ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ: ಪ್ರವೀಣ್‌ ಶೆಟ್ಟಿ ಪುತ್ತೂರು ಆಯ್ಕೆ


Team Udayavani, May 25, 2022, 12:04 PM IST

Untitled-1

ಮುಂಬಯಿ: 2020-2022 ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪುಣೆಯ ಜನಪ್ರಿಯ ಸಮಾಜ ಸೇವಕ, ಕಲಾ ಪೋಷಕ, ಹೊಟೇಲ್‌ ಉದ್ಯಮಿ ಪ್ರವೀಣ್‌ ಶೆಟ್ಟಿ ಪುತ್ತೂರು ಇವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 25 ರಂದು ಸಂಜೆ 6.30 ಕ್ಕೆ ನಾಡಿನ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಜನ್ಮ ಭೂಮಿಯಲ್ಲಿ ಮತ್ತು ಕರ್ಮಭೂಮಿಯಲ್ಲಿ ಸಮಾಜ ಸೇವೆ ಮಾಡುವ ಭಾಗ್ಯವನ್ನು ಪಡೆದುಕೊಳ್ಳುವ ಬೆರಳೆಣಿಕೆಯ ಜನರಲ್ಲಿ ಯಶಸ್ವಿ ಉದ್ಯಮಿ, ಕಲಾಪ್ರೇಮಿ, ಕಲಾ ಸಂಘಟಕ, ಸಮಾಜ ಸೇವಾಕರ್ತ ಪ್ರವೀಣ್‌ ಶೆಟ್ಟಿ ಪುತ್ತೂರು ಅವರು ಕೂಡಾ ಒಬ್ಬರು. ತನ್ನ ಆದಾಯದ ಒಂದಾಂಶವನ್ನು ಬಡವರಿಗೆ ಸಹಾಯ ಹಸ್ತ ನೀಡುವಲ್ಲಿ ಇವರದ್ದು ಎತ್ತಿದ ಕೈ. ಸಮಾಜ ಸೇವಕನಾಗಿ, ಕಲಾ ಸೇವಕನಾಗಿ, ಸಂಕಷ್ಟದಲ್ಲಿರುವವರಿಗೆ ಅಪತ್ಭಾಂದವರಾಗಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯ ಸೇರಿದಂತೆ ಸಮಾಜದಲ್ಲಿ ಗುರುತಿಸಿಕೊಂಡಿರುವ ಪ್ರವೀಣ್‌ ಶೆಟ್ಟಿ ಪುತ್ತೂರು ಅವರು ಯುವ ಪೀಳಿಗೆಗೆ ಮಾದರಿ.

ಕ್ಯಾಟರಿಂಗ್‌ ಉದ್ಯಮದಲ್ಲಿ ಯಶಸ್ಸು :

ಪುಣೆಯ ಅರ್‌ಬಿಐ ಪ್ರವೀಣಣ್ಣ ಎಂದೇ ಪ್ರಸಿದ್ದಿ ಪಡೆದ ಪ್ರವೀಣ್‌ ಶೆಟ್ಟಿ ಇವರು ಉಡುಪಿಯ ಪುತ್ತೂರಿನಲ್ಲಿ ಕಲ್ಯಾಣಿ ಶೆಟ್ಟಿ ಮತ್ತು ಶಂಕರ ಶೆಟ್ಟಿ ದಂಪತಿಯ ಪುತ್ರನಾಗಿ ಜನಿಸಿ, ಹುಟ್ಟೂರಿನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ, ಪದವಿ ಶಿಕ್ಷಣವನ್ನು ಮುಗಿಸಿ ಎಲ್ಲರಂತೆಯೇ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಉದ್ಯೋಗವನ್ನು ಅರಸಿ ಪುಣೆಗೆ ಬಂದು ಹೊಟೇಲ್‌ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. 1999ರಲ್ಲಿ ತಮ್ಮ ಸ್ವಂತ ಪರಿಶ್ರಮದಿಂದ ಪುಣೆಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕ್ಯಾಂಟೀನ್‌ ಉದ್ಯಮವನ್ನು ಪ್ರಾರಂಭಿಸಿದರು. ಬಳಿಕ ಹಂತ ಹಂತವಾಗಿ ಮೇಲೆಕ್ಕೇರಿ ಹಲವಾರು ಕಾರ್ಪೊರೇಟ್‌ ಕಂಪನಿಗಳು ಸೇರಿದಂತೆ ಎ. ಪಿ ಹಾಸ್ಪಿಟಾಲಿಟಿ ಸರ್ವಿಸಸ್‌ ಪ್ರೈವೇಟ್‌ ಹೆಸರಿನಲ್ಲಿ ಕ್ಯಾಟರಿಂಗ್‌ ಉದ್ಯಮವನ್ನು ಪ್ರಾರಂಬಿಸಿ ಉತ್ತಮ ಸೇವೆಯನ್ನು ನೀಡುವ ಮೂಲಕ ಹಲವಾರು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿದ್ದಾರೆ. ಹೊಟೇಲ್‌ ಉದ್ಯಮದಲ್ಲೂ ಆಸಕ್ತಿ ಹೊಂದಿರುವ ಇವರು ಪುಣೆ ಹಾಗೂ ಉಡುಪಿಯಲ್ಲಿ ಹೊಟೇಲ್‌ಗ‌ಳನ್ನು ಪ್ರಾರಂಭಿಸಿ ಯಶಸ್ಸನ್ನು ಪಡೆದಿದ್ದಾರೆ.

ಕಲೆ-ಕಲಾವಿದರ ಆಶಾಕಿರಣ :

ತುಳುನಾಡಿನ ಪ್ರೀತಿಯಿಂದ, ಕರ್ಮಭೂಮಿಯಲ್ಲೂ ತವರೂರ ತುಳು ಭಾಷೆ, ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವು ದಲ್ಲದೆ, ಹಲವಾರು ಸಂಘ ಸಂಸ್ಥೆಗಳಿಗೆ ನೆರವು ನೀಡಿದ್ದಾರೆ. ಯಕ್ಷಗಾನದ ಮೇಲಿನ ಅತೀವ ಪ್ರೀತಿಯಿಂದ 2009ರಲ್ಲಿ ಪುಣೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು  85 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಪುಣೆ ಬಂಟರ ಸಂಘದ ಟ್ರಸ್ಟಿಯಾಗಿ, ಸಂಘದ ಉಪಾಧ್ಯಕ್ಷರಾಗಿ, ಉಡುಪಿ ಪುತ್ತೂರು ಬಂಟರ ಸಂಘದ ಗೌರವಾಧ್ಯಕ್ಷರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಈ ಹಿಂದೆ ಬರ ಪರಿಸ್ಥಿತಿಯ ಸಮಯದಲ್ಲಿ ಉಡುಪಿಯ ಸುಬ್ರಹ್ಮಣ್ಯ ವಾರ್ಡ್‌ನ ಜನರು ನೀರಿಲ್ಲದೆ ಪರದಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಸ್ವಂತ ಜಾಗದಲ್ಲಿ ಬಾವಿಯನ್ನು ನಿರ್ಮಿಸಿ ಸುಮಾರು 3 ಗ್ರಾಮದವರಿಗೆ ನೀರನ್ನು ಒದಗಿಸಿದ ಪುಣ್ಯ ಕಾರ್ಯ ಇವರದ್ದಾಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲೂ ತುಳು-ಕನ್ನಡಿಗರ ಹಲವಾರು ಬಡ ಕುಟುಂಬಗಳು ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ. ತುಳುನಾಡಿನ ಹಲವಾರು ಯಕ್ಷಗಾನ ಕಲಾವಿದರು, ರಂಗ ಕರ್ಮಿಗಳಿಗೆ ತನ್ನಿಂದಾದ ಧನ ಸಹಾಯವನ್ನು ನೀಡಿದ್ದಾರೆ. ಮನೆ ಬಾಡಿಗೆ ಕಟ್ಟಲಾಗದೆ ತನ್ನ ಬಳಿಗೆ ಬಂದವರಿಗೆ, ಲಾಕ್‌ಡೌನ್‌ನಿಂದ ಎಲ್ಲವನ್ನು ಕಳಕೊಂಡು ಊರಿಗೆ ಹೋಗಲು ಕಷ್ಟದಲ್ಲಿದ್ದವರಿಗೆ ಸಹಕರಿಸಿದ್ದಾರೆ.

ಹಲವಾರು ಪ್ರಶಸ್ತಿ-ಪುರಸ್ಕಾರಗಳು :

ಇವರ ಅತ್ಯುತ್ತಮ ಹಾಸ್ಪಿಟಾಲಿಟಿ ಸರ್ವಿಸ್‌ಗೆ ರಾಷ್ಟ್ರ ಮಟ್ಟದ ಗೌರವವೂ ಲಭಿಸಿದೆ. ಇವರ ಸಾಮಾಜಪರ ಕಾರ್ಯಗಳಿಗೆ ವಿಶ್ವ ತೌಳವ ರತ್ನ ಪ್ರಶಸ್ತಿ, ತೌಳವ ಪ್ರಶಸ್ತಿ, ಸುಬ್ಬಣ್ಣ ಶೆಟ್ಟಿ ಸಂಸ್ಕರಣ ಪ್ರಶಸ್ತಿ, ಮುಂಬಯಿ ಕಲ್ವ ಫ್ರೆಂಡ್ಸ್‌ ಪ್ರಶಸ್ತಿ, ಕಾಪು ತುಳುಕೂಟದ ಪ್ರಶಸ್ತಿ, ಯಕ್ಷ ರûಾ ಪ್ರಶಸ್ತಿ, ಭ್ರಾಮರಿ ಯಕ್ಷನೃತ್ಯಕಲಾ ನಿಲಯದ ಪ್ರಶಸ್ತಿ, ಎಚ್‌. ಬಿ. ಎಲ್‌. ರಾವ್‌ ಸಂಸ್ಮರಣ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮಾನ-ಸಮ್ಮಾನಗಳು ಲಭಿಸಿವೆ. ಸದಾ ಹಸನ್ಮುಖೀಯಾಗಿರುವ ಇವರು ಪತ್ನಿ ಆಶಾ ಶೆಟ್ಟಿ ಹಾಗು ಮಕ್ಕಳಾದ ಪ್ರಣವ್‌ ಮತ್ತು ಪ್ರತೀಕ್‌ ಅವರೊಂದಿಗೆ ಪುಣೆಯಲ್ಲಿ ನೆಲೆಸಿದ್ದಾರೆ.

ಪ್ರಚಾರ ಬಯಸದ ಸಮಾಜ ಸೇವೆ :

ಪುಣೆ ತುಳುಕೂಟದ ಮುಖ್ಯ ಸಲಹೆಗಾರರಾಗಿ ತುಳು ಕೂಟದ ಮುಖಾಂತರ ಪ್ರತಿ ವರ್ಷ ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಪ್ರತಿಭಾವಂತ ಮಕ್ಕಳಿಗೆ ಸತ್ಕಾರಕ್ಕೆ ಸಹಕಾರ, ತುಳು ಭಾಷೆ, ಕಮ್ಮಟ, ಯಕ್ಷಗಾನ, ತಾಳಮದ್ದಲೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರಾಗಿ ತುಳು ಭಾಷೆಯ ಬೆಳವಣಿಗೆಗೆ ತಮ್ಮದೇ ಆದಂತಹ ಕೊಡುಗೆಯನ್ನು ನೀಡುತ್ತಿದ್ದಾರೆ. ಪುಣೆ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಸಂಸ್ಥೆಗಳಿಗೆ, ದೈವ-ದೇವಸ್ಥಾನಗಳಿಗೆ ದೇಣಿಗೆ ನೀಡಿ ತನ್ನಲ್ಲಿಯೇ ಸಂತೃಪ್ತಿಯನ್ನು ಕಂಡವರು. ಯಾವುದೇ ರೀತಿಯಲ್ಲೂ ಪ್ರಚಾರವನ್ನು ಬಯಸದೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.