ಕೃಷಿ ಸಮಗ್ರ ಮಾಹಿತಿ ಒದಗಿಸುವ ವಾಹನಕ್ಕೆ ಚಾಲನೆ
Team Udayavani, Jun 2, 2022, 2:57 PM IST
ಸೇಡಂ: ಮುಂಗಾರು ಆರಂಭವಾಗುತ್ತಿದ್ದು, ಕೃಷಿಕರಿಗೆ ಸಹಾಯವಾಗಲು ಮತ್ತು ರೈತರಿಗೆ ಬೇಕಾಗುವ ಸಮಗ್ರ ಮಾಹಿತಿ ಒದಗಿಸಲು ಕೃಷಿ ಸಂಜೀವಿನಿ ವಾಹನದ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೈ.ಎಲ್. ಹಂಪಣ್ಣ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದಿಂದ ರೈತರಿಗೆ ಸಿಗುವ ಯೋಜನೆಗಳು, ಮಣ್ಣಿನ ಪರೀಕ್ಷೆ, ಕೀಟ ನಾಶಕ ಬಳಕೆ, ಬೆಳೆ ನೆಟೆ ಹೋಗುವುದು ಸೇರಿದಂತೆ ಎಲ್ಲದರ ಬಗ್ಗೆ ವಾಹನ ಮೂಲಕ ಅರಿವು ಮೂಡಿಸಲಾಗುತ್ತಿದೆ. ವಾಹನದಲ್ಲಿ ಒಬ್ಬ ಕೃಷಿ ತಂತ್ರಜ್ಞ ಇರಲಿದ್ದು, ವಾಹನ ತಮ್ಮ ಗ್ರಾಮಕ್ಕೆ ಬಂದಾಗ ಗ್ರಾಮದ ರೈತರು ಅವರ ಬಳಿ ಮಾಹಿತಿ ಪಡೆದುಕೊಳ್ಳಬಹುದು. ಭಿತ್ತಿ ಪತ್ರವನ್ನು ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ವಾಹನವು ಜೂನ್ 1 ಮತ್ತು 2ರಂದು ಆಡಕಿ ಭಾಗದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ 3ರಂದು ಸೇಡಂನಲ್ಲಿ ಈ ಕುರಿತು ಕಾರ್ಯಕ್ರಮ ನಡೆಸಲಾಗುತ್ತದೆ. ಜೂ. 4 ಮತ್ತು 5ರಂದು ಕೋಡ್ಲಾ ಭಾಗದ ಗ್ರಾಮಗಳಲ್ಲಿ ಕೃಷಿ ಸಂಜೀವಿನಿ ವಾಹನ ಸಂಚರಿಸಿ 6ರಂದು ಕೋಡ್ಲಾ ಗ್ರಾಮದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಯೋಜನೆಯ ಲಾಭವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ರೈತ ಸಮಾಜದ ಕಾರ್ಯದರ್ಶಿ ಗಣಪತರಾವ್ ಚಿಮ್ಮನಚೋಡಕರ್ ಮಾತನಾಡಿ, ಒಂದು ಇಲಾಖೆ ಸುಸೂತ್ರವಾಗಿ ಮುನ್ನಡೆಯಬೇಕಾದರೆ ಒಬ್ಬ ಉತ್ತಮ ಅಧಿ ಕಾರಿ ಬೇಕು. ಅದರಂತೆ ಕೃಷಿ ಅಧಿಕಾರಿ ಹಂಪಣ್ಣ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಮೊದಲೆಲ್ಲ ಬಹಳಷ್ಟು ಹೋರಾಟಗಳು ನಡೆಯುತ್ತಿದ್ದವು ಆದರೆ ಇದೀಗ ಬಿತ್ತನೆ ಬೀಜ, ಗೊಬ್ಬರ ಯಾವ ಕೊರತೆ ಇಲ್ಲದಂತೆ ಅವರು ನೋಡಿಕೊಳ್ಳುತ್ತಿದ್ದಾರೆ ಎಂದರು.
ಈ ವೇಳೆ ರೈತ ಸಮಾಜದ ಸದಸ್ಯ ರಾಮಯ್ಯ ಪೂಜಾರಿ, ಕೃಷಿ ಅಧಿಕಾರಿಗಳಾದ ಪ್ರಕಾಶ ರಾಠೊಡ, ಬಸವರಾಜ, ಅನಂತರೆಡ್ಡಿ, ಪ್ರಮುಖರಾದ ಪಂಚಾಕ್ಷರಿ ಸ್ವಾಮಿ, ಜಗನ್ನಾಥ ಪಾಟೀಲ ಹಾಗೂ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.