ಸರಕಾರದಿಂದ ಒಬ್ಬ ಸರಕಾರಿ ಶಾಲಾ ವಿದ್ಯಾರ್ಥಿಗೆ 2 ಲ.ರೂ. ಖರ್ಚು!

71 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮಕ್ಕಳು, ಶಿಕ್ಷಕರ ಹಂಚುವಿಕೆಯಲ್ಲಿ ವ್ಯತ್ಯಯ

Team Udayavani, May 31, 2022, 11:52 AM IST

spend

ಕುಂದಾಪುರ: ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳ ಕಾರಣದಿಂದ ಸರಕಾರ ಒಬ್ಬ ವಿದ್ಯಾರ್ಥಿಗೆ ಶಿಕ್ಷಣಕ್ಕಾಗಿ ವಾರ್ಷಿಕ 2 ಲಕ್ಷ ರೂ.ವರೆಗೆ ವ್ಯಯಿಸುತ್ತಿದೆ! ಎಂಜಿನಿಯರಿಂಗ್‌ ಶಿಕ್ಷಣಕ್ಕಿಂತಲೂ ದುಬಾರಿಯಾಗಿದೆ ಪ್ರಾಥಮಿಕ ಶಾಲಾ ಶಿಕ್ಷಣದ ವೆಚ್ಚ.

ಕುಂದಾಪುರ ಶೈಕ್ಷಣಿಕ ವಲಯದಲ್ಲಿ ಕಳೆದ ವರ್ಷ 16,580 ವಿದ್ಯಾರ್ಥಿಗಳು, 142 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 34 ಪ್ರೌಢಶಾಲೆಗಳಿವೆ. ಬೈಂದೂರು ವಲಯದಲ್ಲಿ 15,705 ವಿದ್ಯಾರ್ಥಿಗಳು, 181 ಪ್ರಾಥಮಿಕ, 41 ಪ್ರೌಢಶಾಲೆಗಳಿವೆ. ಕುಂದಾಪುರದಲ್ಲಿ 25 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ, ಬೈಂದೂರಿನಲ್ಲಿ 46 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರು.

ಕಡಿಮೆ ದಾಖಲಾತಿ

ಕುಂದಾಪುರದಲ್ಲಿ 15ಕ್ಕಿಂತ ಕಡಿಮೆ ದಾಖಲಾತಿಯ ಶಾಲೆಗಳೆಂದರೆ ಮಡಾಮಕ್ಕಿಯ ಹಂಜ, ಸಿದ್ದಾಪುರದ ಬೆಚ್ಚಳ್ಳಿ, ಹೊಸಂಗಡಿಯ ಭಾಗಿಮನೆ (7), ಹೊಳೆಬಾಗಿಲು ಮಚ್ಚಟ್ಟು, ಬಳ್ಮನೆ (12), ಕೇಳ (14), ಶಾನ್ಕಟ್ಟು ಅಂಪಾರು (10), ಮರಾತೂರ್‌ ಮೊಳಹಳ್ಳಿ (13), ಕುಂದಾಪುರ ಖಾರ್ವಿಕೇರಿ (11), ಬಾಳೆಜಡ್ಡು ಹೊಸಂಗಡಿ (12). ಬೈಂದೂರಿನಲ್ಲಿ ಯಡ್ನಳ್ಳಿ ಆಜ್ರಿ, ಗೋಳಿಹೊಳೆ ಉರ್ದು (7), ರಮಣಕೊಡ್ಲು ಆಜ್ರಿ, ಹೊಸಬಾಳು ಹಳ್ಳಿಹೊಳೆ, ಆಜ್ರಿಗದ್ದೆ, ಕುಳ್ಳಂಬಳ್ಳಿ, ಬಸ್ರಿಬೇರು (14), ದೇವರಬಾಳು ಹಳ್ಳಿಹೊಳೆ, ಹಾಲಾಡಿ ಕೆರಾಡಿ (6), ಆರ್ಗೋಡು (2), ಯೋಜನಾನನಗರ, ಕರ್ಕುಂಜೆ, ಹಂದಕುಂದ ಕರ್ಕುಂಜೆ (13), ಮಾವಿನಕಾರು, ಮಾವಿನಗುಳಿ (11), ಹಾಲ್ಕಲ್‌ (5), ಬೆಳ್ಕಲ್‌ (12), ಹಡವು (2), ಹೆನ್‌ಬೇರು (5), ಹೊಸಕೋಟೆ, ಅತ್ರಾಡಿ, ಮೂಡುಮಂದ (9).

ಕಡಿಮೆ ಶಿಕ್ಷಕರು

ಕುಂದಾಪುರದಲ್ಲಿ ಪ್ರಾಥಮಿಕದಲ್ಲಿ 119, ಪ್ರೌಢಶಾಲೆಯಲ್ಲಿ 16 ಶಿಕ್ಷಕರ ಕೊರತೆಯಿದೆ. ಒಟ್ಟು ಶಿಕ್ಷಕರ ಮಂಜೂರಾತಿ ಪ್ರಾಥಮಿಕಕ್ಕೆ 402, ಪ್ರೌಢಶಾಲೆಗೆ 233. ಈ ವರ್ಷ 56 ಅತಿಥಿ ಶಿಕ್ಷಕರನ್ನು ಒದಗಿಸಲಾಗಿದೆ. ಶೈಕ್ಷಣಿಕ ವರ್ಷದ ಆರಂಭವೇ ಅತಿಥಿ ಶಿಕ್ಷಕರು ದೊರೆತದ್ದು ಇಲಾಖೆಯ ಈ ಬಾರಿಯ ಸಾಧನೆ. ಈ ವರ್ಷದ ಆಗಸ್ಟ್‌ನಲ್ಲಿ 24 ಮಂದಿ ವಯೋನಿವೃತ್ತಿ ಹೊಂದಲಿದ್ದಾರೆ!.

 2 ಲಕ್ಷ ರೂ.

ಶಿಕ್ಷಕರ ಅಸಮರ್ಪಕ ನಿಯೋಜನೆ ಯಿಂದಾಗಿ ಸರಕಾರಕ್ಕೆ ಒಬ್ಬ ವಿದ್ಯಾರ್ಥಿಗೆ ಶಿಕ್ಷಕರ ವೇತನಕ್ಕೆ 2 ಲಕ್ಷ ರೂ. ವೆಚ್ಚವಾದಂತಾಗುತ್ತದೆ. ಲಭ್ಯ ಮಾಹಿತಿ ಪ್ರಕಾರ 32 ವಿದ್ಯಾರ್ಥಿಗಳು ಇರುವ ಶಾಲೆಯೊಂದರ ಶಿಕ್ಷಕರ ವಾರ್ಷಿಕ ವೇತನವೇ 72 ಲಕ್ಷ ರೂ. ಆಗಿದೆ. ಇನ್ನುಳಿದಂತೆ ಬಿಸಿಯೂಟ ಸಾಮಗ್ರಿ, ಸಿಬಂದಿ ವೇತನ ಪ್ರತ್ಯೇಕ. ಬರಿದೆ ಶಿಕ್ಷಕರ ವೇತನವೇ ಒಬ್ಬ ವಿದ್ಯಾರ್ಥಿಗೆ 2 ಲಕ್ಷ ರೂ.ದಷ್ಟಾಗುತ್ತದೆ.

ಇತರ ಶಾಲೆಗಳಲ್ಲೂ ಸರಕಾರಕ್ಕೆ ಸರಿಸುಮಾರು 42 ಸಾವಿರ ರೂ. ಒಬ್ಬ ವಿದ್ಯಾರ್ಥಿಗಾಗಿ ವೆಚ್ಚವಾಗುತ್ತದೆ. ಅದೇ ಸರಕಾರ ಯಾವುದೇ ವಿದ್ಯಾರ್ಥಿ ಖಾಸಗಿ ಶಾಲೆಗೆ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಹೋದರೆ ಪಾವತಿಸುವುದು 16 ಸಾವಿರ ರೂ. ಮಾತ್ರ! ಅಕ್ಕಪಕ್ಕದಲ್ಲೇ ಕಡಿಮೆ ವಿದ್ಯಾರ್ಥಿ ಸಂಖ್ಯೆಯ ಶಾಲೆಗಳು ಬೋಧನೆ ನಿರತವಾಗಿರುವ ಉದಾಹರಣೆಯೂ ಇದೆ. ಸರಕಾರ ಪಂಚಾಯತ್‌ ಗೊಂದು ಮಾದರಿ ಶಾಲೆ ಮಾಡಿದಾಗ ಇಂತಹ ತರತಮಗಳು ಸರಿಯಾಗಬಹುದು ಎನ್ನುವ ನಿರೀಕ್ಷೆ ಶಿಕ್ಷಣಾಭಿಮಾನಿಗಳದ್ದು.

ಅಸಮರ್ಪಕ ಹಂಚಿಕೆ

ಸರಕಾರದ ನಿಯಮಾವಳಿ ಪ್ರಕಾರ 40 ವಿದ್ಯಾರ್ಥಿಗೆ ಒಬ್ಬ ಶಿಕ್ಷಕರಂತೆ ಹುದ್ದೆ ಮಂಜೂರಾಗುತ್ತದೆ. ಕುಂದಾ ಪುರದಲ್ಲಿ 135 ಶಿಕ್ಷಕರ ಕೊರತೆಯಿದ್ದರೂ 27 ವಿದ್ಯಾರ್ಥಿಗೆ ಒಬ್ಬರು ಶಿಕ್ಷಕರಿದ್ದಾರೆ. ಅಸಮರ್ಪಕ ಹಂಚಿಕೆಯಿಂದಾಗಿ ಕಳೆದ ವರ್ಷ 9 ಕಡೆ ಶೂನ್ಯ ಶಿಕ್ಷಕರ ಶಾಲೆಗಳಿದ್ದವು. 20ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದರೂ ಅಲ್ಲಿಗೆ ಇಬ್ಬರು ಶಿಕ್ಷಕರನ್ನು ನೀಡ ಲಾಗುತ್ತದೆ. ಒಂದು ಶಾಲೆಯಲ್ಲಿ ಇಬ್ಬರೇ ವಿದ್ಯಾರ್ಥಿ ಗಳಿದ್ದಾಗಲೂ ಅಲ್ಲಿಗೆ 2 ಶಿಕ್ಷಕರು, ಬಿಸಿಯೂಟ ಸಿಬಂದಿಯನ್ನು ನೇಮಿಸಲಾಗುತ್ತದೆ. ಆಗ ಹೆಚ್ಚು ಮಕ್ಕಳಿರುವ ಶಾಲೆಗೆ ಶಿಕ್ಷಕರ ಕೊರತೆ ಉಂಟಾಗುತ್ತದೆ.

ಫ‌ಲಿತಾಂಶ

ಇಷ್ಟೆಲ್ಲ ಕೊರತೆ ಇದ್ದರೂ ಈ ಬಾರಿ ಎಸೆಸೆಲ್ಸಿಯಲ್ಲಿ ಸರಕಾರಿ ಶಾಲೆಗಳೇ ಅಧಿಕ ಫ‌ಲಿತಾಂಶ ದಾಖಲಿಸಿವೆ. 8 ಶಾಲೆಗಳು ಶೇ.100 ಫ‌ಲಿತಾಂಶ ದಾಖಲಿಸಿದ್ದು ಈ ಪೈಕಿ 5 ಶಾಲೆಗಳು ಸರಕಾರಿ. ಪೂರ್ಣಾಂಕ ಪಡೆದ ಇಬ್ಬರೂ ಸರಕಾರಿ ಶಾಲೆಯವರೇ ಎನ್ನುವುದು ಹೆಗ್ಗಳಿಕೆ. ಶೇ.80ಕ್ಕಿಂತ ಕಡಿಮೆ ಫ‌ಲಿತಾಂಶ ಒಂದೇ ಶಾಲೆಗೆ (ಶೇ.71) ಬಂದುದು ಎನ್ನುವುದು ಹೆಗ್ಗಳಿಕೆ. ಇದೆಲ್ಲ ಕಾರಣದಿಂದ ಈ ಬಾರಿಯೂ ಸರಕಾರಿ ಶಾಲೆಗಳತ್ತ ಪೋಷಕರು ಮನ ಮಾಡಿದ್ದಾರೆ. ಕಳೆದ ಬಾರಿಯೂ ಖಾಸಗಿ ಶಾಲೆ ಬಿಡಿಸಿ ಸರಕಾರಿ ಶಾಲೆಗೆ ದಾಖಲಿಸಿದ್ದರು. ಈ ವರ್ಷವೂ ಅಂತಹ ಪ್ರಕರಣ ಕೆಲವೆಡೆ ನಡೆಯುತ್ತಿದೆ. ಇದು ಸರಕಾರಿ ಶಾಲೆಗಳ ಮೇಲೆ ಜನರಿಗೆ ಮೂಡಿರುವ ವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರು, ದಾನಿಗಳು ನಾನಾ ನಮೂನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ದಾಖಲಾತಿ ನಡೆಯುತ್ತಿದೆ ಶಾಲಾ ದಾಖಲಾತಿ ಪ್ರಕ್ರಿಯೆ ಕಳೆದ ವರ್ಷ ಕೆಲವು ತಿಂಗಳ ಕಾಲ ಎಂಬಂತೆ ನಡೆದಿದೆ. ಈ ವರ್ಷ ಜೂ.30ರವರೆಗೆ ಪೂರ್ಣಪ್ರಮಾಣದಲ್ಲಿ ನಡೆಯುತ್ತದೆ. ಬಳಿಕವೂ ದಾಖಲಾತಿಗೆ ನಿರಾಕರಣೆ ಇಲ್ಲ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಸೇರಿಸಲು ಮುಜುಗರ ಬೇಡ. ಉತ್ತಮ ಶಿಕ್ಷಣ ದೊರೆಯುತ್ತದೆ. ಅರುಣ್‌ಕುಮಾರ್‌ ಶೆಟ್ಟಿ ಶಿಕ್ಷಣಾಧಿಕಾರಿ, ಕುಂದಾಪುರ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

1-aaane

Karkala; ಗಣಪತಿ ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮೃತರ ಕುಟುಂಬಸ್ಥರು ಪಾರದರ್ಶಕ ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು

AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ

8

Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.