ಐಪಿಎಲ್ ಫೈನಲ್: ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ? ಆರ್ ಸಿಬಿಗೆ ಸಿಗುವ ಮೊತ್ತವೆಷ್ಟು?
Team Udayavani, May 29, 2022, 4:23 PM IST
ಅಹಮದಾಬಾದ್: ಸುಮಾರು ಎರಡು ತಿಂಗಳ ವರ್ಣರಂಜಿತ ಕೂಟದ ಬಳಿಕ 2022ರ ಸಾಲಿನ ಐಪಿಎಲ್ ಕೂಟ ತನ್ನ ಅಂತಿಮ ಘಟ್ಟ ತಲುಪಿದೆ. ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಸೆಣಸಲಿದೆ.
ವಿಶ್ವದ ಅತ್ಯಂತ ಶ್ರೀಮಂತ ಟಿ 20 ಲೀಗ್ ಐಪಿಎಲ್ ನ ಫೈನಲ್‌ನ ಬಳಿಕ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಎಮರ್ಜಿಂಗ್ ಪ್ಲೇಯರ್ ಮತ್ತು ಫೇರ್ ಪ್ಲೇಯರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಲಾಗುವುದು. ಇದಲ್ಲದೆ, ವಿಜೇತ ಮತ್ತು ರನ್ನರ್ ಅಪ್ ತಂಡಗಳು ದೊಡ್ಡ ನಗದು ಬಹುಮಾನಗಳನ್ನು ಪಡೆಯುತ್ತವೆ.
ವಿಜೇತರು: ವಿಜೇತ ತಂಡವು ಐಪಿಎಲ್ ಚಾಂಪಿಯನ್ ಟ್ರೋಫಿಯೊಂದಿಗೆ ಬಿಸಿಸಿಐನಿಂದ 20 ಕೋಟಿ ರೂ. ನಗದು ಬಹುಮಾನವನ್ನು ಪಡೆಯುತ್ತದೆ.
ರನ್ನರ್ಸ್-ಅಪ್: ಎರಡನೇ ಸ್ಥಾನ ಪಡೆಯುವ ತಂಡವು 13 ಕೋಟಿ ರೂ ಪಡೆಯುತ್ತದೆ. ಕಳೆದ ವರ್ಷ ರನ್ನರ್ಸ್ ಅಪ್ ತಂಡಕ್ಕೆ 12.5 ಕೋಟಿ ರೂ ನೀಡಲಾಗುತ್ತು.
ಮೂರನೇ ಸ್ಥಾನ: ಕ್ವಾಲಿಫೈಯರ್ 2 ಸೋತ ತಂಡಕ್ಕೆ (ಆರ್‌ಸಿಬಿ) ಬಿಸಿಸಿಐ 7 ಕೋಟಿ ರೂ. ನಗದು ಬಹುಮಾನ ನೀಡಲಿದೆ.
ನಾಲ್ಕನೇ ಸ್ಥಾನ: ಎಲಿಮಿನೇಟರ್ ಸೋತ ತಂಡಕ್ಕೆ (ಎಲ್‌ಎಸ್‌ಜಿ) ಬಿಸಿಸಿಐ 6.5 ಕೋಟಿ ರೂ. ನಗದು ಬಹುಮಾನ ನೀಡಲಿದೆ.
ಆರೆಂಜ್ ಕ್ಯಾಪ್: ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಐಪಿಎಲ್ ಆರೆಂಜ್ ಕ್ಯಾಪ್ ಮತ್ತು ₹15 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.
ಪರ್ಪಲ್ ಕ್ಯಾಪ್: ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ಮತ್ತು 15 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.
ಉದಯೋನ್ಮುಖ ಆಟಗಾರ: ಈ ಪ್ರಶಸ್ತಿ ಪಡೆಯುವ ಆಟಗಾರನಿಗೆ 20 ಲಕ್ಷ ರೂ. ನಗದು ಬಹುಮಾನ ಸಿಗಲಿದೆ.
ಐಪಿಎಲ್ 2022 ರಲ್ಲಿ ಗರಿಷ್ಠ ಸಿಕ್ಸ್ ಪ್ರಶಸ್ತಿ: ವಿಜೇತರು 12 ಲಕ್ಷ ರೂ. ನಗದು ಬಹುಮಾನ ಪಡೆಯುತ್ತಾರೆ
ಸೀಸನ್‌ನ ಗೇಮ್ ಚೇಂಜರ್: ಸೀಸನ್‌ನ ಗೇಮ್ ಚೇಂಜರ್ ವಿಜೇತರು 12 ಲಕ್ಷ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ.
ಋತುವಿನ ಸೂಪರ್ ಸ್ಟ್ರೈಕರ್: ಐಪಿಎಲ್ 2022 ರ ಋತುವಿನ ಸೂಪರ್ ಸ್ಟ್ರೈಕರ್ ವಿಜೇತರು 15 ಲಕ್ಷ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ.
ಋತುವಿನ ಅತ್ಯಂತ ಮೌಲ್ಯಯುತ ಆಟಗಾರ: ವಿಜೇತರು 12 ಲಕ್ಷ ರೂ. ಬಹುಮಾನವನ್ನು ಪಡೆಯುತ್ತಾರೆ.
ಫೇರ್ ಪ್ಲೇ ಪ್ರಶಸ್ತಿ: ಋತುವಿನ ಉದ್ದಕ್ಕೂ ಫೇರ್ ಪ್ಲೇನಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ತಂಡವು ನಗದು ಬಹುಮಾನವನ್ನು ಸಹ ಪಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.