ಬಿಜೆಪಿಗೆ ಡಿಕೆಶಿ ಅವರಂಥ ಕಳ್ಳರ ಅವಶ್ಯಕತೆ ಇಲ್ಲ: ಯತ್ನಾಳ್

ವಿಜಯಪುರ ಜಿಲ್ಲೆಯಲ್ಲೂ ಇಂಥ ಇಬ್ಬರು ಬಿಜೆಪಿ ಸೇರಲು ನಾಟಕ ಮಾಡುತ್ತಿದ್ದಾರೆ

Team Udayavani, May 26, 2022, 7:34 PM IST

yatnal

ವಿಜಯಪುರ : ಬಿಜೆಪಿ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಅವರಂಥ ಕಳ್ಳರ ಅಗತ್ಯವಿಲ್ಲ, ವಿಜಯಪುರ ಜಿಲ್ಲೆಯಲ್ಲೂ ಅಂಥ ಇಬ್ಬರು ಕಳ್ಳರು ಬಿಜೆಪಿ ಸೇರಲು ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಾಸ್ತ್ರ ಪ್ರಯೋಗಿಸಿದರು.

ಗುರುವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಶರಣಾಗಲು ಯಾರು ಹೇಳಿದರು. ಬಿಜೆಪಿ ಪಕ್ಷಕ್ಕೆ ಇಂಥ ಕಳ್ಳರ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಲೂಟಿ ಮಾಡಿರುವ ವಿಜಯಪುರ ಜಿಲ್ಲೆಯಲ್ಲೂ ಇಂಥ ಇಬ್ಬರು ಬಿಜೆಪಿ ಸೇರಲು ನಾಟಕ ನಡೆಸಿದ್ದಾರೆ ಎಂದರು.
ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಇಡಿ, ಸಿಬಿಐ ಸೇರಿದಂತೆ ಸ್ವತಂತ್ರ ಅಧಿಕಾರ ಇರುವ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧಿನದಲ್ಲಿ ಇರುವುದಿಲ್ಲ. ಹೀಗಾಗಿ ಇಡಿ ದೋಷಾರೋಪ ಸಲ್ಲಿಸಿರುವ ಇಡಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇಲ್ಲ, ಸ್ವತಂತ್ರ ನಿರ್ವಹಣೆ ಮಾಡುತ್ತವೆ ಎಂದರು.

ಈ ಹಿಂದೆ ಇದೇ ಇಡಿ ವಿಜಯೇಂದ್ರ ಅವರ ಬೆಂಬಲಿಗ ಉಮೇಶ ಕಂಡಕ್ಟರ್ ಎಂಬವರ ವಿರುದ್ಧ ದಾಳಿ ಆಗಿತ್ತು. ಇದು ದುರುದ್ದೇಶದಿಂದ ಕೇಂದ್ರ ಸರ್ಕಾರ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳಲು ನಡೆಸಿದ ದಾಳಿ ಎಂದೆಲ್ಲ ಮಾಧ್ಯಮಗಳು ಬಿಂಬಿಸಿದವು ಎಂದರು.

ಕೇಂದ್ರದಲ್ಲಿ ಸಚಿವರಾಗಿದ್ದ ಸಂಸದ ಜಿ.ಎಂ.ಸಿದ್ಧೇಶ್ವರ, ಪ್ರಭಾಕರ ಕೋರೆ ಸೇರಿದಂತೆ ಹಲವರ ವಿರುದ್ಧ ದಾಳಿ ಮಾಡಿದ್ದಾರೆ. ನನ್ನ ವಿರುದ್ಧವೂ ಲೋಪ ಕಂಡು ಬಂದಲ್ಲಿ ದಾಳಿ ಮಾಡಬಹುದು ಎಂದು ಇಡಿ ಕಾರ್ಯವನ್ನು ಶ್ಲಾಘಿಸಿದರು.

ಇಂಥ ಕಳ್ಳರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಲ್ಲಿ ಪಕ್ಷದ ಸಿದ್ಧಾಂತ ಎಲ್ಲಿ ಉಳಿಯುತ್ತದೆ. ಮೊನ್ನೆ ಸಚಿವ ಗೋವಿಂದ ಕಾರಜೋಳ ಅವರು ಒಂದಿಬ್ಬರನ್ನು ಪಕ್ಷಕ್ಕೆ ಕರೆ ತಂದಿದ್ದಾರೆ. ಹೀಗಾದರೆ ಪಕ್ಷಕ್ಕೆ ದುಡಿದವರು ಎಲ್ಲಿ ಹೋಗಬೇಕು. ಮೇಲಿನವರು ಇಂಥವರನ್ನು ಪಕ್ಷಕ್ಕೆ ಕರೆ ತಂದರೆ ಕಾರ್ಯಕರ್ತರು ಎಲ್ಲಿ ಹೋಗಬೇಕು ಎಂದು ವರಿಷ್ಠರನ್ನು ಪ್ರಶ್ನಿಸುತ್ತೇನೆ ಎಂದರು.

ಬಬಲೇಶ್ವರ ಕ್ಷೇತ್ರದಲ್ಲಿ ಒಂದು ಏಳೆಂಟು ಗಿರಾಕಿ ಕಾಯುತ್ತಿವೆ. ಅಣ್ಣ ಕಾಂಗ್ರೆಸ್‍ನಲ್ಲಿ ಸೋನಿಯಾ ಗಾಂಧೀಗಾಗಿ ಜೀವ ಕೊಡುತ್ತೇನೆ ಎನ್ನುತ್ತಾನೆ. ತಮ್ಮ ನರೇಂದ್ರ ಮೋದಿ ಅವರಿಗೆ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ. ಇಂಥವರನ್ನು ಪಕ್ಷ ಅವಕಾಶ ನೀಡಬಾರದು. ಪಕ್ಷಕ್ಕೆ ದುಡಿದವರಿಗೆ ಅವಕಾಶ ನೀಡಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹಾಗೂ ಅವರ ಸಹೋದರ ಬಿಜೆಪಿ ನಾಯಕ ವಿಜುಗೌಡ ಪಾಟೀಲ ಅವರನ್ನು ಕುಟುಕಿದರು.

ಎಲ್ಲ ವಿಷಯವನ್ನು ತೆಗೆದು ಹಾಕಬೇಕು

ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಂತ ಕನಕದಾಸರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಯತ್ನಾಳ್ ಅವರು, ನಮಗೆಲ್ಲ ಶಾಲೆಯ ಪಠ್ಯದಲ್ಲಿ ಅಕ್ಬರ್, ಔರಂಗಜೇಬ್, ಟಿಪ್ಪು ಸುಲ್ತಾನ್ ಎಂದಷ್ಟೇ ಕಲಿಸಲಾಯಿತು. ಆದರೆ ನಮಗೆ ನಮ್ಮ ಸತ್ಪುರುಷರ ಹೆಸರುಗಳೇ ಗೊತ್ತಿರಲಿಲ್ಲ. ಪಠ್ಯದಲ್ಲಿ ನಾವು ಕಲಿತವರೆಲ್ಲ ಕಳ್ಳರು, ಲಫಂಗರು, ಲಂಪಟ, ದರೋಡೆಕೋರರು ಎಂದು ಈಗ ನಮಗೆ ಗೊತ್ತಾಗಿದೆ. ಪಠ್ಯದಲ್ಲಿರುವ ಇಂಥವರ ಕುರಿತ ಎಲ್ಲ ವಿಷಯವನ್ನು ತೆಗೆದು ಹಾಕಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಗ್ರಹಿಸಿದರು.

ನಾನು ಸಂಸದನಾಗಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ವೆಂಕಯ್ಯ ನಾಯ್ಡು ಅವರ ಮನೆ ಬಳಿ ರಸ್ತೆಯೊಂದಕ್ಕೆ ಔರಂಗಜೇಬ್ ರೋಡ್ ಎಂಬ ಹೆಸರಿತ್ತು. ಲಕ್ಷಾಂತರ ಹಿಂದೂಗಳ ಕಗ್ಗೊಲೆ ಮಾಡಿದ ಇವರ ಹೆಸರು ಯಾಕೆ ರಸ್ತೆಗೆ ಇರಿಸಿದ್ದಾರೆ ಎಂದು ಪ್ರಶ್ನಿಸಿದ್ದೆ ಎಂದರು.

ಸದರಿ ರಸ್ತೆಗೆ ಔರಂಣಗಜೇಬನ ಹೆಸರು ತೆಗೆದು ದೇಶಕಂಡ ಅಪರೂಪರ ರಾಷ್ಟ್ರಪತಿಯಾಗಿದ್ದ ಡಾಎಪಿಜೆ ಅಬ್ದುಲ್ ಕಲಾಂ ಹೆಸರು ನಾಮಕರಣ ಮಾಡಿದ್ದಾರೆ. ನಮ್ಮ ನಗರಕ್ಕೆ ಇದ್ದ ಬಿಜಾಪುರ ಎಂಬ ಹೆಸರನ್ನು ಬದಲಿಸಿ ವಿಜಯಪುರ ಎಂದು ಮರುನಾಮಕರಣ ಮಾಡಲಾಗಿದೆ. ನಾನು ನಗರ ಶಾಸಕನಾದ ಬಳಿಕ ಇಲ್ಲಿನ ಅನೇಕ ರಸ್ತೆಗಳಿಗೆ ದೇಶಭಕ್ತ, ರಾಷ್ಟ್ರ ನಾಯಕರ ಹೆಸರು ನಾಮಕರಣ ಮಾಡಲಾಗಿದೆ ಎಂದರು.

ಇದನ್ನೂ ಓದಿ : ತಗ್ಗಿಗೆ ಉರುಳಿದ ಕಾರು: ಬಿಜೆಪಿ ಶಾಸಕರ ಆಪ್ತ ಸಹಾಯಕ ಪಾರು

ಪಠ್ಯ ಕೇಸರೀಕರಣ ಆಧಾರ ರಹಿತ ಆರೋಪ : ಸಚಿವ ಭೈರತಿ

ಶಿಕ್ಷಣದಲ್ಲಿ ಕೇಸರಿಕರಣ ಮತ್ತೊಂದು ಮಗದೊಂದು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದವರ ಪಠ್ಯ ಅಳವಡಿಸಲಾಗಿದೆ. ಯಾವ ಪಠ್ಯ ಅಳವಡಿಕೆ ಕುರಿತು ತಜ್ಞರ ಅಭಿಪ್ರಾಯ ಅನುಸರಿಸಲಾಗಿದೆ. ಇಂಥದ್ದೆ ಪಠ್ಯ ಕೈಬಿಟ್ಟಿದ್ದಾರೆ ಅನ್ನೋದಕ್ಕೆ ಪುರಾವೆ ಇಲ್ಲದೇ ಕೆಲವರು ಆರೋಪಿಸುತ್ತಿದ್ದು, ಇಂಥ ಬೆಳವಣಿಗೆ ಸರಿಯಲ್ಲ ಎಂದು ಸಚಿವ ಬೈರತಿ ಬಸವರಾಜ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಕೇಸರಿಕರಣ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ನಾಯಕರ ಆರೋಪ ನಿರಾಧಾರ ಎಂದರು.

ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿಲ್ಲ, ನಿರಾಸೆಯಾಗುವ ಅಗತ್ಯವೂ ಇಲ್ಲ. ಯುವ ನಾಯಕರಾಗಿರುವ ವಿಜಯೇಂದ್ರ ಅವರು ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರ ಪಕ್ಷ ಸಂಘಟನೆಯನ್ನು ಪರಿಗಣಿಸಿ ಪಕ್ಷದ ವರಿಷ್ಠರು ಉತ್ತಮ ಸ್ಥಾನ ನೀಡುವ ವಿಶ್ವಾಸವಿದೆ ಎಂದರು.

ಟಾಪ್ ನ್ಯೂಸ್

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.