ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರಿಲ್ಲದೆ 4 ವರ್ಷ; 2018ರ ಮೇ ಬಳಿಕ ಆಗದ ನೇಮಕಾತಿ

ಕೋವಿಡ್ , ಉಕ್ರೇನ್‌ ಯುದ್ಧ ಸಂದರ್ಭ ಸಮಿತಿ ನಿಷ್ಕ್ರಿಯ

Team Udayavani, May 30, 2022, 7:30 AM IST

ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರಿಲ್ಲದೆ 4 ವರ್ಷ; 2018ರ ಮೇ ಬಳಿಕ ಆಗದ ನೇಮಕಾತಿ

ಕುಂದಾಪುರ: ವಿದೇಶಗಳಲ್ಲಿ ಯುದ್ಧ, ನೆರೆ, ಪ್ರಾಕೃತಿಕ ವಿಪತ್ತು, ಕೊರೊನಾದಂತಹ ಸಂಕಷ್ಟ ಮಯ ಸಂದರ್ಭಗಳಲ್ಲಿ ಅಲ್ಲಿ ನೆಲೆಸಿರುವ ರಾಜ್ಯದ ಜನರು, ವಿದ್ಯಾರ್ಥಿಗಳಿಗೆ ತುರ್ತು ನೆರವಾಗಲು ಸ್ಥಾಪನೆಯಾಗಿರುವ ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ)ಗೆ ನಾಲ್ಕು ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ.
ಈ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು. ಇದರ ಕಾರ್ಯಭಾರವೆಲ್ಲ ಉಪಾಧ್ಯಕ್ಷ ರದ್ದೇ ಆಗಿರುತ್ತದೆ. ಎಲ್ಲವನ್ನು ಮುಖ್ಯಮಂತ್ರಿ ಯವರೇ ನಿಭಾಯಿಸಲು ಅಸಾಧ್ಯ. ಆದ್ದರಿಂದ ಉಪಾಧ್ಯಕ್ಷರ ಹುದ್ದೆಯೇ ಪ್ರಮುಖ.

ಭರ್ತಿ ನಾಲ್ಕು ವರ್ಷ
ಉಡುಪಿ ಮೂಲದ ಆರತಿ ಕೃಷ್ಣ ಅವರು 2018ರ ಮೇ 31ರ ವರೆಗೆ ಉಪಾಧ್ಯಕ್ಷರಾಗಿದ್ದರು, ಅಲ್ಲಿಂದ ಈ ಹುದ್ದೆ ಖಾಲಿಯಿದೆ. ಅಂದರೆ ಈ ವರ್ಷದ ಮೇ 31ಕ್ಕೆ ಈ ಹುದ್ದೆಗೆ ಹೊಸಬರ ನೇಮಕವಾಗದೆ ಭರ್ತಿ ನಾಲ್ಕು ವರ್ಷಗಳಾಗುತ್ತವೆ.

2008ರಲ್ಲಿ ಆರಂಭ
ರಾಜ್ಯದಿಂದ ಉದ್ಯೋಗಕ್ಕಾಗಿ ತೆರಳಿರುವವರು, ಶಿಕ್ಷಣಕ್ಕಾಗಿ ಹೋಗಿರುವ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಏನಾದರೂ ಸಮಸ್ಯೆ ಎದುರಾದರೆ ತುರ್ತಾಗಿ ಸ್ಪಂದಿಸಿ, ನೆರವಾಗುವ ಉದ್ದೇಶದಿಂದ 2008ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಎನ್‌ಆರ್‌ಐ ಫೋರಂ ಆರಂಭಿಸಲಾಗಿತ್ತು. ಆದರೆ ಕೊರೊನಾ ಸಂಕಷ್ಟ, ಮೊನ್ನೆಯ ಉಕ್ರೇನ್‌ – ರಷ್ಯಾ ಯುದ್ಧ ಪರಿಸ್ಥಿತಿಯ ವೇಳೆ ಕ್ರಿಯಾಶೀಲವಾಗಿರಬೇಕಿದ್ದ ಎನ್‌ಆರ್‌ಐ ಫೋರಂ ನಿಷ್ಕ್ರಿಯವಾಗಿತ್ತು. ಮುಖ್ಯವಾಗಿ ಉಪಾಧ್ಯಕ್ಷರಿಲ್ಲದುದೇ ಇದಕ್ಕೆ ಕಾರಣ.

ಸಂಪುಟ ದರ್ಜೆ ಸ್ಥಾನ
ಎನ್ನಾರೈ ಸಮಿತಿಯ ಉಪಾಧ್ಯಕ್ಷ ಹುದ್ದೆ ಸಂಪುಟ ದರ್ಜೆ ಸ್ಥಾನಮಾನದ್ದಾಗಿದ್ದು, 2008- 12ರ ವರೆಗೆ ಮಂಗಳೂರಿನ ಕ್ಯಾ| ಗಣೇಶ್‌ ಕಾರ್ಣಿಕ್‌, 2013-2016ರ ವರೆಗೆ ವಿ.ಸಿ. ಪ್ರಕಾಶ್‌ ಹಾಗೂ 2016 – 2018ರ ವರೆಗೆ ಆರತಿ ಕೃಷ್ಣ ಅವರು ಉಪಾಧ್ಯಕ್ಷರಾಗಿದ್ದರು.

ಮಾಹಿತಿಯೇ ಇಲ್ಲ
ಫೋರಂನಲ್ಲಿ ಉಪಾಧ್ಯಕ್ಷರಿಲ್ಲದಿದ್ದರೆ ವಿದೇಶದಲ್ಲಿ ಏನೇ ಘಟನೆಗಳು ಆದಾಗಲೂ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಉಡುಪಿಯಿಂದ ಯಾವೆಲ್ಲ ದೇಶಕ್ಕೆ ಉದ್ಯೋಗ ಅಥವಾ ವಿದ್ಯಾರ್ಜನೆಗಾಗಿ ಯಾರೆಲ್ಲ ಹೋಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಇಲ್ಲಿಂದ ವಿದೇಶಕ್ಕೆ ಹೋಗು ವವರು ಡಿಸಿ ಕಚೇರಿಯಲ್ಲಿ ತಮ್ಮ ವಿಳಾಸ, ಫೋನ್‌ ನಂಬರ್‌ ಸಹಿತ ನೋಂದಣಿ ಮಾಡಿಸಿಕೊಂಡು ಹೋದರೆ ಪ್ರಯೋಜನವಾಗಲಿದೆ ಎನ್ನುವುದಾಗಿ ಅನಿವಾಸಿ ಭಾರತೀಯರಿಗೆ ನೆರವಾಗುತ್ತಿರುವ ಶಿವಾನಂದ ತಲ್ಲೂರು ತಿಳಿಸಿದ್ದಾರೆ.

ಸ್ಪಂದನೆಯೇ ಇಲ್ಲ
ಎನ್‌ಆರ್‌ಐ ಸಮಿತಿಗೆ ಸಿಎಂ, ಉಪಾಧ್ಯಕ್ಷ ಹುದ್ದೆಯೊಂದಿಗೆ ಐಎಎಸ್‌ ಅಥವಾ ಕೆಎಎಸ್‌ ದರ್ಜೆಯ ಸದಸ್ಯ ಕಾರ್ಯದರ್ಶಿಗಳಿರುತ್ತಾರೆ. ಈಗ ಸದಸ್ಯ ಕಾರ್ಯದರ್ಶಿ ಮಾತ್ರ ಇರುವುದರಿಂದ ಯಾವುದೇ ರೀತಿಯ ಸ್ಪಂದನೆ ಸಾಧ್ಯವಾಗುತ್ತಿಲ್ಲ. ಉಪಾಧ್ಯಕ್ಷರಿದ್ದರೆ ಸರಕಾರ, ರಾಯಭಾರ ಕಚೇರಿಯನ್ನೆಲ್ಲ ತ್ವರಿತವಾಗಿ ಸಂಪರ್ಕಿಸಿ, ನೆರವಾಗಲು ಸಾಧ್ಯವಾಗುತ್ತದೆ.

ಎನ್‌ಆರ್‌ಐ ಫೋರಂಗೆ 4 ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ. ಅದಕ್ಕಿಂತ ಹಿಂದೆ ನಾನು ಉಪಾಧ್ಯಕ್ಷನಾಗಿದ್ದೆ. ಈಗಲೂ ಅನೇಕ ಮಂದಿ ನಾನೇ ಆ ಹುದ್ದೆಯಲ್ಲಿದ್ದೇನೆಂದು ಕರೆ ಮಾಡಿ, ಸಹಕಾರ ಕೋರುತ್ತಾರೆ. ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಸಂದಿಗ್ಧ ಪರಿಸ್ಥಿತಿ ಬಂದಾಗ ನೇಮಕಾತಿ ಮಾಡುವ ಬದಲು, ಅದಕ್ಕೆ ಮೊದಲೇ ಸಿದ್ಧರಾಗುವುದು ಉತ್ತಮ. ಇನ್ನಾದರೂ ಹೊಸಬರ ನೇಮಕ ಆಗಲಿ.
– ಆರತಿ ಕೃಷ್ಣ, ಎನ್‌ಆರ್‌ಐ ಫೋರಂ
ಹಿಂದಿನ ಉಪಾಧ್ಯಕ್ಷೆ

ಇದು ಬಹಳ ಪ್ರಮುಖವಾದ ಹುದ್ದೆ. ಕೂಡಲೇ ಅರ್ಹರಾದವರನ್ನು ನೇಮಕ ಮಾಡಬೇಕು ಎನ್ನುವುದಾಗಿ ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ. ಅವರನ್ನು ಭೇಟಿಯಾದಾಗ ಉಪಾಧ್ಯಕ್ಷರ ನೇಮಕ ಕುರಿತಂತೆ ಗಮನಕ್ಕೆ ತರಲಾಗುವುದು.
– ಕ್ಯಾ| ಗಣೇಶ್‌ ಕಾರ್ಣಿಕ್‌,
ಎನ್‌ಆರ್‌ಐ ಫೋರಂ ಮೊದಲ ಉಪಾಧ್ಯಕ್ಷ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.