ಮಂಗಳೂರು: “ಉದಯವಾಣಿ” ನೇತೃತ್ವದಲ್ಲಿ ಮಳೆ ನೀರು ಕೊಯ್ಲು ಕಾರ್ಯಾಗಾರ ; ಫೋಟೋ ಗ್ಯಾಲರಿ
ಮಂಗಳೂರು “ಉದಯವಾಣಿ’ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಸೋಮವಾರ ಪುರಭವನದದಲ್ಲಿ ಮಳೆ ನೀರು ಕೊಯ್ಲು ಕುರಿತ ಕಾರ್ಯಾಗಾರ ನಡೆಸಲಾಯಿತು. ಪ್ರಸಕ್ತ ಕಾಲದಲ್ಲಿ ಜಲ ಮರುಪೂರಣ ಪ್ರಕ್ರಿಯೆ ಅತ್ಯಂತ ಅಗತ್ಯ ಹಾಗೂ ಅನಿವಾರ್ಯ ಎಂದು ಮಂಗಳೂರು ವಿವಿ ಸಾಗರ ಭೂ ವಿಜ್ಞಾನ ವಿಭಾಗ ನಿವೃತ್ತ ಪ್ರಾಧ್ಯಾಪಕ ಡಾ| ಎಚ್. ಗಂಗಾಧರ ಭಟ್ ಹೇಳಿದರು.
ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಪ್ರಾತ್ಯಕ್ಷಿಕೆ ಹಾಗೂ ಉಪಕರಣಗಳ ಪ್ರದರ್ಶನ ನಡೆಯಿತು.ಮೇಯರ್ ಪ್ರೇಮಾನಂದ ಶೆಟ್ಟಿ , ಸಹಾಯಕ ಎಂಜಿನಿಯರ್ ವಿಜಯ್, ಪ್ರಧಾನ ತರಬೇತಿದಾರರಾದ ನವಿತ್, ಯೋಗೀಶ್ ಉಪಸ್ಥಿತರಿದ್ದರು. ಮಂಗಳೂರು ವಿ.ವಿ. ಎನ್ಎಸ್ ಎಸ್ ಸಂಯೋಜನಾಧಿಕಾರಿ ಡಾ| ನಾಗರತ್ನ, ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ಮುಖ್ಯ ವರದಿಗಾರ ವೇಣು ವಿನೋದ್ ವಂದಿಸಿದರು. ಹಿರಿಯ ವರದಿಗಾರ ದಿನೇಶ್ ಇರಾ ನಿರೂಪಿಸಿದರು.