ಆನ್ ಲೈನ್ ಗೇಮ್ ಕುತ್ತು
Team Udayavani, May 30, 2022, 12:37 PM IST
ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಜೂಜಾಟ ಸೇರಿದಂತೆ ವ್ಯತಿರಿಕ್ತ ದಂಧೆಯಲ್ಲಿ ತೊಡಗಿರುವ ಯುವ ಸಮೂಹ ಆನ್ ಲೈನ್ ಆಟವನ್ನು ಗೀಳಾಗಿಸಿಕೊಂಡಿದ್ದಾರೆ. ಈ ಗೀಳು ಅವರ ಜೀವನವನ್ನೇ ಆಹುತಿ ಪಡೆಯುತ್ತಿದೆ. ಕಂಡೂ ಕಾಣದಂತಿದ್ದ ಈ ಪ್ರಕ್ರಿಯೆ ಮಾನಸಿಕ ತಜ್ಞರ ಹುಬ್ಬೆರಿಸುವಷ್ಟು ವ್ಯಾಪಕವಾಗಿ ಬೆಳೆದಿದೆ. ಆನ್‌ಲೈನ್ ಗೇಮ್‌ಗಳಾದ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ, ಪೊಕರ್ ಸೇರಿದಂತೆ ಅನೇಕ ಆದಾಯದ ಆಮಿಷವೊಡ್ಡುವ ಕ್ರೀಡೆಗಳಿಗೆ ಯುವ ಸಮೂಹ ಬಲಿಯಾಗುತ್ತಿದೆ. ಜತೆಗೆ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದೆ. ಇದರಿಂದ ಅನೇಕರು ಜೀವ ಕಳೆದುಕೊಂಡ ಉದಾಹರಣೆಗಳು ಇವೆ. ಈ ಕುರಿತ ಮಾಹಿತಿ ಮತ್ತು ನಿವಾರಣೋಪಾಯಗಳು ಈ ವಾರದ ಸುದ್ದಿಸುತ್ತಾಟದಲ್ಲಿ.
ರಾಜಧಾನಿಯಲ್ಲಿ ಇತ್ತೀಚೆಗೆ ಆನ್‌ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್, ಜೂಜಾಟಕ್ಕೆ ಯುವ ಸಮೂಹ ಬಲಿಯಾಗುತ್ತಿದ್ದು, ಕುಟುಂಬ ವ್ಯವಸ್ಥೆಮೇಲೂ ಇದು ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು, ವಯಸ್ಕರು ಹೀಗೆ ಎಲ್ಲ ವಯೋಮಾನದವರು ಆನ್‌ಲೈನ್ ಗೇಮ್‌ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೂಂದೆಡೆ ಕೌಟುಂಬಿಕವಾಗಿ ಸಮಸ್ಯೆಗಳು ಎದುರಿಸುವಂತಾಗಿದೆ.ಪ್ರಾರಂಭದಲ್ಲಿ ಸಮಯ ಕಳೆಯಲು ಮೊಬೈಲ್‌ನಲ್ಲಿ ಆ್ಯಪ್‌ಗ್ಳಮೂಲಕ ಆನ್‌ಲೈನ್ ಗೇಮ್‌ಗಳತ್ತ ಆಕರ್ಷಿತರಾಗುವ ಯುವ ಸಮೂಹ ನಂತರ ಅದನ್ನೇ ಹವ್ಯಾಸವನ್ನಾಗಿಸಿ ಚಟ ಹತ್ತಿಸಿಕೊಳ್ಳುತ್ತಿರುವ ನೂರಾರು ಘಟನೆಗಳು ನಡೆಯುತ್ತಿವೆ. ಕೊರೊನಾ ಸಂದರ್ಭದಲ್ಲಿ ವರ್ಕ್‌ಫ್ರಮ್ ಹೋಮ್, ಆನ್‌ಲೈನ್ ತರಗತಿಗಳು ಜನರನ್ನು ಅತಿಯಾಗಿ ಮೊಬೈಲ್‌ಗೆ ಅಂಟಿಕೊಳ್ಳವಂತೆ ಮಾಡಿತ್ತು. ಮೊದಲು ಮನರಂಜನೆಗಾಗಿ ಆಡುತ್ತಿದ್ದ ಆನ್‌ಲೈನ್ ಗೇಮ್‌ಗಳು ಹಂತ ಹಂತವಾಗಿ ಹವ್ಯಾಸದಿಂದ ವ್ಯಸನಕ್ಕೆ ತಿರುಗಿಸಾಕಷ್ಟು ಹಣವನ್ನು ಕಳೆದು ಕೊಂಡಿರುವುದರ ಜತೆಗೆ, ಕುಟುಂಬದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಪ್ರಕರಣಗಳು ಇವೆ.ಮನೋರೋಗಕ್ಕೆ ಚಿಕಿತ್ಸೆ ನೀಡುವ ಕೇಂದ್ರಗಳಲ್ಲಿ ಜೂಜಾಟ, ಗೇಮಿಂಗ್ಸ್‌ಗೆ ಬಲಿಯಾಗಿರುವ ತಮ್ಮ ಕುಟುಂಬದವರನ್ನು ಸರಿಮಾಡಿ ಎಂದು ಪೋಷಕರು ಕೌನ್ಸೆಲಿಂಗ್‌ಗಾಗಿ ಕರೆತರುವಂತಾಗಿದೆ.ಅದರಲ್ಲೂ ಯುವಕರ ಸಂಖ್ಯೆಯೇ ಹೆಚ್ಚು, ಕೌನ್ಸೆಲಿಂಗ್ ಕೇಂದ್ರಗಳಿಗೆ ಬಂದಿರುವ ಇಂತಹ ಪ್ರಕರಣಗಳ ಪೈಕಿ ಕೆಲವು ನಿಮ್ಮ ಮುಂದೆ..
ಪ್ರಕರಣ:1 : ಪ್ರಥಮ ಪಿಯು ಓದುತ್ತಿರುವಮೋಹಿತ್(ಹೆಸರು ಬದಲಿಸಲಾಗಿದೆ)ಗೆ ಕೊರೊನಾ ಅವಧಿಯಲ್ಲಿ ಆನ್‌ಲೈನ್‌ತರಗತಿಗಾಗಿ ತಂದೆಯ ಮೊಬೈಲ್‌ನೀಡಲಾಗಿತ್ತು. ಆತ ದಿನ ಕಳೆದಂತೆ ಆನ್‌ಲೈನ್‌ತರಗತಿ ಬಳಿಕ ಆನ್‌ಲೈನ್ ಗೇಮ್ಸ್‌ಆಡುತ್ತಿದ್ದ. ಪ್ರಾರಂಭಿಕ ಹಂತದಲ್ಲಿತಂದೆ-ತಾಯಿ ಎದುರುಆಟವಾಡುತ್ತಿದ್ದವ, ನಂತರದ ದಿನಗಳಲ್ಲಿ ಏಕಾಏಕಿಯಾಗಿ ಮನೆಯವರ ಕಣ್ಣುತಪ್ಪಿಸಿ ಆಟವಾಡ ತೊಡಗಿದ.ತಂದೆಯ ಮೊಬೈಲ್ ಬ್ಯಾಂಕ್ ಫಾಸ್‌ವರ್ಡ್ ತಿಳಿದಿದ್ದ ಆತ ಗೇಮ್ಸ್‌ನ ಅಪ್‌ಡೇಟ್ ಹಂತಕ್ಕಾಗಿ ಮನೆಯಲ್ಲಿ ಯಾರಿಗೂತಿಳಿಯದಂತೆ ಖಾತೆಯನ್ನು ಗೇಮ್ಸ್‌ಗೆ ಲಿಂಕ್ ಮಾಡಿಕೊಂಡಿದ್ದಾನೆ. ನಂತರ ಗೇಮ್ಸ್ ಅಪ್‌ಡೇಟ್‌ಗೆ ಹಂತ-ಹಂತವಾಗಿ ಸುಮಾರು ಖಾತೆಯಿಂದ 1.25 ಲಕ್ಷ ರೂ. ಕಡಿತಗೊಂಡಿದೆ. ಈ ಬಗ್ಗೆ ಮಾಹಿತಿ ಪಡೆಯಲು ಸೆನ್ ಠಾಣೆಗೆ ದೂರು ನೀಡಿದಾಗ ಮಗನ ಗೇಮ್ಸ್ ಹುಚ್ಚಿನಿಂದ ಹಣ ಕಳೆದುಕೊಂಡಿರುವುದು ತಿಳಿದಿದೆ. ಈ ಬಗ್ಗೆ ತಂದೆ ಮಗನಿಗೆ ಗದರಿಸಿದಾಗ ಆತ ಆತ್ಮಹತ್ಯೆ ಪ್ರಯತ್ನಸಿದ್ದ. ಆದ್ದರಿಂದ ಆತನಿಗೆ ಮಾನಸಿಕ ಆರೋಗ್ಯ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ: 2 :
ಖ್ಯಾತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯೊಬ್ಬರು ಪೋಕರ್ ಎಂಬ ಜೂಜಾಟವನ್ನು ಮನರಂಜನೆಗಾಗಿ ಮೊದಲು ಸಾವಿರ ರೂ. ಕಟ್ಟಿ ಆಡಲು ಆರಂಭಿಸಿದರು. ಒಮ್ಮೆ ಬಂದ ಲಾಭದಿಂದ ಪ್ರೇರಣೆಗೊಂಡು ಪುನಃ ಜೂಜಾಟ ಮುಂದುವರೆಸಿ 2020ರಲ್ಲಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಈ ಹಣವನ್ನು ಪುನರ್‌ಗಳಿಸಲು ತಮ್ಮ 32 ಲಕ್ಷದ ಆಸ್ತಿಯನ್ನು ಹೆಚ್ಚಿನ ಬಡ್ಡಿ ಸಾಲಕ್ಕೆ ಅಡವಿಡುತ್ತಾರೆ ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುತ್ತಾರೆ. ಅವರು ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರಿಂದ ಅವರ ವೈಯಕ್ತಿಕ ಜೀವನವು ತೊಂದರೆಗೀಡಾಗಿದೆ. ಆಸ್ತಿಯನ್ನು ಹೆಚ್ಚಿನ ಬಡ್ಡಿ ಸಾಲಕ್ಕೆ ಗಿರವಿ ಇಟ್ಟಿರುವುದು ಹಾಗೂ ಇತರರಲ್ಲಿ ಸಾಲ ಪಡೆದಿರುವುದು ಇತ್ತೀಚೆಗೆ ತಿಳಿದ ಅವರ ಪತ್ನಿ ಪೊಲೀಸ್ ವ್ಯಾಪ್ತಿಗೆ ಬರುವ ವನಿತಾ ಸಹಾಯವಾಣಿಯ ಕೌಟುಂಬಿಕ ಸಲಹಾ ಕೇಂದ್ರ-ಪರಿಹಾರ್ ಸಂಪರ್ಕಿಸಿದ್ದಾರೆ.
ಪ್ರಕರಣ: 3 :
ಬ್ಯಾಂಕ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ರಮ್ಮಿ ಆಡಲು ಪ್ರಾರಂಭಿಸುತ್ತಾರೆ. ಇದು ಚಟಕ್ಕೆ ತಿರುಗಿ, ಹಣಕಳೆದುಕೊಳ್ಳುತ್ತಾನೆ. ಒಂದಲ್ಲ ಒಂದು ದಿನ ಹಣ ವಾಪಾಸಾಗುತ್ತದೆ ಎಂದುಆಶಾಭಾವನೆಯನ್ನಿಟ್ಟುಕೊಂಡ ಅವರು, ಬ್ಯಾಂಕ್‌ನಲ್ಲಿ ಸಾಲ ಪಡೆಯುತ್ತಾನೆ. ಎರಡು ವರ್ಷದಲ್ಲಿ ಆಡಿದ ಜೂಟಾಟದಿಂದಾಗಿ ಸುಮಾರು 32 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಜೂಜಾಟವಾಡುತ್ತಿದ್ದ ಜತೆಗಾರರು ಅವನನ್ನು ಮೂಲೆಗುಂಪು ಮಾಡಿದ್ದಾರೆ. ಸಾಲದ ಹೊರೆ ಹೆಚ್ಚಾಗಿ ತೀರಿಸದ ಕಾರಣ ಬ್ಯಾಂಕ್‌ನಲ್ಲಿ ಕೆಲಸದಿಂದ ತೆಗೆದುಹಾಕಿದ್ದಾರೆ. ನಂತರ ತನ್ನ ಬ್ಯಾಂಕಿನಲ್ಲಿಯೇ ಹಣ ಕದಿಯಲು ಮುಂದಾಗುತ್ತಾನೆ. ಕದಿಯಲು ಆರಂಭಿಸಿದ ಕೆಲ ದಿನಗಳಲ್ಲಿ ಸಿಕ್ಕಬಿದ್ದ ಅವನನ್ನು ಈಗ ವಿಚಾರಣೆಗೆಒಳಪಡಿಸಿದ್ದಾರೆ. ಹಣ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿರುವ ಅವನ ಬಗ್ಗೆ ತಿಳಿದ ಪತ್ನಿಯು ನಿದ್ರಾಹೀನತೆಗೆ ಒಳಗಾಗುತ್ತಾಳೆ. ತನ್ನ ಪತಿ ಬಗ್ಗೆ ಚಿಂತಿಸುತ್ತಿದ್ದ ಆಕೆ, ಬ್ಯಾಂಕ್‌ನಲ್ಲಿ ಮಾಡಿದ ಸಾಲವನ್ನು ತೀರಿಸಲೆಂದು ತನ್ನ ಪೋಷಕರಿಂದ 25 ಲಕ್ಷ ರೂ. ಎರವಲು ಪಡೆದು, ತನ್ನ ಪತಿ ಸಾಲ ತೀರಿಸಲು ಕೊಡುತ್ತಾಳೆ. ಆದರೆ, ಆಕೆ ತಂದ ಹಣವನ್ನೂ ಪತಿ ಆನ್‌ಲೈನ್ ಕಾರ್ಡ್ ಆಟವನ್ನು ಆಡಲು ಜೇಬಿಗಿಳಿಸಿ, ವ್ಯರ್ಥ ಮಾಡುತ್ತಾನೆ. ಇದರಿಂದ ನೊಂದ ಆಕೆ ಪತಿಯಿಂದ ದೂರ ಉಳಿಯಲು ನಿರ್ಧರಿಸಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ದಿನದಿಂದ ದಿನಕ್ಕೆ ಇಂಥ ಹತ್ತು ಹಲವು ಪ್ರಕರಣಗಳು ನಗರದಲ್ಲಿ ವರದಿಯಾಗುತ್ತಿದ್ದು ಪೋಷಕರಲ್ಲಿ ಆತಂಕ ಮೂಡಿಸಿದೆ. ತಮ್ಮ ಮಕ್ಕಳು ಹಾಗೂ ಕುಟುಂಬದವರ ಭವಿಷ್ಯವೇ ಇದರಿಂದ ಹಾಳಾಗುತ್ತಿದೆ ಎಂದು ಚಿಂತೆಗೀಡಾಗುವಂತಾಗಿದೆ.
ಕಾರಣಗಳು :
- ಮನೆಯಲ್ಲಿನ ಆರ್ಥಿಕ ಸಮಸ್ಯೆ, ಮಾನಸಿಕ ದೌರ್ಬಲ್ಯತನ
- ಜೂಜಾಟದಿಂದ ಹಣಗಳಿಸಿದ ಸ್ನೇಹಿತರಿಂದ ಪ್ರೋತ್ಸಾಹಗೊಂಡು ಚಟಕ್ಕೆ ಬಲಿ
- ಮನರಂಜನೆಯಾಗಿ ಆಡಲು ಆರಂಭಿಸಿದವರು, ವ್ಯಸನಿಗಳಾಗಿ ಪರಿವರ್ತನೆ
- ಆನ್‌ಲೈನ್ ತರಗತಿಗಳ ವೇಳೆ ಮೊಬೈಲ್, ಲ್ಯಾಪ್ ಟಾಪ್‌ನಲ್ಲಿ ಇತರೆ ವಿಂಡೋಗಳನ್ನು ತೆರೆಯುವುದು ಇತರೆ ವಿಂಡೋಗಳನ್ನು ತೆರೆಯುವುದು
ಪರಿಹಾರಗಳು :
- ಜೂಜಾಟವನ್ನು ಚಟವನ್ನಾಗಿಸಿಕೊಳ್ಳಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳುವುದು.
- ಜೂಜಾಟಕ್ಕೆ ದೂಡುವ ಸ್ನೇಹಿತರಿಂದ ದೂರವಿರಿಸುವುದು
- ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್ ಬಳಸುವಾಗ ಪೋಷಕರಿಗೆ ಕಾಣುವ ಹಾಗೆ ಸ್ಕ್ರೀನ್ ಇಟ್ಟುಕೊಳ್ಳುವುದು
- ಮೊಬೈಲ್ ಅಥವಾ ಲ್ಯಾಪ್‌ಟಾಪ್ ನಲ್ಲಿ ನೋಟಿಫಿಕೇಶನ್ ಆಫ್ ಮಾಡುವುದು
- ಮಕ್ಕಳು ಮೊಬೈನ್‌ನಲ್ಲಿ ಗೇಮ್ ಆಡುವಾಗ ಪೋಷಕರು ಮೊಬೈಲ್ ಬಿಡಿಸಿ, ದೈಹಿಕ ಚಟುವಟಿಕೆ ಗಳಾಧಾರಿತ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು
- ನೃತ್ಯ, ಸಂಗೀತ, ಕರಾಟೆಯಂತಹ ಇತರೆ ಚಟುವಟಿಕೆಗಳತ್ತ ಹೆಚ್ಚಾಗಿ ತೊಡಗಿಸುವುದು.
- ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು, ಆನ್ ಲೈನ್ ಗೇಮ್ ಹಾಗೂ ಜೂಜಾಟದ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವುದು.
- ಸುತ್ತಮುತ್ತಲಿನವರಿಂದ ಚಟಕ್ಕೆ ಒಳಗಾಗಿದ್ದರೆ, ಮನೆ ಸ್ಥಳಾಂತರಿಸುವುದು ಸೂಕ್ತ
- ಜೂಜಾಟಕ್ಕೆ ಒಳಗಾದವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ಚಿಕಿತ್ಸೆ ಕೊಡಿಸುವುದು
-ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kodagu; ದೇವಸ್ಥಾನ ಪ್ರವೇಶ ನಿರಾಕರಣೆ: ವಿವಿಧೆಡೆ ಕೊಡವರಿಂದ ರಸ್ತೆ ತಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
ಪೊಲೀಸ್ ಅಧಿಕಾರಿಗಳ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.