ಮುಂದಿನ ಐಪಿಎಲ್‌ಗೆ ಮತ್ತೆ ಎಬಿಡಿ!; ಆರ್‌ಸಿಬಿ ತಂಡವನ್ನೇ ಸೇರಿಕೊಳ್ಳಲಿದ್ದಾರೆ!
Team Udayavani, May 25, 2022, 5:30 PM IST
ಬೆಂಗಳೂರು: ವಿಶ್ವ ಕ್ರಿಕೆಟಿನ ಅಸಾಮಾನ್ಯ ಹಿಟ್ಟರ್, 360 ಡಿಗ್ರಿ ಬ್ಯಾಟರ್ ಎಬಿ ಡಿ ವಿಲಿಯರ್ ಮತ್ತೆ ಸುದ್ದಿಯಾಗಿದ್ದಾರೆ. 2023ರಲ್ಲಿ ಮತ್ತೆ ಐಪಿಎಲ್‌ಗೆ ಮರಳಲಿದ್ದೇನೆ, ನನ್ನ ಎರಡನೇ ಮನೆಯಾಗಿರುವ ಆರ್‌ಸಿಬಿಯನ್ನು ಸೇರಿಕೊಳ್ಳಲಿದ್ದàನೆ ಎನ್ನುವ ಮೂಲಕ ಭಾರೀ ಸಂಚಲನ ಮೂಡಿಸಿದ್ದಾರೆ.
ಆರ್‌ಸಿಬಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಎಬಿಡಿ, ಅನಂತರದ 3 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದರು. ಆದರೆ ಈ ಬಾರಿಯ ಐಪಿಎಲ್ ಗೂ ಮೊದಲೇ ಗುಡ್‌ಬೈ ಹೇಳಿ ಅಚ್ಚರಿ ಮೂಡಿಸಿದರು. ಇದೀಗ ಮತ್ತೆ ಮರಳುವುದಾಗಿ ಘೋಷಿಸುವ ಮೂಲಕ ಮತ್ತೊಂದು ಸುತ್ತಿನ ಆಶ್ಚರ್ಯಕ್ಕೆ ಕಾರಣರಾಗಿದ್ದಾರೆ. ಆದರೆ ಅವರು ಆಟಗಾರನಾಗಿ ಮರಳುತ್ತಾರೋ ಅಥವಾ ಆರ್‌ಸಿಬಿ ಪರ ಬೇರೆ ಯಾವುದಾದರೂ ಹುದ್ದೆಯನ್ನು ನಿಭಾಯಿಸುವರೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಎಬಿಡಿ ಆರ್‌ಸಿಬಿಯಿಂದ ಬೇರ್ಪಟ್ಟರೂ ತಂಡದೊಂದಿಗೆ ಅವರ ಒಡನಾಟ ಮಾತ್ರ ದೂರವಾಗಿರಲಿಲ್ಲ. ದೂರದ ದಕ್ಷಿಣ ಆಫ್ರಿಕಾದಲ್ಲಿ ಕುಳಿತು ಐಪಿಎಲ್ ಪಂದ್ಯ ವೀಕ್ಷಿಸುತ್ತಿದ್ದರು. ಆರ್‌ಸಿಬಿ ತಂಡಕ್ಕೆ ಚಿಯರ್ ಹೇಳುತ್ತಿದ್ದರು. ಆರ್‌ಸಿಬಿ ಇದೇ ಮೊದಲ ಬಾರಿಗೆ ಜಾರಿಗೆ ತಂದ “ಆರ್‌ಸಿಬಿ ಹಾಲ್ ಆಫ್ ಫೇಮ್’ ಗೌರವಕ್ಕೂ ಎಬಿಡಿ ಆಯ್ಕೆಯಾಗಿದ್ದರು.
ವಿರಾಟ್ ಕೊಹ್ಲಿ ಬಯಕೆ
ಇತ್ತೀಚೆಗೆ ನಡೆದ ಸಂದರ್ಶನವೊಂದರ ವೇಳೆ ಎಬಿ ಡಿ ವಿಲಿಯರ್ ಕುರಿತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆತ್ಮೀಯತೆಯಿಂದ ಮಾತಾಡಿದ್ದರು. “ನಾನು ನಮ್ಮ ಆರ್‌ಸಿಬಿ ತಂಡ ಎಬಿಡಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದೆ. ಆದರೆ ನಾನು ಅವರೊಂದಿಗೆ ನಿರಂತರ ಸಂಪರ್ಪದಲ್ಲಿದ್ದೇನೆ. ಮುಂದಿನ ವರ್ಷ ಅವರು ಹೊಸ ಪಾತ್ರದೊಂದಿಗೆ ನಮ್ಮ ತಂಡಕ್ಕೆ ಮರಳುವ ನಂಬಿಕೆ ಇದೆ’ ಎಂದಿದ್ದರು ವಿರಾಟ್ ಕೊಹ್ಲಿ.
ಮತ್ತೆ ಎರಡನೇ ಮನೆಗೆ
ಬಳಿಕ ಕೊಹ್ಲಿ ಅವರ ಈ ಹೇಳಿಕೆಗೆ ಎಬಿಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. “ನಾನು ಮತ್ತೆ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಬೇಕೆಂಬ ಬಗ್ಗೆ ಕೊಹ್ಲಿ ಮಾತಾಡಿರುವುದು ಬಹಳ ಖುಷಿ ಕೊಟ್ಟಿದೆ. ಎಂ. ಚಿನ್ನಸ್ವಾಮಿ ಸ್ಟೇಡಿಯಂ ವೀಕ್ಷಕರಿಂದ ಭೋರ್ಗರೆಯುವುದನ್ನು ನಾನು ಕಾಣಬೇಕು. ಮುಂದಿನ ವರ್ಷ ಐಪಿಎಲ್‌ಗೆ ಮರಳಲಿದ್ದೇನೆ. ಆರ್‌ಸಿಬಿ ತಂಡದ ಜತೆಯೇ ಇರಲಿದ್ದೇನೆ. ಆದರೆ ನನ್ನ ಪಾತ್ರ ಯಾವುದು ಎಂಬ ಬಗ್ಗೆ ನನಗೇ ತಿಳಿದಿಲ್ಲ. ಮುಂದಿನ ವರ್ಷ ಬೆಂಗಳೂರಿನಲ್ಲಿ ಬಹಳಷ್ಟು ಪಂದ್ಯಗಳು ನಡೆಯಬಹುದು. ಹೀಗಾಗಿ ನಾನು ನನ್ನ ಎರಡನೇ ಮನೆಗೆ ಮರಳಲಿದ್ದೇನೆ’ ಎಂದು ಎಬಿಡಿ ಪ್ರತಿಕ್ರಿಯಿಸಿದ್ದಾರೆ.
ಎಬಿಡಿ ದಾಖಲೆ
ಆರ್‌ಸಿಬಿ ಪರ ಎಬಿಡಿ 157 ಪಂದ್ಯಗಳನ್ನಾಡಿದ್ದು, 4,522 ರನ್ ಪೇರಿಸಿದ್ದಾರೆ. ಆರ್‌ಸಿಬಿ ಪರ ಅತ್ಯಧಿಕ ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ರಾಯಲ್ ಚಾಲೆಂಜರ್ ಪರ ಅತೀ ಹೆಚ್ಚು ರನ್ ಗಳಿಸಿದ ಸಾಧಕನೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.