ಸುಪ್ರಿಯಾ ಇಂಟರನ್ಯಾಶನಲ್‌ ಉದ್ಘಾಟನೆ

ಸಿದ್ದರಾಮಯ್ಯ, ಕಾಗೇರಿ, ಶಿವರಾಜಕುಮಾರ್‌, ಆರ್‌.ವಿ.ದೇಶಪಾಂಡೆ ಸೇರಿ ಹಲವು ಪ್ರಮುಖರು ಭಾಗಿ

Team Udayavani, May 27, 2022, 2:53 PM IST

17

ಶಿರಸಿ: ಒಂದು ಹೋಟೆಲ್‌ ಉದ್ದಿಮೆ ಯಶಸ್ಸಿಗೆ ಸ್ವಚ್ಚತೆ, ಆಹಾರ, ಗ್ರಾಹಕರ ಸೇವೆಗೆ ಮೊದಲ ಆದ್ಯತೆ ಕೊಡಬೇಕು ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮಾಡಿದರು.

ಗುರುವಾರ ಅವರು ನಗರದಲ್ಲಿ ಉದ್ಯಮಿ ಗೀತಾ ಹಾಗೂ ಭೀಮಣ್ಣ ನಾಯ್ಕ, ಅಶ್ವಿ‌ನ್‌ ನಾಯ್ಕ ಆರಂಭಿಸಿದ ನೂತನ ಸುಪ್ರಿಯಾ ಇಂಟರ್‌ನ್ಯಾಶನಲ್‌ ಹೋಟೆಲ್‌ ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ನಮ್ಮಲ್ಲೂ ಪ್ರವಾಸೋದ್ಯಮದ ಯಶಸ್ವಿಗೆ ಪ್ರವಾಸಿಗರಿಗೆ ಅನೇಕ ಸೌಲಭ್ಯ ಬೇಕು. ಎಲ್ಲ ಪ್ರವಾಸಿ ತಾಣಗಳಿಗೂ ಮೂಲಭೂತ ಸೌಕರ್ಯ ಬೇಕಾಗಿದೆ ಎಂದರು.

ಯಾವುದೇ ಉದ್ಯಮ ಬೆಳೆದರೆ ಉದ್ಯೋಗ ಸೃಷ್ಟಿಯಾಗುತ್ತದೆ. ದೇಶದ, ರಾಜ್ಯದ ಆರ್ಥಿಕತೆ ಬೆಳೆಯಲು ಉದ್ಯಮ ಸೃಷ್ಟಿ ಆಗಬೇಕು. ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಿದ್ದರೆ ಯಾವುದೇ ಉದ್ದಿಮೆ ಬೆಳೆಯುತ್ತದೆ. ಮುಖ್ಯವಾಗಿ ಯಾವುದೇ ಉದ್ದಿಮೆಗೆ ಬಂಡವಾಳ ಹೂಡಲು ವಾತಾವರಣ ಚೆನ್ನಾಗಿರಬೇಕು ಎಂದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಅಭಿವೃದ್ಧಿ ಪಥದಲ್ಲಿ ಶಿರಸಿ ಮುನ್ನಡೆಯಲು ಸರಕಾರ ಹಾಗೂ ಖಾಸಗಿ ಜನರ ಸಹಭಾಗಿತ್ವ ಬೇಕು. ಅಂಥ ಸಹಭಾಗಿತ್ವದಲ್ಲಿ ಶಿರಸಿಯಲ್ಲಿ ಇದೆ. ಖಾಸಗಿ ಸಹಕಾರದಿಂದ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಸುಪ್ರಿಯಾ ಇಂಟರನ್ಯಾಶನಲ್‌ ಈಗ ಶಿರಸಿಯ ಕಿರೀಟ ಆಗಿದೆ. ಎಲ್ಲರ ಜೊತೆ ಪ್ರೀತಿಯ ಒಡನಾಟ ಇಟ್ಟುಕೊಂಡು ಬೆಳೆದವರು ಭೀಮಣ್ಣ ಎಂದರು.

ಪ್ರಸಿದ್ಧ ಚಿತ್ರನಟ ಶಿವರಾಜ ಕುಮಾರ, 25 ವರ್ಷದ ಹಿಂದೆ ನಮ್ಮೂರ ಮಂದಾರ ಹೂವೆ ಶೂಟಿಂಗ್‌ಗೆ ಬಂದಿದ್ದೆ. 25 ದಿನಗಳ ಕಾಲ ಇಲ್ಲಿ ವಾಸ್ತವ್ಯ ಇದ್ದೆವು. ಶಿವಗಂಗೆ, ಸಾತೊಡ್ಡಿ, ಸಹಸ್ರಲಿಂಗ, ಯಾಣಗಳಿಗೆ ಹೋಗಿದ್ದೆವು. ಮಧ್ಯೆ ಒಂದೆರಡು ಸಲ ಬಂದಿದ್ದೆವು. ಭೀಮಣ್ಣ 37 ವರ್ಷದಿಂದ ಗೊತ್ತು. ಧನಾತ್ಮಕ ಚಿಂತನೆಯಿಂದ ಕೆಲಸ ಮಾಡಿ ಮುನ್ನುಗ್ಗುತ್ತಿದ್ದಾರೆ. ಒಂದು ಕುಟುಂಬದಂತೆ ಹೋಟೆಲ್‌ ಕೆಲಸ ಮಾಡಬೇಕು. ಇಡೀ ಕರ್ನಾಟಕದಲ್ಲಿ, ಭಾರತದಲ್ಲೂ ಹೆಸರು ಗಳಿಸಲಿ ಎಂದು ಆಶಿಸಿದರು.

ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಇದ್ದಾಗ ಅತಿ ಹೆಚ್ಚು ಹಣ ಪ್ರವಾಸೋದ್ಯಮಕ್ಕೆ ನೀಡಿದ್ದರು. ನಾನು ನೋಡಿದ ಹೋಟೆಲ್‌ನಲ್ಲಿ ದಿ ಬೆಸ್ಟ್‌ ಹೋಟೆಲ್‌ಗ‌ಳಲ್ಲಿ ಇದೂ ಒಂದು. ಬಂಡವಾಳ ಕೂಡ ಹಾಕಿದ್ದಾರೆ. ತಾಲೂಕು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅವಕಾಶ ಇದೆ ಎಂದರು.

ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ, ಕೃಷಿ ಜೊತೆಗೆ ಉದ್ದಿಮೆ ಜೊತೆ ನಡೆದು ಗಳಿಸಿದ ಅನುಭವ ಪಡೆದು ಈ, ಪ್ರವಾಸಿಗರಿಗೆ ಅಗತ್ಯ ಹೋಟೆಲ್‌ ಕಟ್ಟಿದ್ದಾರೆ ಎಂದರು.

ಚಿತ್ರನಟ, ಕಾಂಗ್ರೆಸ್‌ ಯುವ ನಾಯಕ ಮಧು ಬಂಗಾರಪ್ಪ, ಶಿರಸಿಗೆ ಈ ಹೋಟೆಲ್‌ ಒಂದು ಗರಿವಾಗಿದೆ. ವ್ಯವಹಾರಿಕವಾಗಿ ಇನ್ನಷ್ಟು ಹೋಟೆಲ್‌ ಆಗಲಿ. ಬಂಗಾರಪ್ಪ ಅವರ ಆಶೀರ್ವಾದ ನಿಮ್ಮ ಮೂಲಕ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಹೋಟೆಲ್‌ ಉದ್ದಿಮೆದಾರ ಭೀಮಣ್ಣ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಪ್ರವಾಸೋದ್ಯಮಕ್ಕೆ ಉತ್ತೇಜನ, ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂಬ ನಿರೀಕ್ಷೆ ಇದೆ. ಎಲ್ಲ ರೀತಿಯ ಸವಲತ್ತು ಸಿಗಬೇಕು ಎಂದು ಆರಂಭಿಸಿದ್ದೇವೆ ಎಂದರು.

ಪ್ರಮುಖರಾದ ತಿಲಕಕುಮಾರ, ಅನಿತಾ ಪವನಕುಮಾರ, ಸುಜಾತಾ ತಿಲಕಕುಮಾರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಜಯದೇವ ನಿಲೇಕಣಿ, ಅನಿತಾ ಮಧು, ಅಶೋಕ ಪಟ್ಟಣಗಾರ, ಚೇತನ್‌ ಕಾಮತ್‌ ಇತರರು ಇದ್ದರು. ಗೀತಾ ಭೀಮಣ್ಣ, ಅಶ್ವಿ‌ನ್‌ ನಾಯ್ಕ ಇದ್ದರು.

ಕಲಾವತಿ ಹೆಗಡೆ ಪ್ರಾರ್ಥಿಸಿದರು. ಕೆ.ಎನ್‌. ಹೊಸ್ಮನಿ ನಿರ್ವಹಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು, ಚಿನ್ನದ ಹುಡುಗಿ ಪ್ರೇರಣಾ ಶೇಟ್‌ ಅವಳನ್ನು ಗೌರವಿಸಲಾಯಿತು.

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.