ಢಾಕಾ ಟೆಸ್ಟ್: ಶ್ರೀಲಂಕಾ ಬ್ಯಾಟಿಂಗ್ ಹೋರಾಟ
Team Udayavani, May 25, 2022, 11:34 PM IST
ಢಾಕಾ: ಆತಿಥೇಯ ಬಾಂಗ್ಲಾದೇಶ ಎದುರಿನ ಢಾಕಾ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಂಗ್ ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ. ಬಾಂಗ್ಲಾದ 365 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ 5ಕ್ಕೆ 282 ರನ್ ಮಾಡಿ 3ನೇ ದಿನದಾಟ ಮುಗಿಸಿದೆ.
ಶ್ರೀಲಂಕಾ ಸರದಿಯಲ್ಲಿ ನಾಲ್ವರಿಂದ ಅರ್ಧ ಶತಕ ದಾಖಲಾಯಿತು. ಆರಂಭಿಕರಾದ ಒಶಾದ ಫೆರ್ನಾಂಡೊ 57, ದಿಮುತ್ ಕರುಣಾರತ್ನೆ 80 ರನ್ ಬಾರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಮೊದಲ ವಿಕೆಟಿಗೆ 95 ರನ್ ಒಟ್ಟುಗೂಡಿತು. ಮಧ್ಯಮ ಕ್ರಮಾಂಕದಲ್ಲಿ ಸಣ್ಣದೊಂದು ಕುಸಿತ ಕಂಡ ಬಳಿಕ ಏಂಜೆಲೊ ಮ್ಯಾಥ್ಯೂಸ್ ಮತ್ತು ಧನಂಜಯ ಡಿ ಸಿಲ್ವ ಹೋರಾಟ ಮುಂದುವರಿಸಿದರು. 5ನೇ ವಿಕೆಟಿಗೆ 102 ರನ್ ಒಟ್ಟುಗೂಡಿತು. ಇಬ್ಬರದೂ 58 ರನ್ ಗಳಿಕೆ. ಇವರಲ್ಲಿ ಮ್ಯಾಥ್ಯೂಸ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಒಂದು ಹಂತದಲ್ಲಿ 24 ರನ್ ಮಾಡುವಷ್ಟರಲ್ಲಿ 5 ವಿಕೆಟ್ ಕಳೆದು ಕೊಂಡಿತ್ತು. ಆದರೆ ಮುಶ್ಫಿಕರ್ ರಹೀಂ ಅಜೇಯ 175 ರನ್ (355 ಎಸೆತ, 21 ಬೌಂಡರಿ) ಮತ್ತು ಲಿಟನ್ ದಾಸ್ 141 ರನ್ (246 ಎಸೆತ, 16 ಬೌಂಡರಿ, 1 ಸಿಕ್ಸರ್) ಬಾರಿಸಿ ಅಮೋಘ ಪ್ರತಿಹೋರಾಟ ಸಂಘಟಿಸಿದರು. 6ನೇ ವಿಕೆಟಿಗೆ 271 ರನ್ ಒಟ್ಟುಗೂಡಿತು. ಶ್ರೀಲಂಕಾ ಪರ ಕಸುನ್ ರಜಿತ 5 ಹಾಗೂ ಅಸಿತ ಫೆರ್ನಾಂಡೊ 4 ವಿಕೆಟ್ ಕೆಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.