ಕಳಚಿ ಬಿದ್ದ ಬಸ್ ಟೈರ್: ಅಪಾಯದಿಂದ ಪಾರು
Team Udayavani, May 27, 2022, 3:05 PM IST
ಆಲ್ದೂರು: ಚಿಕ್ಕಮಗಳೂರಿನಿಂದ -ಆಲ್ದೂರು ರಾಜ್ಯ ಹೆದ್ದಾರಿ 27 ರ ಮಾರ್ಗವಾಗಿ ಆಲ್ದೂರಿಗೆ ಬರುತ್ತಿದ್ದ ಕಡೂರು- ಮಂಗಳೂರು ಕೆಎಸ್.ಆರ್.ಟಿ.ಸಿ. ಬಸ್‌ನ ಮುಂಭಾಗದ ಬಲಬದಿಯ ಟೈರ್ ತೋರಣಮಾವು ಗ್ರಾಮದ ಬಳಿ ಕಳಚಿ ಬಿದ್ದಿದ್ದು ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸುತ್ತಿದ್ದ ಅವಘಡವೊಂದು ತಪ್ಪಿದ್ದು ಬಸ್‌ನಲ್ಲಿದ್ದ ಸುಮಾರು 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿದಿನ 8.30ಕ್ಕೆ ಆಲ್ದೂರು ಮಾರ್ಗವಾಗಿ ಈ ಬಸ್ ಸಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಮಂಗಳೂರು ಆಸ್ಪತ್ರೆಗೆ ಹೋಗುವವವರ ಸಂಖ್ಯೆ ಹೆಚ್ಚಿರುತ್ತದೆ. ಬೆಳಗ್ಗೆ 8- 30 ರ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು ಬಸ್ ರಸ್ತೆ ಮಧ್ಯೆಯೇ ನಿಂತ ಪರಿಣಾಮ ವಾಹನಗಳು ಸಾಗಲು ಜಾಗವಿಲ್ಲದೆ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜ್ಯಾಮ್ ಉಂಟಾಗಿತ್ತು. ಬೆಳಗ್ಗೆ ಕಚೇರಿಗಳಿಗೆ ತೆರಳುವ ನೌಕರರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು.
ಬೆಳಗ್ಗೆ ನಾವು ಬಸ್ ಹಿಂಬದಿಯಲ್ಲೇ ಬರುತ್ತಿದ್ದೆವು. ಬಸ್ ನಿಧಾನವಾಗಿ ಸಾಗುತ್ತಿತ್ತು. ತೋರಣಮಾವು ಗ್ರಾಮದ ಬಳಿ ಬಸ್‌ನ ಬಲಭಾಗದ ಟೈರ್ ಏಕಾಏಕಿ ಕಳಚಿದ ಪರಿಣಾಮ ಬಸ್ ಒಂಡೆದೆ ವಾಲಿತು. ಚಾಲಕ ನಿಧಾನವಾಗಿ ಬಸ್ ಅನ್ನು ನಿಯಂತ್ರಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಯಿತು ಎಂದು ಪ್ರತ್ಯಕ್ಷದರ್ಶಿ ಮೂರ್ತಿ ಪತ್ರಿಕೆಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.