ಲಿಂಗಪ್ಪನವರ ಗುರುವಿನ ಹೆಜ್ಜೆ ಪುಸ್ತಕ ಬಿಡುಗಡೆ; ನಿವೃತ್ತಿ ಕಾರ್ಯಕ್ರಮ
Team Udayavani, Jun 1, 2022, 8:06 PM IST
ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದಲ್ಲಿ ಸಾವಿರಾರು ಕೋಟಿ ರೂಗಳನ್ನು ಶಿಕ್ಷಣಕ್ಕಾಗಿ ನೀಡುತ್ತಿವೆ, ಅದರ ಸದುಪಯೋಗವನ್ನು ನಾವುಗಳು ಮಾಡಿಕೋಳ್ಳಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಥರಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಲಿಂಗಪ್ಪ ನವರು ಬರೆದ ಗುರುವಿನ ಹೆಜ್ಜೆ ಪುಸ್ತಕ ಬಿಡುಗಡೆ ಮತ್ತು ಅವರ ವಯೋ ನಿವೃತ್ತಿ ಕಾರ್ಯಕ್ರಮದಲ್ಲಿ ಲಿಂಗಪ್ಪ ನವರನ್ನು ಸನ್ಮಾನಿಸಿ ಮಾತನಾಡಿ, ದೇಶದಲ್ಲಿ ಶಿಕ್ಷಣದಲ್ಲಿ ಬಹಳ ದೊಡ್ಡ ಬದಲಾಣೆಯಾಗಿದೆ, ಗ್ರಾಮೀಣ ಮಕ್ಕಳನ್ನು ಪಟ್ಟಣದ ವಿದ್ಯಾರ್ಥಿಗಳ ಬೋಧನಾ ಮಟ್ಟಕ್ಕೆ ಶಿಕ್ಷಕರು ಕೊಂಡಯ್ಯಬೇಕು, ಗ್ರಾಮೀಣ ವಿದ್ಯಾರ್ಥಿಗಳು ಬುದ್ದಿವಂತರಿದ್ದು ಇತ್ತೀಚಿನ ಐಎಎಸ್ ಐಪಿಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡಿರುವುದು ಗ್ರಾಮೀಣ ವಿದ್ಯಾರ್ಥಿಗಳೇ ಆಗಿದ್ದಾರೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಯನ್ನು ಶಿಕ್ಷಕರು ಸೃಷ್ಟಿ ಮಾಡಬೇಕು ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆ ಅತ್ಯಂತ ಗೌರವ ಶ್ರದ್ದೆಯಿಂದ ನಡೆದು ಕೊಂಡು ಬಂದ್ದಿರುವ ಪದ್ದತಿಯಾಗಿದೆ, ಆಧುನಿಕ ಜಗತ್ತಿನ ವೇಗದಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಡಿಮೆಯಾಗುತ್ತಿದೆ, ಇಂದಿನ ಸಮಾಜದಲ್ಲಿ ತಂದೆ, ತಾಯಿ, ಗುರುವಿಗೆ ನೀಡುವ ಗೌರವಕ್ಕೆ ಚ್ಯುತಿ ಬರುತ್ತಿದ್ದು ಇಂದಿನ ಶಿಕ್ಷಣಕ್ಕೆ ಮೌಲ್ಯಾಧಾರಿತ ನೀತಿ ಪರಂಪರೆ ಗುಣಾತ್ಮಕ ಭೂದನೆ ಮಕ್ಕಳಿಗೆ ಅವಶ್ಯಕತೆ ಇದ್ದು ಈ ಕಾರ್ಯ ಗುರುವಿನಿಂದ ಮಾತ್ರ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಥರಟಿ ಪ್ರಾರ್ಥಮಿಕ ಶಾಲೆಯ ಆಟದ ಮೈದಾನಕ್ಕೆ ಕಾಂಪೌಂಡ್ ನಿರ್ಮಾಣಕ್ಕಾಗಿ ೫ ಲಕ್ಷ ಬಿಡುಗಡೆ ಮಾಡಿ ಗ್ರಾಮಕ್ಕೆ ಶುದ್ದ ನೀರಿನ ಘಟಕವನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ಕಾರ್ಯಕ್ರದಲ್ಲಿ ಗ್ರಾ.ಪಂ ಅಧ್ಯಕ್ಷೆ ರತ್ಮಮ್ಮ ಉಪಾಧ್ಯಕ್ಷೆ ಭಾರತಿ ಸದಸ್ಯರುಗಳಾದ ದಾಕ್ಷಾಯಿಣಿ ಗೋವಿಂದಪ್ಪ ರವಿಕುಮಾರ್ ಮಾಜಿ ಉಪಾಧ್ಯಕ್ಷೆ ಪಾರ್ವತಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಎಸ್‌ಡಿಎಂಸಿ ಅದ್ಯಕ್ಷ ನರಸಿಂಹರಾಜು ಶಿಕ್ಷಕರುಗಳಾದ ಪರಮೇಶ್ವರ್ ತಿಪ್ಪೇಸ್ವಾಮಿ, ಲಕ್ಷೀಪತ್ರ ಮುಖಂಡರಾದ ಕಾಂತರಾಜು ಅರವಿಂದ್, ಬಸವರಾಜು, ಮಧುಸೂದನ್, ಸೇರಿದಂತೆ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.