ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು
Team Udayavani, May 27, 2022, 11:52 PM IST
ಕುಂದಾಪುರ: ಕುಂದಾಪುರ ತಾ.ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಿಗೆ ಎರಡು ವರ್ಷಗಳಿಂದ ಅನುದಾನ ಬಿಡುಗಡೆ ಯಾಗದ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ. ಪೂರ್ಣಗೊಂಡ 13 ಕಾಮಗಾರಿಗಳ 47.69 ಲಕ್ಷ ರೂ. ಬಿಡುಗಡೆಯಾಗಿದೆ.
ರಾಜ್ಯದ ಉಳಿದೆಲ್ಲ ತಾ.ಪಂ.ಗಳಿಗೆ ಹಣ ಬಂದರೂ ಕುಂದಾ ಪುರ ಮಾತ್ರ ಬಾಕಿಯಾಗಿತ್ತು. 15ನೇಹಣಕಾಸು ಯೋಜನೆಯಡಿ 2020-21 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ 8 ಕೋ.ರೂ., ದ.ಕ. ಜಿಲ್ಲೆಗೆ 10 ಕೋ.ರೂ. ಬಿಡುಗಡೆ ಯಾಗಿತ್ತು. 2020ರ ಜೂ. 19ರಂದು ಒಂದನೇ ಕಂತಿನ ಅನಿರ್ಬಂಧಿತ ಅನುದಾನ, ಜೂ. 22ರಂದು ಅನಿರ್ಬಂಧಿತ ಅನುದಾನ, 2021ರ ಫೆ. 3ರಂದು ಎರಡನೇ ಕಂತಿನ ಅನಿರ್ಬಂಧಿತ ಅನುದಾನ, 2021ರ ಮಾ. 30ರಂದು ಎರಡನೇ ಕಂತಿನ ನಿರ್ಬಂಧಿತ ಅನುದಾನ ಬಿಡುಗಡೆಯಾಗಿತ್ತು. ಮೊದಲ ಕಂತಿನ ಅನುದಾನ 47.69 ಲಕ್ಷ ರೂ. 2020ರ ಆ. 29ರಂದು ಬಿಡುಗಡೆಯಾಗಿತ್ತು. ಎರಡನೇ ಕಂತು 47.69 ಲಕ್ಷ ರೂ. ತಾ.ಪಂ. ಖಾತೆಗೆ ಜಮೆಯಾಗಲು ಬಾಕಿಯಾಗಿತ್ತು. ಈ ಕುರಿತು ಪತ್ರ ವ್ಯವಹಾರ ನಡೆಸಿದ್ದರೂ ಪ್ರತಿ ಕ್ರಿಯೆ ಸಕಾರಾತ್ಮಕವಾಗಿರಲಿಲ್ಲ.
ತಾ.ಪಂ. ಅನುದಾನ ಬಾಕಿ ಯಾದ ಕುರಿತು “ಉದಯವಾಣಿ’ ಮೇ 1ರಂದು “ಕುಂದಾಪುರ ತಾ.ಪಂ.: 2 ವರ್ಷವಾದರೂ ಬಾರದ ಅನುದಾನ, ರಾಜ್ಯದ ಬೇರೆಲ್ಲ ಕಡೆಗೂ ಬಿಡುಗಡೆ; ಇದೊಂದು ಮಾತ್ರ ಬಾಕಿ’ ಎಂದು ವರದಿ ಪ್ರಕಟಿಸಿತ್ತು. ವರದಿಗೆ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಡಾ| ನವೀನ್ ಭಟ್, ಜಿ.ಪಂ. ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಮೊದಲಾದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
MUST WATCH
ಹೊಸ ಸೇರ್ಪಡೆ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.