![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 2, 2022, 1:50 AM IST
ಮಂಗಳೂರು: ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜೂ. 6ಕ್ಕೆ ಮುಂದೂಡಿದೆ.
ವಿಶ್ವಹಿಂದೂ ಪರಿಷತ್ ಪರವಾಗಿ ಚಿದಾನಂದ ಕೆದಿಲಾಯ ಮತ್ತು ಮಸೀದಿ ಆಡಳಿತ ಮಂಡಳಿಯ ಪರವಾಗಿ ಎನ್.ಪಿ. ಶೆಣೈ ವಾದ ಮಂಡಿಸಿದರು.
ಮಸೀದಿ ನವೀಕರಣ ಸಂದರ್ಭ ದೇವಾಲಯವನ್ನು ಹೋಲುವ ರಚನೆ ಕಂಡುಬಂದಿರುವ ಹಿನ್ನೆಲೆ
ಯಲ್ಲಿ ಜ್ಞಾನವಾಪಿ ಮಾದರಿಯಲ್ಲಿ ಕೋರ್ಟ್ ಕಮಿಷನರ್ ಮೂಲಕ ಪುರಾತತ್ವ ಇಲಾಖೆಯ ಸಹಾಯದಲ್ಲಿ ಸರ್ವೇ ನಡೆಸಬೇಕು ಎಂದು ಕೆದಿಲಾಯ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಪ್ರಕರಣದಲ್ಲಿ ಸರಕಾರವನ್ನು ಕೂಡ ಒಂದು ಪಕ್ಷಕಾರನನ್ನಾಗಿ (ಪಾರ್ಟಿ) ಮಾಡಬೇಕು ಎಂಬುದಾಗಿ ಅರ್ಜಿ ಸಲ್ಲಿಸಿದರು. ಅಲ್ಲದೆ ಈಗಾಗಲೇ ಸ್ಥಳೀಯ ಗ್ರಾ.ಪಂ. ಪಿಡಿಒ ಅವರು ಅನುಮತಿಯನ್ನು ತಡೆಹಿಡಿದಿದ್ದಾರೆ ಎಂದು ಹೇಳಿದರು.
ಎನ್.ಪಿ. ಶೆಣೈ ವಾದ ಮಂಡಿಸಿ ಮಳಲಿಯಲ್ಲಿ ಯಾವ ದೇವರಿದ್ದರು,ದೇವಸ್ಥಾನದ ಇತಿಹಾಸ ಏನು ಎಂಬ ಬಗ್ಗೆ ಅರ್ಜಿ ದಾರರು ಸಾಕ್ಷ್ಯ ನೀಡಿಲ್ಲ. ಆದರೆ ಅಲ್ಲಿ 700 ವರ್ಷಗಳಿಂದ ಮಸೀದಿ ಇತ್ತು ಎನ್ನುವುದಕ್ಕೆ ದಾಖಲೆ ಇದೆ. ನವೀಕರಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.ವಾದ ಪ್ರತಿವಾದ ಆಲಿಸಿದ ನ್ಯಾಯಾ ಧೀಶರು ವಿಚಾರಣೆಯನ್ನು ಜೂ. 6ಕ್ಕೆ ಮುಂದೂಡಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.