ಉಭಯ ಜಿಲ್ಲೆಯಲ್ಲಿ 3,300 ಎಕರೆ ಸರಕಾರಿ ಭೂಮಿ ಒತ್ತುವರಿ ತೆರವು
Team Udayavani, Jun 3, 2022, 6:06 AM IST
ಉಡುಪಿ: ಗೋಮಾಳ ಸಹಿತವಾಗಿ ಸರಕಾರಿ ಭೂಮಿ ಒತ್ತುವರಿ ತೆರವು ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಉಭಯ ಜಿಲ್ಲೆಗಳಲ್ಲಿ 3,300 ಎಕರೆಗೂ ಅಧಿಕ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.
ರಾಜ್ಯದಲ್ಲಿ ಒಟ್ಟು 62,72,812 ಎಕರೆ ಸರಕಾರಿ ಭೂಮಿಯಿದ್ದು, ಅದರಲ್ಲಿ 14,25,464 ಎಕರೆ ಒತ್ತುವರಿಯಾಗಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಮೂಲಕ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ.
ಒತ್ತುವರಿ ಗುರುತಿಸಲು ಮತ್ತು ನಿಗಾವಣೆಗೆ ಸರಕಾರಿ ಜಮೀನು ಸಂರಕ್ಷಣ ಸಮಿತಿಯನ್ನು ಸರಕಾರ ಈಗಾಗಲೇ ನೇಮಿಸಿದೆ. ಸಮಿತಿಯ ಸಲಹೆಯನುಸಾರ ಸರಕಾರದ ಹಂತದಲ್ಲಿ ಒತ್ತುವರಿ ತೆರವಿಗೆ ಸಂಬಂಧಿಸಿ ಸೂಚನೆ ಬರಲಿದೆ. ಅದರಂತೆ ಜಿಲ್ಲೆ, ತಾಲೂಕು ಹಂತದಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಖಾಲಿ ಇರುವ ಸರಕಾರಿ ಜಮೀನುಗಳನ್ನು ಗುರುತಿಸಿ ನಾಮಫಲಕ ಅಳವಡಿಸುವುದು ಮತ್ತು ಆವಶ್ಯಕತೆ ಇರುವಲ್ಲಿ ತಂತಿ ಬೇಲಿ ಹಾಕುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಉಭಯ ಜಿಲ್ಲೆಯ ಒತ್ತುವರಿ ಮಾಹಿತಿ:
ಉಡುಪಿ ಜಿಲ್ಲೆಯಲ್ಲಿ ಲಭ್ಯವಿರುವ 2,59,868 ಎಕರೆ ಸರಕಾರಿ ಭೂಮಿಯಲ್ಲಿ 1,11,499 ಎಕರೆ ಒತ್ತುವರಿಯಾಗಿದ್ದು, ಇದರಲ್ಲಿ 2021ರ ಡಿಸೆಂಬರ್ ಅಂತ್ಯಕ್ಕೆ 3512 ಎಕರೆ ಒತ್ತುವರಿ ತೆರವಿಗೆ ಬಾಕಿ ಉಳಿದೆ. ದಕ್ಷಿಣ ಕನ್ನಡದಲ್ಲಿ ಲಭ್ಯವಿರುವ 5,63,046 ಎಕರೆ ಸರಕಾರಿ ಭೂಮಿಯಲ್ಲಿ 64,521 ಎಕರೆ ಒತ್ತುವರಿಯಾಗಿದ್ದು, 2021ರ ಡಿಸೆಂಬರ್ ಅಂತ್ಯಕ್ಕೆ 13,218 ಎಕರೆ ಒತ್ತುವರಿ ತೆರವಿಗೆ ಬಾಕಿ ಉಳಿದಿದೆ. ಒಟ್ಟಾರೆಯಾಗಿ ಉಭಯ ಜಿಲ್ಲೆಗಳ 16,730 ಎಕರೆ ಒತ್ತುವರಿ ತೆರವಿಗೆ ಬಾಕಿಯಿದೆ. 2013ರಿಂದ ಈಚೆಗೆ ಎರಡು ಜಿಲ್ಲೆಗಲ್ಲಿ 3,300 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಉಳಿದಂತೆ 2013ರ ಮೊದಲು ತೆರವು ಪ್ರಕ್ರಿಯೆ ನಡೆದಿದೆ.
ಅಕ್ರಮ ಸಕ್ರಮ :
ಸರಕಾರಿ ಭೂಮಿಯನ್ನು ಹಲವು ವಿಧಗಳಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ. ನಿವೇಶನ ರಹಿತರು, ದಾಖಲೆ ಇಲ್ಲದೆ ಹಲವು ವರ್ಷಗಳಿಂದ ಮನೆ ಮಾಡಿಕೊಂಡು ಕುಟುಂಬ ಸಮೇತರಾಗಿ ವಾಸವಿರುವ ಕಡೆಗಳಲ್ಲಿ ಅವರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತವಾಗಿ ವಿವಿಧ ಜಿಲ್ಲೆಗಳಲ್ಲಿ 94ಸಿ, 50-53ರ ಅಡಿಯಲ್ಲಿ ಹೆಚ್ಚು ಜಮೀನು ಒತ್ತುವರಿಯಾಗಿದೆ. ಕೆಲವೊಂದು ಪ್ರಕರಣಗಳು ಸದ್ಯ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ. ಇಂತಹ ಅಕ್ರಮ ಸಕ್ರಮ ಪ್ರಕರಣಗಳಲ್ಲಿ ತೆರವುಗೊಳಿಸದೆ ಹಕ್ಕುಪತ್ರ ನೀಡಲಾಗುವುದು.
ಒತ್ತುವರಿ ತೆರವು ಕಾರ್ಯ ತಹಶೀಲ್ದಾರ್ ಹಂತದಲ್ಲಿ ನಡೆಯುತ್ತಿರುತ್ತದೆ. ಸ್ಥಳೀಯವಾಗಿ ಬಂದಿರುವ ದೂರುಗಳನ್ವಯ ಸರಕಾರಿ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಗೋಮಾಳ ಅಥವಾ ಸರಕಾರಿ ಜಮೀನು ಒತ್ತುವರಿಗೆ ಅವಕಾಶ ಇರುವುದಿಲ್ಲ. – ಕೂರ್ಮಾ ರಾವ್ ಎಂ., ಉಡುಪಿ ಜಿಲ್ಲಾಧಿಕಾರಿ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.