ರಸ್ತೆ ತುಂಬಾ ಧೂಳು, ಕೇಳ್ಳೋರಿಲ್ಲ ವಾಹನ ಸವಾರರ ಗೋಳು
Team Udayavani, May 25, 2022, 2:31 PM IST
ದೇವನಹಳ್ಳಿ: ತಾಲೂಕಿನ ಚಪ್ಪರಕಲ್ಲು ಸರ್ಕಲ್ ನಿಂದ ತಿಂಡ್ಲು ಮಾರ್ಗವಾಗಿ ನಡೆಯುತ್ತಿರುವರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕಾಮಗಾರಿ ಕುಂಠಿತ ಆಗಿದ್ದು, ರಸ್ತೆಯುದ್ದಕ್ಕೂ ಜೆಲ್ಲಿ ಪೌಡರ್ ಹಾಕಿರುವುದರಿಂದ ಭಾರೀವಾಹನಗಳು ಹೋಗುವುದರಿಂದಧೂಳಿನಲ್ಲಿಯೇ ದ್ವಿಚಕ್ರ ವಾಹನ ಸವಾರರು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೇಳಿ, ಕೇಳಿ ರಸ್ತೆಯು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಯೇ ಹಾದು ಹೋಗುವ ರಸ್ತೆಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ದಿನನಿತ್ಯ ಸಂಚರಿಸುತ್ತಲೇ ಇರುತ್ತವೆ. ಅಕ್ಕಪಕ್ಕದಲ್ಲಿ ತೋಟಗಳು, ಮನೆಗಳುಇರುವುದರಿಂದ ಧೂಳು ಮನೆಗಳಿಗೆ ಮತ್ತುತೋಟಗಳಿಗೆ ಆವರಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಮಧ್ಯಾಹ್ನದ ವೇಳೆಯಲ್ಲಂತೂ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟಸಾಧ್ಯವಾಗುತ್ತದೆ.ಡಾಂಬರೀಕರಣ ಆಗದಿರುವುದರಿಂದ ಜೆಲ್ಲಿಪೌಡರ್ ಹಾಗೆಯೇ ಉಳಿಸಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಬಹುಬೇಗನೆಮುಗಿಸುವಂತೆ ಆಗಬೇಕು ಎಂದು ಸ್ಥಳೀಯಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಒತ್ತಾಯ: ಧೂಳಿನಿಂದ ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ಲಾರಿಗಳು ಹೋಗುವುದರಿಂದ ಹಿಂಬದಿಯಿಂದ ಬರುವಕಾರು, ದ್ವಿಚಕ್ರ ವಾಹನಗಳ ಸವಾರರು ಧೂಳಿನಲ್ಲಿಯೇ ಸಂಚರಿಸಬೇಕು. ಆಯತಪ್ಪಿ ಏನಾದರೂ ಬಿದ್ದರೆ ಆಸ್ಪತ್ರೆ ಸೇರುವುದು ಖಚಿತ.ಲೋಕೋಪಯೋಗಿ ಇಲಾಖೆ ಅಧಿಕಾರಿಗಳುಕೂಡಲೇ ಈ ರಸ್ತೆಗಳಿಗೆ ಡಾಂಬರೀಕರಣ ಮಾಡಿಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಡಾಂಬರೀಕರಣ ಆಗಿಲ್ಲ: ರಸ್ತೆ ತುಂಬಾ ಧೂಳು ತುಂಬಿಕೊಂಡಿದ್ದು, ವಾಹನ ಸವಾರರು ಧೂಳಿನಸ್ನಾನ ಮಾಡಿಕೊಂಡು ಸಂಚರಿಸುವಂತೆ ಆಗಿದೆ.ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕಾಮಗಾರಿಗೆ ಉದ್ಘಾಟನೆಯಾಗಿ ವರ್ಷ ಕಳೆದರೂ, ಚಪ್ಪರಕಲ್ಲು ಸರ್ಕಲ್‌ನಿಂದ ಕುಂದಾಣಸರ್ಕಲ್‌ವರೆಗೆ ಮಾತ್ರ ಡಾಂಬರೀಕರಣವಾಗಿದ್ದು,ಅಲ್ಲಿಂದ ಸುಮಾರು 5-6 ಕಿ.ಮೀ. ರಸ್ತೆ ಡಾಂಬರು ಕಿತ್ತು, ಜೆಲ್ಲಿ ಕಲ್ಲಿನ ದೂಳು ರಸ್ತೆಯನ್ನಾಗಿಸಲಾಗಿದೆ. ಬೇಸಿಗೆಯಾಗಿರುವುದರಿಂದ ಬೃಹತ್ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದರೆ, ಮುಂಬರುವ ಯಾವುದೇ ವಾಹನ ಕಾಣಿಸದೆ, ಧೂಳಿನಿಂದ ರಸ್ತೆ ಸಂಪೂರ್ಣವಾಗಿ ಆವರಿಸಿರುವುದು ಕಂಡುಬರುತ್ತದೆ.
ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದಲ್ಲಿದ್ದರೂ, ರಸ್ತೆಡಾಂಬರೀಕರಣ ಆಗದೇ ಧೂಳಿನಲ್ಲೇಜನ ಸಂಚರಿಸುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಅಧಿಕಾರಿಗಳು ಕೂಡಲೇಗಮನಹರಿಸಿ ಜನರಿಗೆ ಧೂಳಿನಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು. – ನಾರಾಯಣಸ್ವಾಮಿ, ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.