ರಾಗಿ ಖರೀದಿಸದೇ ಅಧಿಕಾರಿಗಳು ಪರಾರಿ
ಕೋಪಗೊಂಡಿದ್ದ ರೈತರು ಅಧಿಕಾರಿಗಳುನ್ನು ತರಾಟೆಗೆ ತೆಗೆದುಕೊಂಡರು.
Team Udayavani, May 24, 2022, 6:20 PM IST
ನೆಲಮಂಗಲ: ತಾಲೂಕಿನ ರೈತರ ರಾಗಿಖರೀದಿ ಮಾಡಬೇಕಾದ ರಾಗಿ ಖರೀದಿ ಕೇಂದ್ರ ಅಧಿಕಾರಿಗಳು ಸೋಮವಾರ ಮಧ್ಯಾಹ್ನದ ವೇಳೆಗೆ ಪರಾರಿಯಾಗಿದ್ದು,
ರೈತರು ರಾಗಿ ಮಾರಾಟ ಮಾಡಲು ಪರದಾಡುವಂತಾಗಿದ್ದು, ರೈತರ ಹಿಡಿಶಾಪಕ್ಕೆ ಅಧಿಕಾರಿಗಳು ಗುರಿಯಾದ ಘಟನೆ ಕೆಂಪಲಿಂಗನಹಳ್ಳಿ ಬಳಿಯ ರಾಗಿ ಖರೀದಿ
ಕೇಂದ್ರದ ಬಳಿಯಲ್ಲಿ ಸಂಭವಿಸಿದೆ.
ತಾಲೂಕಿನ ಕಳೆದ ಎರೆಡು ದಿನ ರೈತರು ತಮ್ಮ ರಾಗಿಯನ್ನು ರಾಗೀ ಖರೀದಿ ಕೇಂದ್ರಕ್ಕೆ ಮಾರಾಟಕ್ಕೆಂದು ತಂದು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನವಾದರೂ ರಾಗಿ ಖರೀದಿ ಕೇಂದ್ರದ ಚಟುವಟಿಕೆ ಪ್ರಾರಂಭವಾಗದ ಹಿನ್ನೆಲೆ ಕಾಯ್ದು ಕಾಯ್ದು ಕೋಪಗೊಂಡಿದ್ದ ರೈತರು ಅಧಿಕಾರಿಗಳುನ್ನು ತರಾಟೆಗೆ ತೆಗೆದುಕೊಂಡರು.
ಕ್ರಮ ಜರುಗಿಸಲು ಒತ್ತಾಯ: ಈ ವೇಳೆ ಸ್ಥಳದಲ್ಲಿದ್ದ ಕೇಂದ್ರದ ಅಧಿಕಾರಿಗಳು ರಾಗಿ ಖರೀದಿ ಮತ್ತು ಸಾಗಾಣಿಕೆಯ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು
ಸೋಮವಾರ ರಾಗಿ ಸಾಗಣೆ ಮಾಡಲು ಲಾರಿಗಳನ್ನು ಕಳುಹಿಸಿಲ್ಲ ಎಂದು ಸಬೂಬು ಹೇಳಿದ್ದಾರೆ. ಅಧಿಕಾರಿಗಳ ಉತ್ತರದಿಂದ ಆಕ್ರೋಶಗೊಂಡ ರೈತರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗದುಕೊಳ್ಳುತಿದ್ದಂತೆ ಅಧಿಕಾರಿಗಳು ತಮ್ಮ ಕಾಲಿಗೆ ಬುದ್ಧಿ ಹೇಳಿದ್ದಾರೆ.
ರೈತರ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಆಗ್ರಹಿಸಿದ್ದಾರೆ.
ಬಡ ರೈತರಿಗೆ ಅನ್ಯಾಯ: ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಕಳೆದೆರೆಡು ದಿನಗಳಿಂದ ಕಾಯ್ದು ಕುಳಿತಿದ್ದ ರೈತರನ್ನು ಕೈಬಿಟ್ಟು ಲಂಚ ನೀಡಿದ ಕೆಲವೇ ರೈತರಿಗೆ ಟೋಕನ್ ನೀಡಿ ಅವರನ್ನು ದೊಡ್ಡಬಳ್ಳಾಪುರಕ್ಕೆ ಕಳುಹಿಸಿ ಕೊಡಲಾಗಿದೆ. ಇದರಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಸಚಿವರುಗಳು ಎಲ್ಲಿಗೆ ಹೋಗಿದ್ದಾರೆಂಬುದು ಗೊತ್ತಿಲ್ಲ, ಅವರಿಗೆ ರೈತರ ಸಮಸ್ಯೆ ಆಲಿಸಿ ಬಗೆಹರಿಸುವ ಮನಸ್ಥಿತಿಯಿಲ್ಲ ಎಂದರು.
ಹೋರಾಟದ ಎಚ್ಚರಿಕೆ
ಆಡಳಿತ ನಡೆಸುವವರು ಮೈಮರೆತು ಕುಳಿತಂತಿದೆ. ರೈತರ ಕಷ್ಟವನ್ನು ಬಗೆಹರಿಸುತ್ತೇವೆಂದು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವವರು ತಮ್ಮ ಸ್ವಂತ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸಲು ಸ್ಥಳೀಯ ತಾಲೂಕು ಆಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್ ಎಚ್ಚರಿಕೆಯನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.