ಮುಂಗಾರು ಹಂಗಾಮು ಬಿತ್ತನೆ ಬೀಜೋಪಚಾರ
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಅಶೋಕ ಪಿ. ಅವರಿಂದ ರೈತರಿಗೆ ತರಬೇತಿ
Team Udayavani, May 27, 2022, 3:21 PM IST
ರಾಣಿಬೆನ್ನೂರ: ಹನುಮನವ¾ಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಜಿಲ್ಲಾದ್ಯಂತ ಬಿತ್ತನೆ ಬೀಜಗಳ ಖರೀದಿ ಹಾಗೂ ಬಿತ್ತನೆ ತುಂಬಾ ಬಿರುಸುನಿಂದ ನಡೆದಿದೆ ಎಂದರು.
ಪ್ರತಿ ವರ್ಷ ರೈತರು ಬಿತ್ತನೆ ಮಾಡಲು ಪ್ರಮಾಣೀಕರಿಸಿದ ಬೀಜಗಳನ್ನು ಖರೀದಿಸುವುದು ಸೂಕ್ತವಾದರೂ, ಇದರಿಂದ ರೈತರಿಗೆ ಖರ್ಚಿನ ಹೊರೆ ಹೆಚ್ಚಾಗುತ್ತದೆ. ಹಾಗಾಗಿ, ಒಮ್ಮೆ ಖರೀದಿಸಿದ ಸುಧಾರಿತ ತಳಿಗಳ (ಹೈಬ್ರಿಡ್ ತಳಿ ಹೊರತುಪಡಿಸಿ) ಪ್ರಮಾಣೀಕೃತ ಬೀಜಗಳನ್ನು ಸಾಮಾನ್ಯವಾಗಿ 2-3 ವರ್ಷ ಅದೇ ತಳಿಯ ಬೀಜಗಳನ್ನು ಬಿತ್ತನೆಗಾಗಿ ಬಳಸಬಹುದು. ದ್ವಿದಳ ಧಾನ್ಯ ಬೆಳೆಗಳಾದ ಶೇಂಗಾ, ಸೋಯಾ, ಅವರೆ, ಕಡಲೆ, ಹೆಸರು, ಅಲಸಂದೆ, ಅವರೆ ಮುಂತಾದ ಬೀಜಗಳಿಗೆ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ರಂಜಕ ಕರಗುವಂತಹ ಗೊಬ್ಬರಗಳು ಹಾಗೂ ಏಕದಳ ಧಾನ್ಯಗಳ ಬೀಜಗಳಿಗೆ ಅಜೋಸ್ಪಿರಿಲಮ್‌ಗಳಿಂದ ಪ್ರತಿ ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡಬೇಕೆಂದರು.
ಜೈವಿಕ ಅಣುಜೀವಿಗಳಿಂದ ಬೀಜೋಪಚಾರ ಮಾಡಬೇಕಾದರೆ ಮೊದಲು ಅಂಟು ದ್ರಾವಣ ತಯಾರಿಸಬೇಕು. ಅದಕ್ಕಾಗಿ 250 ಮಿ.ಲೀ. ನೀರಿನಲ್ಲಿ 25 ಗ್ರಾಂ ಬೆಲ್ಲ ಅಥವಾ ಸಕ್ಕರೆ ಕರಗಿಸಿ 15 ನಿಮಿಷ ಕಾಲ ಕುದಿಸಿ ಆರಿಸಿ ಅಗತ್ಯವಿದ್ದಷ್ಟು ಅಂಟು ದ್ರಾವಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ತೆಗೆದುಕೊಂಡು ಎಕರೆಗೆ ಶಿಫಾರಸ್ಸು ಮಾಡುದ ಅಣುಜೀವಿ ಗೊಬ್ಬರವನ್ನು ಬೆರೆಸಿ ಚೆನ್ನಾಗಿ ಲೇಪನ ಮಾಡಿ, ಬಟ್ಟೆ ಅಥವಾ ಗೋಣಿ ಚೀಲದ ಮೆಲೆ ನೆರಳಲ್ಲಿ ಒಣಗಿಸಿ ಬೀಜ ಬಿತ್ತನೆಗೆ ಬಳಸಬೇಕೆಂದರು.
ಬೀಜಕ್ಕೆ ಶೀಲೀಂಧ್ರ ನಾಶಕಗಳ ಲೇಪನದ ನಂತರ ಈ ಅಣುಜೀವಿ ಗೊಬ್ಬರಗಳ ಲೇಪನ ಮಾಡಬೇಕು. ಬಿತ್ತನೆ ಬೀಜಕ್ಕೆ ಮೇಲೆ ತಿಳಿಸಿದಂತೆ ಅಗತ್ಯವಾದ ಬೀಜೋಪಚಾರ ಮಾಡಿದಾಗ ಮಾತ್ರ ಕಡಿಮೆ ಖರ್ಚಿನ ಹಾಗೂ ಹೆಚ್ಚು ಗುಣಮಟ್ಟದ ಫಸಲು ಪಡೆಯಲು ಸಾಧ್ಯ. ಅಲ್ಲದೇ, ಬೆಳೆಗೆ ಪೂರೈಸಿದ ಗೊಬ್ಬರ, ನೀರು, ಸಸ್ಯ ಸಂರಕ್ಷಣೆ ಹಾಗೂ ಕಾರ್ಮಿಕ ಶ್ರಮದ ಸದುಪಯೋಗವಾಗುವುದೆಂದು ತಿಳಿಸಿದರು.
ನಂತರ ಬಿತ್ತನೆ ಬೀಜಗಳಿಗೆ ವಿವಿಧ ಕೀಟ ನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಕಡಿಮೆ ಖರ್ಚಿನಲ್ಲಿ ಬೆಳೆಗೆ ಬರಬಹುದಾದ ಅನೇಕ ರೋಗ ಮತ್ತು ಕೀಟದ ಹಾವಳಿ ತಪ್ಪಿಸಬಹುದಾಗಿದೆ. ಸಾಮಾನ್ಯವಾಗಿ ಬೀಜಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕಾಗಿ ಸಸಿ ಮಡಿಯಲ್ಲಿ ಕಂಡು ಬರುವ ಕೊಳೆರೋಗ ನಿಯಂತ್ರಿಸಲು ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಥೈರಾಮ್ ಅಥವಾ ಕ್ಯಾಪಾrನ್ ಶಿಲೀಂಧ್ರ ನಾಶಕ ಪುಡಿ ಲೇಪನ ಮಾಡುವುದರಿಂದ ಟೊಮೆಟೋ, ಬದನೆ, ಮೆಣಸಿನಕಾಯಿ ಮುಂತಾದ ಬೆಳೆಗಳಲ್ಲಿ ಸಸಿ ಸಾಯುವ ರೋಗದಿಂದ ರಕ್ಷಿಸಬಹುದು.
ಶೇಂಗಾ, ಹತ್ತಿ, ಕಡಲೆ ಹಾಗೂ ತೊಗರಿ ಬೆಳೆಗಳಿಗೆ ಬರುವ ಬುಡಕೊಳೆ ರೋಗದ ನಿಯಂತ್ರಣಕ್ಕಾಗಿ ಪ್ರತಿ ಕಿ.ಗ್ರಾಂ ಬೀಜಕ್ಕೆ 4-6 ಗ್ರಾಂ ಟ್ರೆ„ಕೋಡರ್ಮಾ ಜೈವಿಕ ಅಣುಜೀವಿಯಿಂದ ಲೇಪನ ಮಾಡುವುದರಿಂದ ಬೆಳೆ ರಕ್ಷಿಸಬಹುದೆಂದು ತಿಳಿಸಿದರು.
ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್. ಮಾತನಾಡಿ, ಮಣ್ಣು ಪರೀಕ್ಷೆ ಆಧಾರಿತ ಮೇಲೆ ಬಿತ್ತುವ ಪೂರ್ವದಲ್ಲಿ ರಸಗೊಬ್ಬರಗಳ ಬಳಕೆ ಮಾಡಬೇಕು. ತದನಂತರ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಸಿಂಪರಣೆ ಮೂಲಕ ಬೆಳೆಗಳಿಗೆ ಸಿಂಪರಣೆ ಮಾಡಿದಲ್ಲಿ ಪೋಷಕಾಂಶಗಳ ಕೊರತೆ ನಿಗಿಸಬಹುದು. ಬೇಸಿಗೆಯಲ್ಲಿ ಬೆಳೆದ ಹತ್ತಿ ಬೆಳೆಗೆ ಅಲ್ಲಲ್ಲಿ ಮೂಪು ಉದುರುವ ಲಕ್ಷಣಗಳು ಕಂಡು ಬರುತ್ತಿದ್ದು, ಪ್ರತಿ ಲೀಟರ್‌ಗೆ ನೀರಿಗೆ 10 ಗ್ರಾಂ ನೀರಿನಲ್ಲಿ ಕರಗುವ ಪೊಟ್ಯಾಷ್ ನೈಟ್ರೇಟ್ ಸಿಂಪಡಿಸಬೇಕೆಂದು ತಿಳಿಸಿದರು.
ಪಶು ವಿಜ್ಞಾನಿ ಡಾ| ಮಹೇಶ ಕಡಗಿ ಅವರು, ಕುರಿಗಳ ಆರೋಗ್ಯದ ಬಗ್ಗೆ ಲಸಿಕೆಗಳನ್ನು ನೀಡಲು ಸವಿಸ್ತಾರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರೈತರಾದ ದಿಳ್ಳೆಪ್ಪ ಬಣಕಾರ, ಹೊನ್ನಪ್ಪ ಗೌಡ್ರು, ಭೀರಪ್ಪ ಎರೇಕುಪ್ಪಿ, ಕರಿಯಪ್ಪ ಬೀರಾಳ, ನಿಂಗಪ್ಪ ಬಡಪ್ಪಳವರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.