ಕೆರೆ ಏರಿ ರಸ್ತೆ ವಿಸ್ತರಣೆಗೆ ಜನರ ಒತ್ತಾಯ
Team Udayavani, Jun 1, 2022, 4:35 PM IST
ಬೇಲೂರು: ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಣಘಟ್ಟ ಕೆರೆ ಏರಿ ಅತ್ಯಂತ ಕಿರಿದಾಗಿದ್ದು ತಡೆಗೋಡೆಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಭಾಗದಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಏರಿ ಅಗಲೀಕರಣಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರದಿಂದ ಪ್ರಸಾದಿಹಳ್ಳಿ, ರಣಘಟ್ಟ,ಮಾಳೇಗೆರೆ ಮಾರ್ಗವಾಗಿ ತಾರೀಮರ ಇನ್ನಿತರ ಗ್ರಾಮಗಳಿಗೆ ರಣ ಘಟ್ಟ ಕೆರೆ ಏರಿ ಮೇಲೆ ಹೋಗಿ ಬರುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ತಾರೀಮರ ಸಮೀಪ ಅಂಬೇಡ್ಕರ್ ಬೆಟ್ಟದಲ್ಲಿ ಬುದ್ಧ ಗಾಂಧಾರ ವಿಹಾರಕ್ಕೆಭೇಟಿ ಕೊಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ.
ಸುರಕ್ಷತೆಯಿಲ್ಲದ ಪಯಣ: ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕೆರೆ ಏರಿ ಮಾತ್ರ ಕಿರಿದಾಗಿಯೇ ಇದೆ. ತಿರುವುಗಳಿಂದ ಕೂಡಿರುವ ಕಿರಿದಾದ ಏರಿಯ ಮೇಲೆ ವಾಹನ ಚಲಾಯಿಸುವುದೇ ದುಸ್ತರವಾಗಿದೆ. ಅಲ್ಲದೇ ಇತ್ತೀಚೆಗೆ ಕೆರೆಯ ಹೂಳು ತೆಗೆದಿದ್ದು ನೀರು ತುಂಬಿ ತುಳುಕುತ್ತಿದೆ. ಕಿರಿದಾದ ಕೆರೆ ಏರಿಗೆ ತಡೆ ಗೋಡೆ ಇಲ್ಲದೆ ವಾಹನ ಸವಾರರು ಆತಂಕದಲ್ಲೇ ಚಲಿಸಬೇಕಾಗಿದೆ. ಕೆರೆ ಏರಿಯ ಎರಡೂ ಕಡೆಯೂ ತಡೆಗೋಡೆ ಇಲ್ಲದ ಕಾರಣ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
ನರಬಲಿಗೆ ಕಾಯುತ್ತಿರುವ ಕೆರೆ: ಇದೆ ಕೆರೆ ಏರಿ ಮೇಲೆ ದಿನನಿತ್ಯ ಓಡಾಡುವ ಕಾಫಿಲಿಂಕ್ಸ್ ನವೀನ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಬೇಲೂರಿನ ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಏರಿಗೆ ತಡೆಗೋಡೆ ಇಲ್ಲದೆ ಬಸ್ಸುಉರುಳಿ 6ಮಂದಿ ಪ್ರಾಣ ಕಳೆದುಕೊಂಡಿದ್ದರು. ಆನಂತರ ಎಚ್ಚೆತ್ತ ಪಿಡಬ್ಲ್ಯುಡಿ ಇಲಾಖೆ ಕೆರೆ ಏರಿ ನಿರ್ಮಿಸಿತ್ತು. ರಣಘಟ್ಟ ಕೆರೆ ಏರಿ ತಡೆಗೋಡೆಯಿಲ್ಲದೆ ನರಬಲಿಗಾಗಿ ಕಾಯುತ್ತಿದೆ. ವಾಹನ ಸವಾರರು ಸ್ವಲ್ಪ ಎಚ್ಚರತಪ್ಪಿದರೂ ತುಂಬಿದ ಕೆರೆ ಒಳಗೆ ಅಥವಾ ಪಕ್ಕದ ಇಪ್ಪತ್ತು ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಪ್ರಾಣಪಾಯ ಸಂಭವಿಸುವುದು ಖಚಿತ.
ತಡೆಗೋಡೆ ನಿರ್ಮಾಣಕ್ಕೆ ಮನವಿ: ಈ ಹಿಂದೆ ಸಾಕಷ್ಟು ಬಾರಿ ಶಾಸಕರಿಗೆ ಸಂಬಂಧಪಟ್ಟ ಇಲಾಖೆಯವರಿಗೆ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದರು.ಇದುವರೆಗೂ ಸ್ಪಂದಿಸಿಲ್ಲ. ಬೇಡದ ಯೋಜನೆಗಳಿಗೆನೂರಾರು ಕೋಟಿ ಖರ್ಚು ಮಾಡುತ್ತಾರೆ. ಕೆರೆ ಏರಿತಡೆಗೋಡೆ ಇಲ್ಲದಿರುವುದು ಇವರ ಕಣ್ಣಿಗೆ ಕಾಣುತ್ತಿಲ್ಲ.ವಿಷ್ಣು ಸಮುದ್ರ ಕೆರೆಯಂತೆ ದುರಂತ ಸಂಭವಿಸುವಮೊದಲೇ ಶಾಸಕರು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು: ಕೋಗಿಲಮನೆ ಗ್ರಾಪಂ ಸದಸ್ಯ ಸಂಗಮೇಶ್ ಮಾತನಾಡಿ, ಇತ್ತೀಚೆಗೆ ಕೆರೆಯಲ್ಲಿ ಹದಿನೈದು ಅಡಿಗೂ ಹೆಚ್ಚು ಆಳದಿಂದಹೂಳು ತೆಗೆದಿದ್ದಾರೆ. ಅಲ್ಲದೆ ವರುಣನ ಕೃಪೆಯಿಂದ ಕೆರೆಯು ಮೈದುಂಬಿದೆ. ನೂರಾರು ಎಕರೆ ಜಮೀನು ಗಳಿಗೆ ಈ ಕೆರೆ ನೀರುಣಿಸುತ್ತಿದೆ. ಆದರೆ ಕಿರಿದಾದ ತಿರುವು ಮುರುವುಗಳಿರುವ ಕೆರೆ ಏರಿಯ ಮೇಲೆ ವಾಹನಗಳು ಓಡಾಡಲು ಹರಸಾಹಸ ಪಡಬೇಕು. ಇದರ ಜೊತೆಗೆ ತಡೆಗೋಡೆಯಿಲ್ಲದೆ ಜೀವಭಯದಿಂದ ಚಲಿಸ ಬೇಕು. ಈ ಕೆರೆಯ ಏರಿಯ ಮೇಲೆ ಸಣ್ಣಪುಟ್ಟ ಅವಘಡ ಗಳು ಸಂಭವಿಸುತ್ತಲೇ ಇವೆ. ದೊಡ್ಡ ಅನಾಹುತ ನಡೆಯುವ ಮೊದಲು ಶಾಸಕರು ಹಾಗೂ ಸಂಬಂಧ ಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸಿ ಕೊಡಿ ಇಲ್ಲವಾದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಜೀವಹಾನಿ ಸಂಭವಿಸಿದರೇ ಹೊಣೆ ಯಾರು?: ಹತ್ತಕ್ಕೂ ಹೆಚ್ಚು ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತಾಲೂಕು ಕೇಂದ್ರಕ್ಕೆ ತೆರಳುತ್ತಾರೆ. ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಬಾಡಿಗೆ ಆಪೆ ಗಾಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರ ನ್ನು ಕುರಿಮಂದೆಯಂತೆ ತುಂಬಿಕೊಂಡು ಹೋಗುತ್ತಾರೆ. ಕೂಲಿ ಕಾರ್ಮಿಕರು ಆಸ್ಪತ್ರೆಗೆ ತೆರಳುವ ರೋಗಿಗಳು, ವೃದ್ಧರು , ರೈತರು ಇಲ್ಲಿ ಬಾಡಿಗೆ ಆಟೋ ಮತ್ತು ಆಪೆ ಗಾಡಿಯನ್ನೇ ಅವಲಂಬಿಸಿದ್ದಾರೆ. ಕಿರಿ ದಾದ ಕೆರೆ ಏರಿಮೇಲೆ ಎಚ್ಚರ ತಪ್ಪಿ ಅನಾಹುತ ಸಂಭವಿಸಿದರೆ ಇವರೆಲ್ಲರ ಜೀವನಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳು ಉತ್ತರ ಹೇಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.