ಫೈನಲ್ ಪ್ರವೇಶದ ಖುಷಿಯಲ್ಲಿ ಪುಟ್ಟ ಅಭಿಮಾನಿಗೆ ಜೆರ್ಸಿ ಗಿಫ್ಟ್ ನೀಡಿದ ಟ್ರೆಂಟ್ ಬೌಲ್ಟ್
Team Udayavani, May 28, 2022, 3:09 PM IST
ಅಹಮದಾಬಾದ್: ನಿರ್ಣಾಯಕ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್ 14 ವರ್ಷಗಳ ಬಳಿಕ ಫೈನಲ್ ಪ್ರವೇಶ ಮಾಡಿದೆ. ರವಿವಾರದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಶುಕ್ರವಾರದ ಪಂದ್ಯ ಮುಗಿದ ಬಳಿಕ ರಾಜಸ್ಥಾನ ರಾಯಲ್ಸ್ ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ತನ್ನ ಜೆರ್ಸಿಯನ್ನು ಅಭಿಮಾನಿಯೊಬ್ಬನಿಗೆ ನೀಡಿದ್ದಾರೆ. ಕ್ರೀಡಾಂಗಣಕ್ಕೆ ಬಂದ ಪುಟ್ಟ ಬಾಲಕನಿಗೆ ಟ್ರೆಂಟ್ ಬೌಲ್ಟ್ ತನ್ನ ಜೆರ್ಸಿ ತೆಗೆದು ನೀಡಿದ್ದಾರೆ.
ಇದನ್ನೂ ಓದಿ:ಕಂಗನಾ ರಣಾವತ್ ‘ಧಾಕಡ್’ 8 ದಿನದಲ್ಲಿ ಗಳಿಸಿದ್ದು ಕೇವಲ 4,420 ರೂ..!?
ಬೌಲ್ಟ್ ತನ್ನ ಜೆರ್ಸಿ ನೀಡುವ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ನೀವು ಟ್ರೆಂಟ್ ಬೌಲ್ಟ್ ಅನ್ನು ಪ್ರೀತಿಸದಿರಲು ಹೇಗೆ ಸಾಧ್ಯ ಎಂದು ಒಕ್ಕಣೆ ನೀಡಿದೆ.
How can you not love Trent Boult? ?
Watch him make a young fan’s day after #RRvRCB. ? pic.twitter.com/YrWgRsAgsN
— Rajasthan Royals (@rajasthanroyals) May 28, 2022
ಎಡಗೈ ವೇಗಿ ಬೌಲ್ಟ್ ಈ ಬಾರಿಯ ಕೂಟದಲ್ಲಿ 15 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ.
ಶುಕ್ರವಾರದ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ ಎಂಟು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದರೆ, ರಾಜಸ್ಥಾನ ತಂಡ ಜೋಸ್ ಬಟ್ಲರ್ ಶತಕದ ನೆರವಿನಿಂದ ಕೇವಲ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಜಯ ಗಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.