ತಂಬಾಕು ರಹಿತ ಜೀವನ, ಪರಿಸರ ನಮ್ಮದಾಗಲಿ


Team Udayavani, May 31, 2022, 9:40 AM IST

ತಂಬಾಕು ರಹಿತ ಜೀವನ, ಪರಿಸರ ನಮ್ಮದಾಗಲಿ

ಪ್ರತೀ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. “ತಂಬಾಕು ಪರಿಸರಕ್ಕೆ ಹಾನಿಕಾರಕ’ ಎಂಬುದು ಈ ವರ್ಷದ ಘೋಷವಾಕ್ಯ ವಾಗಿದೆ. ಪರಿಸರದ ಮೇಲೆ ತಂಬಾಕಿನ ದುಷ್ಪರಿಣಾಮವನ್ನು ನಿರ್ಮೂಲನೆಗೊಳಿಸುವುದು ಈ ವ‌ರ್ಷದ ಧ್ಯೇಯವಾಗಿರುತ್ತದೆ.

ಅತೀ ದೊಡ್ಡ ಸಾಂಕ್ರಾಮಿಕ ಪಿಡುಗೆಂದರೆ ಅದು ತಂಬಾಕು ಸೇವನೆ ಎಂಬ ದುಶ್ಚಟ. ತಂಬಾಕು ಸೇವನೆಯಿಂದ ದೇಹದ ಮೇಲಾಗುವ ಅಡ್ಡ ಪರಿಣಾಮಗಳಿಂದಾಗಿ ಪ್ರತೀ ವರ್ಷ 8 ಮಿಲಿಯನ್‌ ಜನರು ಸಾವನ್ನಪ್ಪುತ್ತಿದ್ದಾರೆ ಹಾಗೂ ಸರಿ ಸುಮಾರು 1.2 ಮಿಲಿಯನ್‌ ಜನರು ಇಂಥವರ ಸಂಪರ್ಕ ದಿಂದ (Passive smoke) ಸಾವನ್ನಪ್ಪುತ್ತಿದ್ದಾರೆ.

ತಂಬಾಕಿನಲ್ಲಿ ಹೊಗೆ ಸಹಿತ ಹಾಗೂ ಹೊಗೆ ರಹಿತ ತಂಬಾಕು ಇದ್ದು, ಯಾವುದೇ ತೆರನಾದ ತಂಬಾಕು ಸೇವನೆಯು ಜೀವಕ್ಕೆ ಅತ್ಯಂತ ಹಾನಿಕಾರಕ. ತಂಬಾಕು ಎಲೆಯ ರೂಪದಲ್ಲಿ ಸಿಗುವಂಥದ್ದು ಹಾಗೂ ಇದು ನಿಕೋಟಿನ್‌ ಮೊದಲಾದ ಹಲವಾರು ರಾಸಾಯನಿಕ ಪದಾರ್ಥಗಳನ್ನು ಒಳಗೊಂಡು ವ್ಯಸನಕಾರಿ ಆಗಿರುತ್ತದೆ. ಇದನ್ನು ಧೂಮಪಾನ ಮತ್ತು ಜಗಿಯಲು ಉಪಯೋಗಿಸುತ್ತಾರೆ. ಸಿಗರೇಟ್‌, ಬೀಡಿ, ಹುಕ್ಕಾ, ಖೈನಿ, ಗುಟ್ಕಾ ಮುಂತಾದ ರೂಪದಲ್ಲಿ ಇದನ್ನು ಬಳಸುತ್ತಾರೆ.

ತಂಬಾಕಿನಲ್ಲಿ ಮುಖ್ಯವಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೆಂದರೆ ಬಾಯಿ, ಗಂಟಲು ಸಮಸ್ಯೆ, ಶ್ವಾಸಕೋಶದ ತೊಂದರೆ, ಕಣ್ಣಿನ ತೊಂದರೆ, ಕ್ಷಯ ರೋಗ ಮತ್ತು ಕ್ಯಾನ್ಸರ್‌. ಸರಿಸುಮಾರು ಶೇ.80 ಅಂದರೆ 1.1 ಬಿಲಿಯನ್‌ನ‌ಷ್ಟು ತಂಬಾಕನ್ನು ಉಪಯೋಗಿಸುವವರು ಕೆಳ ಹಾಗೂ ಮಧ್ಯಮ ವರ್ಗದ ವರಮಾನ ಉಳ್ಳವ ರಾಗಿರುತ್ತಾರೆ. ಹೆಚ್ಚಿನ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಈ ತಂಬಾಕಿನ ಹೊಗೆಯಿಂದ ಕಲುಷಿತವಾದ ಗಾಳಿಯನ್ನು ಸೇವನೆ ಮಾಡುತ್ತಿರುತ್ತಾರೆ.

ತಂಬಾಕಿನಿಂದ ಉಂಟಾಗುವ ಸಾವುಗಳಲ್ಲಿ ಮುಖ್ಯವಾ ದದ್ದು ಹೃದ‌ಯ ಸಂಬಂಧಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿ ಸಿದ್ದು, ಅಂದರೆ ಹೃದಯ ವೈಫ‌ಲ್ಯ (IHD), ದೀರ್ಘ‌ ಸಮಯದ ಉಸಿರಾಟದ ತೊಂದರೆ (COPD), ಶ್ವಾಸ ಕೋಶದ ಅಲರ್ಜಿ, ಶ್ವಾಸಕೋಶದ ಉರಿಯೂತ, ಅಸ್ತಮಾ ಮುಂತಾದವು. ಸರಿಸುಮಾರು ಶೇ.45ರ‌ಷ್ಟು ಬಾಯಿಯ ಕ್ಯಾನ್ಸರ್‌ ಅಥವಾ ಅಬುìದ ರೋಗವು ಗಂಡಸರಲ್ಲಿ ಕಂಡುಬಂದರೆ ಶೇ. 17ರ‌ಷ್ಟು ಹೆಂಗಸರಲ್ಲಿ ಕಂಡು ಬರುತ್ತದೆ. ಬಾಯಿಯ ಕ್ಯಾನ್ಸರ್‌ ರೋಗವು 80 ಪ್ರತಿಶತ ತಂಬಾಕು ಸೇವನೆಯ ನೇರ ಸಂಪರ್ಕ ಹೊಂದಿರುತ್ತದೆ.
ಗರ್ಭಿಣಿಯರು ತಂಬಾಕು ಸೇವನೆ ಮಾಡುವುದರಿಂದ ಅಥವಾ ಧೂಮಪಾನಿಗಳ ಸಂಪರ್ಕದಲ್ಲಿರುವುದರಿಂದ ನಿರ್ಜೀವ ಜನನ (Still birth), ಅಕಾಲಿಕ ಜನ‌ನ (Premature birth), ಕಡಿಮೆ ತೂಕದ ಮಗುವಿನ ಜನನ (Low birth weight) ಮುಂತಾದ ದುಷ್ಪ‌³ರಿ ಣಾಮಗಳು ಉಂಟಾಗುತ್ತವೆ. 7,000ಕ್ಕೂ ಅಧಿಕ ರಾಸಾಯನಿಕಗಳು ಈ ಸಿಗರೇಟಿನ ಹೊಗೆಯಲ್ಲಿ ಕಂಡುಬರುತ್ತದೆ. ಈ ಹೊಗೆಯಲ್ಲಿನ ಕಾರ್ಬನ್‌ ಮೊನಾಕ್ಸೆ„ಡ್‌ ಅಂಶವು ರಕ್ತದಲ್ಲಿನ ಹಿಮೋ ಗ್ಲೋಬಿನ್‌ ಜತೆ ಸೇರಿಕೊಂಡು ಜೀವರಕ್ಷಕ‌ ಆಮ್ಲ ಜನಕವು ದೇಹದ ಜೀವಕೋಶ‌ಗಳಿಗೆ ಸೇರ ದಂತೆ ತಡೆಯೊಡ್ಡುತ್ತದೆ. ತಂಬಾಕಿನಲ್ಲಿರುವ ಕ್ಯಾನ್ಸರ್‌ಕಾರಕ ಕಣಗಳು ಜೀವಕೋಶಗಳ ಬೆಳವಣಿಗೆ ಮಾಡುವ ಜೀನ್ಸ್‌ಗಳನ್ನು ನಾಶ ಮಾಡುತ್ತದೆ. ಹಾಗಾಗಿ ಅಸಮರ್ಪಕ ಜೀವ ಕೋಶಗಳ ಬೆಳವಣಿಗೆ ಉಂಟಾಗಿ ಕ್ಯಾನ್ಸರ್‌ ರೋಗಕ್ಕೆ ಕಾರಣ ವಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ, ದೇಹದ ಚ‌ಯಾಪಚಯ ಕ್ರಿಯೆಗಳನ್ನು ವ್ಯತ್ಯಾಸಗೊಳಿಸುತ್ತದೆ.

ಧೂಮಪಾನ‌ ತ್ಯಜಿಸುವುದರಿಂದ ಮಾನವ ಭೀಕರ ಕಾಯಿಲೆಗಳಿಂದ ಪಾರಾಗಬಹುದಾಗಿದೆ. ಅಷ್ಟು ಮಾತ್ರ ವಲ್ಲದೆ ಆರೋಗ್ಯ ಸ್ಥಿತಿಯಲ್ಲಿಯೂ ಸುಧಾರಣೆ ಕಾಣಲು ಸಾಧ್ಯ. ಧೂಮಪಾನ ಅಥವಾ ತಂಬಾಕು ಸೇವನೆ ವರ್ಜಿ ಸುವುದರಿಂದ 1. ರಕ್ತದೊತ್ತಡವು ಸಹಜ ಸ್ಥಿತಿಗೆ ಮರಳುತ್ತದೆ. 2. ರಕ್ತ ಸಂಚಾರ ಹಾಗೂ ಶ್ವಾಸಕೋಶದ ಕ್ರಿಯೆ ಸುಧಾರಿಸುತ್ತದೆ. 3. ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಕಡಿಮೆ ಆಗುತ್ತದೆ. 4. ಪಾಶ್ವ ವಾಯು (ಲಕ್ವಾ) ಸಂಭವಿಸುವುದು ಕ್ಷೀಣಿಸುತ್ತದೆ. 5. ಬಾಯಿ/ಗಂಟಲು/ ಅನ್ನ ನಾಳ/ ಗರ್ಭಕಂಠ ಹಾಗೂ ಮೇದೋಜೀರಕ ಗ್ರಂಥಿಗಳ ಕ್ಯಾನ್ಸರ್‌ ತಗಲುವ ಅಪಾಯ ಕಡಿಮೆಯಾಗುತ್ತದೆ.

ಸಿಗರೇಟಿನ ಉತ್ಪಾದನೆಗೆ ಮಿಲಿಯನ್‌ಗಟ್ಟಲೆ ಮರಗಳು ಕಡಿಯಲ್ಪಟ್ಟರೆ ಲಕ್ಷ ಟನ್‌ ಕಾರ್ಬನ್‌ ಡೈ ಆಕ್ಸೆ„ಡ್‌ (ಇO2 ) ಪರಿಸರವನ್ನು ಸೇರಿ ಕೊಳ್ಳುತ್ತಿದೆ ಹಾಗೂ ಮಿಲಿಯನ್‌ ಲೀಟರ್‌ಗಳಷ್ಟು ನೀರು ಇದರ ಉತ್ಪಾದನೆಗೆ ಬಳಸಲ್ಪಡು ತ್ತಿದೆೆ. ಮಣ್ಣು, ಜಲ, ವಾಯು ಸಹಿತ ಪರಿಸರದಲ್ಲೆಲ್ಲ ತಂಬಾಕಿನ ತ್ಯಾಜ್ಯಗಳೇ ತುಂಬಿದ್ದು ವಾತಾವರಣವು ಕಲುಷಿತಗೊಳ್ಳುತ್ತಿವೆ. ಈ ವಿಷಕಾರಿ ವರ್ತುಲದಿಂದ ಜನರನ್ನು, ಮುಗ್ಧ ವಿದ್ಯಾರ್ಥಿ ಗಳನ್ನು, ಹದಿಹರೆ ಯದ ವರನ್ನು, ಮಹಿಳೆಯರು, ಗರ್ಭಿಣಿಯರು ಇವರನ್ನೆಲ್ಲ ರಕ್ಷಿಸಬೇಕಾಗಿರು ವುದು ಎಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ತಂಬಾಕು ತ್ಯಾಜ್ಯವನ್ನು ನಿವಾರಣೆ ಮಾಡಿ, ವಾತಾವರಣವನ್ನು ಶುದ್ಧಗೊಳಿಸುವ ಕಾರ್ಯ ನಡೆಯಬೇಕಿದೆ. ತಂಬಾಕನ್ನು ಉತ್ಪಾ ದಿಸುವ ಕಾರ್ಖಾನೆ ಗಳಿಗೆ ನೀಡುವ ಆಮಿಷಗಳಿಗೆ, ಉಡು ಗೊರೆಗಳಿಗೆ, ಪ್ರಾಯೋಜಕತ್ವಗಳಿಗೆ ಯಾರೂ ಬಲಿ ಬೀಳದೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕ್ರೂರತೆಯನ್ನು ಎಲ್ಲರಿಗೂ ಮನದಟ್ಟು ಮಾಡುವ ಕಾರ್ಯ ನಡೆಯಬೇಕಿದೆ.

2003 ರ ತಂಬಾಕು ನಿಯಂತ್ರಣ ಕಾನೂನು (COTPA - 2003) ಇದರ ಪರಿಣಾಮಕಾರಿ ಅನು ಷ್ಠಾನಕ್ಕೆ ಇದು ಸಕಾಲ. ಇದರಂತೆ: (1) ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡು ವುದು ನಿಷಿದ್ಧ ಹಾಗೂ ಧೂಮಪಾನ ಉತ್ತೇಜಿಸುವ ವಸ್ತುಗಳನ್ನು ಅಂಗಡಿಗಳಲ್ಲಿ ಇರಿಸಕೂಡದು ಹಾಗೂ ಈ ಬಗ್ಗೆ ನಾಮಫ‌ಲಕಗಳ ಪ್ರದರ್ಶನ ಮಾಡತಕ್ಕದ್ದು. (2) ತಂಬಾಕು ಉತ್ಪನ್ನಗಳ ನೇರ ಹಾಗೂ ಜಾಹೀರಾತು, ಉತ್ತೇಜನ, ಪ್ರಾಯೋ ಜಕತೆ ನಿಷಿದ್ಧ. (3) ಮಾರಾಟ ಅಂಗಡಿಗಳಲ್ಲಿ, ಗೋಡೆ ಬರಹ, ಫ‌ಲಕಗಳ ಮೂಲಕ ಜಾಹೀರಾತು ನೀಡುವಂತಿಲ್ಲ. (4) ಅಪ್ರಾಪ್ತ ವಯಸ್ಕರಿಗೆ (18 ವ‌ರ್ಷದೊಳಗೆ) ನೀಡುವಂತಿಲ್ಲ. ಈ ಬಗ್ಗೆ ನಾಮಫ‌ಲಕ ಕಡ್ಡಾಯ. (5) ಶಿಕ್ಷಣ ಸಂಸ್ಥೆಗಳ 100 ಗಜದ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. (6) ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳ ಮೇಲೆ ಅಗತ್ಯ ಎಚ್ಚರಿಕೆಯ ಸಂದೇಶವಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಯಲ್ಲಿ NTCP ರಾಜ್ಯ ಹಾಗೂ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಘಟಕಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ನೇರ ಜಿಲ್ಲಾಧಿಕಾರಿಗಳ ನಿಗಾ ವಣೆಯಲ್ಲಿರುತ್ತದೆ. ಈ ಕಾರ್ಯಕ್ರಮದ ಅನು ಷ್ಠಾನದಲ್ಲಿ ಆರೋಗ್ಯ, ಶಿಕ್ಷಣ, ಕಂದಾಯ, ಪೊಲೀಸ್‌, ಕಾರ್ಮಿಕ ಇಲಾಖೆ… ಹೀಗೆ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಾ ಚರಣೆ ನಡೆಸುತ್ತಿದ್ದು, ಮುಖ್ಯವಾಗಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳ ಸ್ವತ್ಛತಾ ಆಂದೋಲನಗಳು, ದಾಳಿಗಳು ಹಾಗೂ ಇಲಾಖೆ ಗಳನ್ನು ತಂಬಾಕು ರಹಿತ ಪ್ರದೇಶಗಳಾಗಿಸುವ ಮೂಲಕ ಹತ್ತು ಹಲವು ಕಾರ್ಯಕ್ರಮ ಗಳನ್ನು ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಇನ್ನೂ ಪರಿಣಾಮಕಾರಿಯಾದ ಹೆಜ್ಜೆಗಳನ್ನು ಇಡ ಬೇಕಾಗಿರುತ್ತದೆ. ಮುಖ್ಯವಾಗಿ ಶಾಲಾ- ಕಾಲೇಜುಗಳಲ್ಲಿ ಈ ದುಷ್ಪರಿಣಾಮಗಳ ಮನ ದಟ್ಟು ಮಾಡಿಸಿ, ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅತೀ ಅಗತ್ಯ. ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆಯನ್ನು ಸೂಚಿಸಿ, ಈ ಕಾರ್ಖಾನೆಗಳಲ್ಲಿ ತೊಡಗಿಸಿಕೊಂಡ ಕಾರ್ಮಿ ಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದೂ ಅತೀ ಅಗತ್ಯವಾಗಿರುತ್ತದೆ. ಹಾಗಾಗಿ “ಜೀವನವನ್ನು ಆಯ್ದು ಕೊಳ್ಳಿ – ತಂಬಾಕನ್ನಲ್ಲ’ ತಂಬಾಕು- ಪರಿಸರಕ್ಕೆ ಮಾರಕ.

 ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉಡುಪಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.