ರೈತ ವಿದ್ಯಾನಿಧಿ: ದ.ಕ., ಉಡುಪಿಯಲ್ಲಿ 13 ಕೋ.ರೂ. ಪಾವತಿ
Team Udayavani, Jun 1, 2022, 1:24 AM IST
ಪುತ್ತೂರು/ಉಡುಪಿ,: ರೈತ ವಿದ್ಯಾನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022ರ ಮಾರ್ಚ್ ಅಂತ್ಯದ ತನಕ 7.87 ಕೋ.ರೂ., ಉಡುಪಿ ಜಿಲ್ಲೆಯಲ್ಲಿ 522.44 ಲಕ್ಷ ರೂ. ಸೇರಿದಂತೆ ಒಟ್ಟು ಸುಮಾರು 13 ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತನ ಪಾವತಿಯಾಗಿದೆ.
ವಿದ್ಯಾನಿಧಿಯನ್ನು ಈ ಮೊದಲು ರೈತರ ಮಕ್ಕಳಿಗಷ್ಟೇ ಮಿತಿಗೊಳಿಸಿದ್ದ ಸರಕಾರ ಕಳೆದ ಡಿಸೆಂಬರ್‌ನಲ್ಲಿ ಆದೇಶವನ್ನು ಮಾರ್ಪಡಿಸಿ ರೈತ ಕುಟುಂಬದ ಎಲ್ಲ ಮಕ್ಕಳಿಗೂ ನೀಡುವಂತೆ ಆದೇಶಿಸಿದೆ. ಹಿಂದೆ ಇತರ ಯಾವುದೇ ಇಲಾಖೆಯಿಂದ ವಿದ್ಯಾರ್ಥಿವೇತನ ಪಡೆದಿರಬಾರದು ಎಂಬ ನಿಯಮ ಇತ್ತು. ಈಗ ಅದನ್ನು ಬದಲಿಸಿ ಯಾವುದೇ ಇಲಾಖೆಯಿಂದ, ಯಾವುದೇ ರೀತಿಯ ವಿದ್ಯಾರ್ಥಿವೇತನ ಪಡೆದಿದ್ದರೂ/ ಪಡೆಯಲು ಅರ್ಜಿ ಸಲ್ಲಿಸಿದ್ದರೂ ವಿದ್ಯಾನಿಧಿಗೂ ಅರ್ಹರು ಎಂದಿರುವ ಕಾರಣ ಈ ಬಾರಿ ಅರ್ಜಿ ಸಲ್ಲಿಕೆ ಸಂಖ್ಯೆ ಹೆಚ್ಚಳದ ನಿರೀಕ್ಷೆ ಮೂಡಿದೆ.
ಯಾರಿಗೆ ಸ್ಕಾಲರ್‌ಶಿಪ್?
ಎಸೆಸೆಲ್ಸಿ ಪಿಯುಸಿ, ಪದವಿ ಹಾಗೂ ಉನ್ನತ ವ್ಯಾಸಂಗ ಮಾಡುವ ಕೃಷಿ ಜಮೀನು ಹೊಂದಿರುವ ರೈತರ ಮಕ್ಕಳು ವಿದ್ಯಾನಿಧಿಯ ಪ್ರಯೋಜನ ಪಡೆಯಬಹುದು. ವಿವಿಧ ಇಲಾಖೆಗಳು ನಿರ್ವಹಿಸುತ್ತಿರುವ ಶೈಕ್ಷಣಿಕ ಹಾಗೂ ದತ್ತಾಂಶದ ಆಧಾರದ ಮೇರೆಗೆ ಅರ್ಹರನ್ನು ಗುರುತಿಸಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕೆ ಕೃಷಿ ಇಲಾಖೆಯು ಸಹಕಾರ ನೀಡುತ್ತದೆ. ಇದು ರೈತರ ಕುಟುಂಬದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿರುವ ಪ್ರೋತ್ಸಾಹವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.