ನವೀನ್ ಶಂಕರ್ ಈಗ ಕ್ಷೇತ್ರಪತಿ
Team Udayavani, May 29, 2022, 3:26 PM IST
“ಗುಲ್ಟಾ’ ಸಿನಿಮಾದ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಟ ನವೀನ್ ಶಂಕರ್, ಈಗ “ಕ್ಷೇತ್ರಪತಿ’ ಸಿನಿಮಾದದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಈ ಸಿನಿಮಾದ ಫಸ್ಟ್‌ಲುಕ್ ಬಿಡುಗಡೆಯಾಯಿತು. ನಟ ಡಾಲಿ ಧನಂಜಯ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಕ್ಷೇತ್ರಪತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ಧನಂಜಯ್, “ಈ ಹಿಂದೆ ನಾನು “ಜಯನಗರ 4ನೇ ಬ್ಲಾಕ್’ ಶಾರ್ಟ್‌ಫಿಲಂ ಮಾಡುತ್ತಿದ್ದಾಗ ನಾವಿಬ್ಬರೂ ಭೇಟಿಯಾಗುತ್ತಿದ್ದೆವು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ನವೀನ್ ಇಷ್ಟು ಬೆಳದಿರುವುದು ನಿಜಕ್ಕೂ ಹೆಮ್ಮೆ. ಈ ಸಿನಿಮಾದಲ್ಲಿ ಬಸವ ಎಂಬ ಪಾತ್ರದಲ್ಲಿ ನವೀನ್ ಅಭಿನಯಿಸಿದ್ದಾರೆ. ಈ ಬಸವನಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನವರು ಆದರ್ಶ ವಾಗಲಿ. ಚಿತ್ರ ಜಯಭೇರಿ ಬಾರಿಸಲಿ. ಮುಂಬರುವ “ಹೋಯ್ಸಳ’ ಸಿನಿಮಾದಲ್ಲೂ ನಾನು ಹಾಗೂ ನವೀನ್ ಶಂಕರ್ ಒಟ್ಟಾಗಿ ಅಭಿನಯಿಸುತ್ತಿದ್ದೇವೆ’ ಎಂದರು.
ಇನ್ನು ಯುವ ಪ್ರತಿಭೆ ಶ್ರೀಕಾಂತ್ ಕಟಗಿ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಶ್ರೀಕಾಂತ್ ಕಟಗಿ, “ರೈತನಿಗೆ ಸಂಸ್ಕತದಲ್ಲಿ 21 ಹೆಸರುಗಳಿದೆ. ಅದರಲ್ಲಿ “ಕ್ಷೇತ್ರಪತಿ’ ಸಹ ಒಂದು. ರೈತನನ್ನು “ಕ್ಷೇತ್ರಪತಿ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಜೊತೆಗೆ ಇದೊಂದು ಅಪ್ಪ-ಮಗನ ಭಾಂದವ್ಯ ಸಾರುವ ಸಿನಿಮಾವೂ ಹೌದು. ಗದಗಿನ ತಿಮ್ಮಾಪುರ ಎಂಬ ಊರಿನಲ್ಲೇ ಸಿನಿಮಾದ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ’ ಎಂದು ವಿವರಣೆ ನೀಡಿದರು.
ಚಿತ್ರದ ಪಾತ್ರದ ಬಗ್ಗೆ ಮಾತನಾಡಿದ ನವೀನ್ ಶಂಕರ್, “ಇದರಲ್ಲಿ ನಾನು ಬಸವ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತನ್ನಿಷ್ಟಕ್ಕೆ ತಾನು ಇರುವಂತ ಬಸವನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದರ ಮೂಲಕ ಆತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಬಸವ ನನ್ನೊಳಗೆ, ನಿಮ್ಮೊಳಗೆ ಇದ್ದಾನೆ. ಕೆಲವರಿಗೆ ಅವನು ಜೀವಂತ. ಇನ್ನೂ ಕೆಲವರಿಗೆ ಆತ ಇಲ್ಲ. ಸಿನಿಮಾ ನೋಡಿದ ಮೇಲೆ ಅದರ ಬಗ್ಗೆ ತಿಳಿಯುತ್ತದೆ. ಈಗಾಗಲೇ “ಕ್ಷೇತ್ರಪತಿ’ ಶೂಟಿಂಗ್ ಪೂರ್ಣವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.
“ಕ್ಷೇತ್ರಪತಿ’ ಸಿನಿಮಾದ ಹಾಡುಗಳಿಗೆ ರವಿ ಬಸೂÅರು ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ “ಕ್ಷೇತ್ರಪತಿ’ ಮೂರ್‍ನಾಲ್ಕು ತಿಂಗಳಲ್ಲಿ ತೆರೆಗೆ ಬರುವ ಯೋಚನೆಯಲ್ಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.