ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ
Team Udayavani, May 24, 2022, 5:56 PM IST
ಹುಣಸೂರು: ಆಸಾನಿ ಚಂಡ ಮಾರುತದ ಪರಿಣಾಮವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆನಾಗರಹೊಳೆ ಉದ್ಯಾನಕ್ಕೆ ಜೀವಕಳೆ ಬಂದಿದೆ.ಕಾಡಿನಲ್ಲಿರುವ ಕೆರೆ ಕಟ್ಟೆಗಳು ಭರ್ತಿ ಆಗಿದ್ದು, ವನ್ಯಪ್ರಾಣಿಗಳ ಸ್ವತ್ಛಂದ ವಿಹಾರಕ್ಕೆ ಪಾರವೇ ಇಲ್ಲದಂತಾಗಿದೆ.ಬೇಸಿಗೆ ಬಂತೆಂದರೆ ಮೇವು, ನೀರಿಗೆ ಹಾಹಾಕಾರಉಂಟಾಗಿ, ವನ್ಯಪ್ರಾಣಿಗಳು ರೈತರ ಜಮೀನಿಗೆ,ಊರುಗಳಿಗೆ ದಾಂಗುಡಿ ಇಡುತ್ತಿದ್ದವು.
ಆದರೆ, ಆಸಾನಿಚಂಡಮಾರುತ ಇದಕ್ಕೆ ಬ್ರೇಕ್ ಹಾಕಿದೆ. ಉದ್ಯಾನದ ಎಲ್ಲಾವಲಯಗಳಲ್ಲೂ ಭಾರೀ ಮಳೆ ಬಿದ್ದಿದೆ. ಇದರಿಂದ ಮೇವು,ನೀರು ಯಥೇತ್ಛವಾಗಿ ದೊರೆಯುತ್ತಿದೆ. ವನ್ಯ ಪ್ರಾಣಿಗಳುಮೇವು ಮೇಯುತ್ತಾ ಎಲ್ಲೆಂದರಲ್ಲಿ ಸ್ವತ್ಛಂದವಾಗಿವಿಹರಿಸುತ್ತಿವೆ.
ನಿಟ್ಟುಸಿರು ಬಿಟ್ಟ ಅರಣ್ಯಾಧಿಕಾರಿಗಳು: ಪ್ರತಿ ವರ್ಷಬೇಸಿಗೆ ಕಾಲದಲ್ಲಿ ಹಗಲು ರಾತ್ರಿ ಎನ್ನದೇ ಬೆಂಕಿಯಿಂದಅರಣ್ಯವನ್ನು ಕಾಯುತ್ತಿದ್ದರು. ಕೆಲವೊಮ್ಮೆ ಸಫಾರಿಯೂಸ್ಥಗಿತಗೊಳಿಸಲಾಗುತ್ತಿತ್ತು. ಈ ಬಾರಿ ಮುಂಗಾರು ಮಳೆಬೇಗನೆ ಆರಂಭವಾಗಿದ್ದು, ಕಾನನದಲ್ಲಿ ಹಸಿರುಇಮ್ಮಡಿಸಿದೆ. ಪ್ರವಾಸಿಗರಿಗೆ, ವನ್ಯಪ್ರಿಯರಿಗೆ ನಾಗರಹೊಳೆಉದ್ಯಾನವನ ಹೇಳಿ ಮಾಡಿಸಿದ ತಾಣವಾಗಿದ್ದರೆ,ಬೇಸಿಗೆಯಲ್ಲೇ ಬಂದ ಮಳೆಯಿಂದಾಗಿ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
ಸಂಪತ್ ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.