಿ ಉಪಚಾರ ಹೋಟೆಲ್‌ ಹತ್ತಿರ ಮಾವು ಮೇಳ ಆಯೋಜಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಬೆಂಗ ಳೂರಿನ ಲಾಲ್‌ಬಾಗ್‌ನಲ್ಲಿ ಮೇ 27ರಿಂದ ಮಾವು ಹಾಗೂ ಹಲಸು ಮೇಳ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ನಡೆಸಲು ನಿರ್ಧರಿಸಲಾಗಿದೆ.

ಮೇಳದಿಂದ ರೈತರಿಗೆ ಸಹಕಾರಿ: ಕೊರೊನಾದಿಂದ ಮಾವು ಬೇಡಿಕೆ ಕಳೆದುಕೊಂಡಿದ್ದು ಈ ವರ್ಷ ಮಳೆಯಿಂದ ಫ‌ಸಲು ಇಳಿಮುಖವಾಗಿದೆ. ಮತ್ತಷ್ಟು ನಷ್ಟವಾಗುತ್ತಿದೆ. ಮೇ 27ರಿಂದ 29ರವರೆಗೆ ನಡೆಯುವ ಮಾವು ಮೇಳಕ್ಕೆ ಜಿಲ್ಲಾದ್ಯಂತ ಇಪ್ಪತ್ತು ಮಂದಿ ಮಾವು ಬೆಳೆಗಾರರು ನೋಂದಾಯಿಸಿಕೊಂಡಿ ದ್ದಾರೆ. ತೋಟಗಾರಿಕೆ ಇಲಾಖೆ ಮಾವು ಮೇಳದಲ್ಲಿ ಹೆಚ್ಚಿನ ವಹಿವಾಟು ಆಗುವ ನಿರೀಕ್ಷೆಯಲ್ಲಿದ್ದಾರೆ.

ನೈಸರ್ಗಿಕ ಗುಣಮಟ್ಟದ ಮಾವಿನ ಹಣ್ಣಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳದಿಂದ ಸಹಕಾರಿ ಆಗಲಿದೆ. ಮಧ್ಯ ವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಮಾವು ಮೇಳ ಆಯೋಜಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬೆಳೆಗಾರರು ಹಾಗೂ ಗ್ರಾಹಕರು ಮೇಳದ ಪ್ರಯೋಜನ ಪಡೆಯಬೇಕು. ಮಲ್ಲಿಕಾ, ಬಾದಾಮಿ, ರಸಪೂರಿ, ಸೇಂದೂರ, ತೋತಾಪುರಿ, ಅಮೂಲ್‌, ದಸರಿ, ಬೇಗಂಪಲ್ಲಿ ಸೇರಿದಂತೆ ನಾನಾ ವೈವಿದ್ಯಮಯ ಹಣ್ಣುಗಳು ಒಂದೇ ಸೂರಿನಡಿ ಸಿಗುವುದು. ಮಾವಿನ ಹಣ್ಣುಗಳು ಮೇಳದಲ್ಲಿ ಮೇಳೈಸಲಿದೆ. ಮೇಳದಲ್ಲಿ ಮಾವು ಮಾರಾಟ ಮಾಡಲು ಇಚ್ಚಿಸುವ ರೈತರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ರಿಯಾಯಿತಿ ದರದಲ್ಲಿ ಸಸಿ ಮಾರಾಟ: ಮಾವು ಮೇಳದ ಜೊತೆ ಹಲಸಿನ ಸ್ಟಾಲ್‌ಗ‌ಳಿಗೆ ಅವಕಾಶ ಮಾಡಿ ಕೊಡಲಾಗುತ್ತಿದೆ. ತೋಟ ಗಾರಿಕೆ ಇಲಾಖೆ ಸಸ್ಯ ಸಂತೆ ಮೂಲಕ ಮಾವು, ಸೀಬೆ ಸೇರಿದಂತೆ ವಿಭಿನ್ನ ತಳಿಯ ಸಸಿ ರಿಯಾಯಿತಿ ಅಂದರೆ ಸರ್ಕಾರ ನಿರ್ಧರಿಸಿದ ದರದಲ್ಲಿ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸ ಲಾಗಿದೆ. ಮಾವು ಮಾರಾಟ ಮಾಡಬೇಕೆಂದರೆ ಬೆಂಗಳೂರು ನಗರದ ಲಾಲ್‌ಬಾಗ್‌ ಹೋಗಬೇಕಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಮಾವಿನ ಮಾರಾಟ ಮಾಡುವ ಸುವರ್ಣಾವಕಾಶ ಕಲ್ಪಿಸುತ್ತಿರುವುದರಿಂದ ವಿವಿಧ ತಳಿಯ ಹಣ್ಣುಗಳನ್ನು ಮಾವು ಮೇಳದಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಅವಕಾಶ ಜಿಲ್ಲೆಯ ಜನತೆಗೆ ದೊರೆಯಲಿದೆ.

ಜಿಲ್ಲಾಡಳಿತದಿಂದ ಪ್ರಚಾರ: ದೇವನಹಳ್ಳಿ ಜಿಲ್ಲಾ ಕೇಂದ್ರವಾದ ಬಳಿಕ ಎರಡನೇ ಬಾರಿ ಮಾವು ಮೇಳ ಆಯೋಜಿಸಲು ತೋಟಗಾರಿಕೆ ಇಲಾಖೆಯೂ ಸಹ ಉತ್ಸಾಹದಿಂದ ಮುಂದೆ ಬಂದು ತಿಂಗಳ ಅಂತ್ಯದ ವೇಳೆಗೆ ದೇವನಹಳ್ಳಿ ಭಾಗದ ಜನತೆಗೆ ಹಣ್ಣಿನ ಸವಿ ರುಚಿ ನೀಡುವಂತೆ ಆಗಿದೆ. ಜಿಲ್ಲೆಯಲ್ಲಿ ಮಾವು ಮೇಳ ಹಮ್ಮಿಕೊಂಡಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಪ್ರಚಾರ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮಾವು ಮೇಳವನ್ನು ಮೇ 27ರಿಂದ 29 ರವರೆಗೆ ಪಟ್ಟಣದ ರಾಣಿಸರ್ಕಲ್‌ನ ನಂದಿ ಉಪಚಾರ ಹತ್ತಿರದಲ್ಲಿ ಸ್ಟಾಲ್‌ಗ‌ಳನ್ನು ಹಾಕಿ ರೈತ ರಿಂದ ಮಾವು ಮಾರಾಟ ಮಾಡಲಾಗುವುದು. ಸ್ಥಳೀಯ ತಳಿಗಳ ಮಾವು, ಹಲಸಿನ ಹಣ್ಣು ರೈತ ರಿಂದ ಗ್ರಾಹಕರು ನೇರವಾಗಿ ತೆಗೆದುಕೊಳ್ಳ ಬಹುದು.ಮಾವಿನ ಮೇಳಕ್ಕೆ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಡಲಾಗಿದೆ.
ಗುಣವಂತ, ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ಮಾವು ಮೇಳ ಮಾಡುವುದರಿಂದ ಗ್ರಾಹಕರಿಗೆ ವಿಭಿನ್ನ ರೀತಿಯ ಹಣ್ಣು ನೀಡಲು ಅನುಕೂಲವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ಮಳೆಯಿಂದ ಮಾವಿನ ಇಳುವರಿ ಸಾಕಷ್ಟು ಕುಂಠಿತವಾಗಿದೆ. ಮಾವು ಮೇಳ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮಧ್ಯವರ್ತಿಗಳ ಕಾಟ ತಪ್ಪಿಸಿದ್ದು, ಗ್ರಾಹಕರಿಗೆ ಗುಣಮಟ್ಟದ ಹಣ್ಣನ್ನು ನೀಡಲು ಅನುಕೂಲವಾಗಿದೆ.
ನಾರಾಯಣಸ್ವಾಮಿ, ರೈತ

ಮಾವು ಮೇಳದಲ್ಲಿ ಮಾವನ್ನು ಖರೀದಿಸಲು ಬೆಂಗಳೂರಿನ ಲಾಲ್‌ಬಾಗ್‌, ಇತರೆ ಕಡೆ ಹೋಗುತ್ತಿದ್ದೆವು. ಇದೀಗ ದೇವನಹಳ್ಳಿಯಲ್ಲೇ ಮಾವು ಮೇಳ ಮಾಡುತ್ತಿರುವುದರಿಂದ ಮಾವಿನ ರುಚಿ ಸವಿಯಲು ಅನುಕೂಲವಾಗಿದೆ.
ಪ್ರಭುದೇವ್‌, ಗ್ರಾಹಕ

ಟಾಪ್ ನ್ಯೂಸ್

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.