ಏಷ್ಯನ್ ಕಪ್ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Team Udayavani, May 26, 2022, 6:40 AM IST
ಜಕಾರ್ತಾ: ಹಾಲಿ ಚಾಂಪಿಯನ್ ಭಾರತವು ಗುರುವಾರ ನಡೆಯುವ ಏಷ್ಯನ್ ಕಪ್ ಪುರುಷರ ಹಾಕಿ ಕೂಟದ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯ ತಂಡವನ್ನು ಎದುರಿಸಲಿದೆ.
ಭಾರತವು ನಾಕೌಟ್ ಹಂತಕ್ಕೇರಬೇಕಾದರೆ ಭಾರೀ ಅಂತರದ ಗೆಲುವು ದಾಖಲಿಸಬೇಕಾಗಿದೆ ಮಾತ್ರವಲ್ಲದೇ “ಎ’ ಬಣದ ಇನ್ನೊಂದು ಪಂದ್ಯದಲ್ಲಿ ಜಪಾನ್ ಪಾಕಿಸ್ಥಾನವನ್ನು ಸೋಲಿಸಬೇಕಾಗಿದೆ.
ಒಂದು ಡ್ರಾ ಮತ್ತು ಒಂದು ಸೋಲಿನಿಂದಾಗಿ ಭಾರತ ಇದೀಗ “ಎ’ ಬಣದಲ್ಲಿ ಮೂರನೇ ಸ್ಥಾನದಲ್ಲಿದೆ. ಜಪಾನ್ (ಆರಂಕ) ಅಗ್ರಸ್ಥಾನದಲ್ಲಿದ್ದರೆ ಪಾಕಿಸ್ಥಾನ (4 ಅಂಕ) ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಭಾರತ ಗುರುವಾರದ ಪಂದ್ಯದಲ್ಲಿ ಇಂಡೋನàಶ್ಯವನ್ನು ಭಾರೀ ಅಂತರದಿಂದ ಸೋಲಿಸಿದರೆ ನಾಕೌಟ್ ಹಂತಕ್ಕೇರುವುದನ್ನು ಖಾತರಿಪಡಿಸುವುದಿಲ್ಲ ಬದಲಾಗಿ ಜಪಾನ್ ತಂಡ ಪಾಕಿಸ್ಥಾನವನ್ನುಸೋಲಿಸುವುದನ್ನು ನೋಡಬೇಕಾಗಿದೆ.
ಸರ್ದಾರ್ ಸಿಂಗ್ ಮಾರ್ಗದರ್ಶನದಲ್ಲಿ ಭಾರತೀಯ ತಂಡವು ಯುವ ತಂಡವೊಂದನ್ನು ಈ ಕೂಟದಲ್ಲಿ ಕಣಕ್ಕೆ ಇಳಿಸಿತ್ತು. ಇದರಲ್ಲಿ ಬಿರೇಂದ್ರ ಲಾಕ್ರ ಮತ್ತು ಎಸ್‌ವಿ ಸುನೀಲ್ ಅವರಂತಹ ಕೆಲವು ಹಿರಿಯ ಆಟಗಾರರೂ ಇದ್ದರು. ಆದರೂ ಭಾರತ ನಿರೀಕ್ಷಿತ ನಿರ್ವಹಣೆ ನೀಡಲು ವಿಫಲವಾಗಿದೆ.
ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ಕೊನೆ ಹಂತದಲ್ಲಿ ಎದುರಾಳಿಗೆ ಗೋಲು ಬಿಟ್ಟುಕೊಟ್ಟ ಕಾರಣ ಪಂದ್ಯ 1-1ರಿಂದ ಡ್ರಾ ಗೊಂಡಿತ್ತು. ಈ ಮೊದಲು ಭಾರತ ಜಪಾನ್ ಕೈಯಲ್ಲಿ 2-5 ಗೋಲುಗಳಿಂದ ಸೋತಿತ್ತು. ತಂಡದ ಕಳಪೆ ನಿರ್ವಹಣೆಗೆ ಯುವ ಆಟಗಾರರ ಅನನುಭವವೇ ಪ್ರಮುಖ ಕಾರಣ ವಾಗಿದೆ. ಕಳೆದ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ ಹಲವು ಆಟಗಾರರು ಈ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.