ಬಿಜೆಪಿಯಿಂದ ಮಾತ್ರ ದೇಶಾಭಿವೃದ್ಧಿ ಸಾಧ್ಯ
Team Udayavani, May 30, 2022, 3:28 PM IST
ಚಾಮರಾಜನಗರ: ದೇಶದ ಸಮಗ್ರ ಅಭಿವೃದ್ಧಿಬಿಜೆಪಿಯಿಂದ ಸಾಧ್ಯವೇ ಹೊರತು, ಒಂದು ಧರ್ಮ ಮತ್ತು ವರ್ಗವನ್ನು ತುಷ್ಟೀಕರಿಸುವಕಾಂಗ್ರೆಸ್, ಇತರೆ ಪಕ್ಷಗಳಿಂದ ಮತ್ತಷ್ಟುಅಧೋಗತಿಗೆ ಹೋಗುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾಗಶ್ರೀ ಪ್ರತಾಪ್ ತಿಳಿಸಿದರು.
ತಾಲೂಕಿನ ಶಿವಪುರ ಹಾಗೂ ಹೆಗ್ಗೊಠಾರಗ್ರಾಪಂ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿಪದವೀಧರ ಮತದಾರರನ್ನು ಅವರ ಮನೆಗಳಿಗೆತೆರಳಿ ಭೇಟಿ ಮಾಡಿ, ದಕ್ಷಿಣ ಪದವೀಧರಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮೈ.ವಿ.ರವಿಶಂಕರ್‌ಪರ ಮತಯಾಚನೆ ಮಾಡಿ, ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿ ಅವರುಮಾತನಾಡಿದರು.
ಮೋದಿ ಕಾರ್ಯವೈಖರಿ ವಿಶ್ವವೇ ಮೆಚ್ಚಿದೆ: ಪ್ರಧಾನಿ ಮೋದಿ 8 ವರ್ಷಗಳ ಭ್ರಷ್ಟಾಚಾರ ಮುಕ್ತ ಆಡಳಿತ, ಜಾಗೃತಿ ಮಟ್ಟದಲ್ಲಿ ಭಾರತವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿರುವ ಅವರ ಕಾರ್ಯವೈಖರಿಯನ್ನು ವಿಶ್ವವೇ ಮೆಚ್ಚಿದೆ. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಭಾರತವನ್ನು ಸ್ವಾವಲಂಬಿಯಾಗಿ ಮಾಡುವ ಜೊತೆಗೆ ನಂ.1 ಸ್ಥಾನದಲ್ಲಿ ನೋಡುವಂತೆ ಮಾಡುತ್ತಿರುವ ಮೋದಿ ಅವರ ಪಕ್ಷಕ್ಕೆ ನಿಮ್ಮ ಮತ ನೀಡಬೇಕಾಗಿದೆ ಎಂದು ವಿವರಿಸಿದರು.
ಯುವ ಪದವೀಧರರು ಬೆಂಬಲಿಸಲಿ: ನೂತನ ಶಿಕ್ಷಣ ನೀತಿ ಜಾರಿ ಮಾಡಿ, ಶೈಕ್ಷಣಿಕ ಪ್ರಗತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ವಿಧಾನ ಪರಿಷತ್‌ನಲ್ಲಿ ಈ ಮಸೂದೆ ಬಲವಾಗಿ ಸಮರ್ಥನೆಮಾಡಿಕೊಂಡು, ಮಕ್ಕಳ ಸರ್ವಾಂಗೀಣಅಭಿವೃದ್ಧಿಗೆ ಜಾರಿ ಮಾಡಿರುವ ರಾಷ್ಟ್ರೀಯಶಿಕ್ಷಣ ನೀತಿಯಿಂದ ನಿರುದ್ಯೋಗ ಸಮಸ್ಯೆನಿವಾರಣೆ ಆಗಲಿದೆ. ಇದಕ್ಕಾಗಿ ಯುವ ಪದವೀಧರರು ಬಿಜೆಪಿ ಬೆಂಬಲಿಸಬೇಕು ಎಂದು ವಿವರಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪದ್ಮಾ, ಗ್ರಾಪಂಸದಸ್ಯ ಮಹೇಶ್, ಉಡಿಗಾಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಉಡಿಗಾಲ ಚಂದ್ರಶೇಖರ್,ಶಿವಪುರ ಶಕ್ತಿ ಕೇಂದ್ರ ಅಧ್ಯಕ್ಷ ಶಿವರಾಜು,ಹೆಗ್ಗೊಠಾರ ಶಕ್ತಿ ಕೇಂದ್ರ ಅಧ್ಯಕ್ಷ ಪಣ್ಯದ ಹುಂಡಿಸತೀಶ್, ಬೆಂಡರವಾಡಿ ಸತೀಶ್,ಮಹದೇವಸ್ವಾಮಿ, ಮಹದೇವಸ್ವಾಮಿ, ಸುರೇಶ್, ಕಾಡಹಳ್ಳಿ ರಾಜಶೇಖರ್, ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.