ವಿ.ವಿ. ಕಾಲೇಜಿನ ಹಿಜಾಬ್ ವಿವಾದ : ಸಿಂಡಿಕೇಟ್ ನಿರ್ಣಯ ಪಾಲಿಸಲು ಡಿಸಿ ಸೂಚನೆ
Team Udayavani, May 30, 2022, 11:52 PM IST
ಮಂಗಳೂರು: ನಗರದ ವಿ.ವಿ. ಕಾಲೇಜಿನಲ್ಲಿ ತಲೆದೋರಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಇತ್ತೀಚೆಗೆ ವಿ.ವಿ.ಯ ಸಿಂಡಿಕೇಟ್ ಕೈಗೊಂಡಿರುವ ನಿರ್ಣಯವನ್ನು ಪಾಲಿಸುವಂತೆ ಡಿಸಿ ಡಾ| ರಾಜೇಂದ್ರ ಕೆ.ವಿ. ಅವರು ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದ್ದಾರೆ.
ಹಿಜಾಬ್ ಧರಿಸುವುದು ಕಡ್ಡಾಯ ಎಂಬ ನಿರ್ಣಯವನ್ನು ಒಪ್ಪದ ಕೆಲವು ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಆದರೆ ಅವರಿಗೆ ಪ್ರವೇಶ ನೀಡಿರಲಿಲ್ಲ. ಆ ಬಳಿಕ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದರು.
ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು, ವಿ.ವಿ. ಅಥವಾ ಸಿಂಡಿಕೇಟ್ ಕೈಗೊಂಡ ನಿರ್ಣಯದ ವಿಷಯದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ. ವಿ.ವಿ. ಕೈಗೊಂಡ ನಿರ್ಣಯವನ್ನು ಕಾಲೇಜುಗಳು ಪಾಲಿಸಬೇಕು. ಕಾನೂನು ಕೈಗೆತ್ತಿಕೊಂಡು ಶಾಂತಿಭಂಗ ಉಂಟು ಮಾಡಬಾರದು ಎಂದು ವಿದ್ಯಾರ್ಥಿನಿಯರಿಗೆ ಸೂಚಿಸಿದ್ದೇನೆ. ಅವರ ಅಹವಾಲುಗಳನ್ನು ಆಲಿಸಿದ್ದೇನೆ. ಕೆಲವು ವಿಚಾರಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದ ಬೇರೆ ಕಡೆಗಳಲ್ಲಿ ನಡೆದ ಹಿಜಾಬ್ ವಿವಾದಕ್ಕೂ ಮಂಗಳೂರು ವಿ.ವಿ. ಕಾಲೇಜಿನ ವಿವಾದಕ್ಕೂ ಸಂಬಂಧವಿಲ್ಲ. ನ್ಯಾಯಾಲಯದ ಆದೇಶದನ್ವಯ ಸಿಂಡಿಕೇಟ್‌ನಲ್ಲಿ ನಿರ್ಣಯ ಮಾಡಿಲ್ಲ. ಬದಲಾಗಿ ಒತ್ತಡಕ್ಕೆ ಒಳಗಾಗಿ ನಿರ್ಣಯ ಮಾಡಲಾಗಿದೆ ಎಂದು ಹಿಜಾಬ್ ಧರಿಸಲು ಅವಕಾಶ ನೀಡಲು ಒತ್ತಾಯಿಸುತ್ತಿರುವ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.