ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ; ಜೂನ್‌ನಿಂದಲೇ ಸ್ಪೋಕನ್ ಇಂಗ್ಲಿಷ್ ತರಬೇತಿ
Team Udayavani, May 26, 2022, 6:25 AM IST
ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ಹಾಸ್ಟೆಲ್‌ಗಳ ಮಕ್ಕಳಿಗೆ ಮಾತ್ರ ಯೋಜನೆ ಅನ್ವಯ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಕೂಡ ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳೇ ಹೆಚ್ಚಿದ್ದು, ಅವರಿಗೂ ತರಬೇತಿ ಆರಂಭಿಸಬೇಕು ಎಂಬ ಬೇಡಿಕೆ ಇದೆ.
ಉಡುಪಿ: ಸರಕಾರಿ ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈಗಾಗಲೇ ಕರಾಟೆ ತರಬೇತಿ ಆರಂಭಿಸಿರುವ ಸರಕಾರ, 2022-23ನೇ ಸಾಲಿನಿಂದ ಮೆಟ್ರಿಕ್ ಅನಂತರ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಇರುವ ಬಾಲಕ ಹಾಗೂ ಬಾಲಕಿಯರಿಗೆ ನ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 1,139 ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯಗಳ 1.27 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ “ಸ್ಫೂರ್ತಿಯ ನಡೆ’ ಎಂಬ ಯೋಜನೆಯಡಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ದ.ಕ. ಮತ್ತು ಉಡುಪಿಯ 72 ಹಾಸ್ಟೆಲ್‌ಗಳ 7,900ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದ ರಿಂದ ಉಪಯೋಗ ಆಗಲಿದೆ.
ತರಬೇತಿ ಹೇಗಿರಲಿದೆ?
ಮುಂದಿನ ಜೂನ್‌ನಿಂದಲೇ ಆರಂಭಿಸಿ 2023ರ ಮಾರ್ಚ್ ವರೆಗೆ ಪ್ರತೀ ತಿಂಗಳು ತಲಾ ಒಂದು ಗಂಟೆಯ 15 ತರಗತಿ ನಡೆಸಿ ಆಂಗ್ಲ ಭಾಷೆಯಲ್ಲಿ ಮಾತನಾಡಲು ಕಲಿಸಲಾಗುವುದು. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹಾಸ್ಟೆಲ್‌ನಲ್ಲಿ ಹೆಚ್ಚಿರುವುದರಿಂದ ಅವರ ಸಂವಹನ ಕೌಶಲ ಹೆಚ್ಚಿಸುವುದು ಇದರ ಉದ್ದೇಶ.
ತರಬೇತಿ ನೀಡುವವರ್ಯಾರು?
ಹಾಸ್ಟೆಲ್ ವ್ಯಾಪ್ತಿಯ ಸರಕಾರಿ ಪ. ಪೂರ್ವ ಕಾಲೇಜುಗಳ ಇಂಗ್ಲಿಷ್ ಉಪ ನ್ಯಾಸಕರು ತರಬೇತಿ ನೀಡಲಿದ್ದಾರೆ. ಅವರ ಕೊರತೆ ಇದ್ದಲ್ಲಿ ಅನುದಾನಿತ ಅಥವಾ ಅನು ದಾನ ರಹಿತ ಪಿಯು ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತದೆ. ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಉಪನ್ಯಾಸಕಿ ಯರು ಅಥವಾಮಹಿಳಾ ತರಬೇತುದಾರರು ಕಲಿಸಿಕೊಡಲಿದ್ದಾರೆ. ಉಪನ್ಯಾಸಕರಿಗೆ ತಿಂಗಳಿಗೆ ಗರಿಷ್ಠ 3,000 ರೂ. ಗೌರವಧನ ನೀಡಲಾಗುತ್ತದೆ.
ಫಲಾನುಭವಿಗಳು
ಉಡುಪಿ ಜಿಲ್ಲೆಯಲ್ಲಿರುವ ಮೆಟ್ರಿಕ್ ಅನಂತರ 9 ಬಾಲಕರ ಹಾಸ್ಟೆಲ್‌ಗಳಲ್ಲಿ 1,025 ಹಾಗೂ 14 ಬಾಲಕಿಯರ ಹಾಸ್ಟೆಲ್‌ಗಳಲ್ಲಿ 1,730 ಸೇರಿದಂತೆ 23 ಹಾಸ್ಟೆಲ್‌ಗಳಲ್ಲಿ 2,755 ವಿದ್ಯಾರ್ಥಿಗಳ ಮಿತಿಯಿದೆ. ದ.ಕ. ಜಿಲ್ಲೆಯ 17 ಬಾಲಕರ ಹಾಸ್ಟೆಲ್‌ಗಳಲ್ಲಿ 1,750 ಹಾಗೂ 32 ಬಾಲಕಿಯರ ಹಾಸ್ಟೆಲ್‌ಗಳಲ್ಲಿ 3,455 ಸೇರಿದಂತೆ 49 ಹಾಸ್ಟೆಲ್‌ಗಳಲ್ಲಿ 5,205 ವಿದ್ಯಾರ್ಥಿಗಳ ದಾಖಲಾತಿ ಮಿತಿ ನೀಡಲಾಗಿದೆ. ಜತೆಗೆ ಎರಡು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ.
ಸ್ಫೂರ್ತಿಯ ನಡೆ ಯೋಜನೆಯಡಿ ಬಿಸಿಎಂ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ 5 ಕೋ.ರೂ. ವೆಚ್ಚದಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ನಿರ್ಧರಿಸಿದ್ದು, ಇಲಾಖೆಯಿಂದ ಆದೇಶ ಹೊರಡಿಸಿದ್ದೇವೆ. ಜೂನ್‌ನಲ್ಲಿ ಪ್ರಕ್ರಿಯೆ ಜಾರಿಯಾ ಗಲಿದೆ.
– ಕೋಟ ಶ್ರೀನಿವಾಸ ಪೂಜಾರಿ,
ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.