ಫಿಟ್‌ನೆಸ್ ಸರ್ಟಿಫಿಕೆಟ್ ಯಾರ್ಡ್‌ಗೆ ಫಿಟ್‌ನೆಸ್ ಕೊರತೆ!
ಮೂಲಸೌಲಭ್ಯ ವಂಚಿತ ಯಾರ್ಡ್
Team Udayavani, Jun 3, 2022, 10:06 AM IST
ಕದ್ರಿಹಿಲ್ಸ್: ನಗರದ ಕೆಪಿಟಿ ಬಳಿ ಇರುವ ಪ್ರಾದೇಶಿಕ ಸಾರಿಗೆ ಕಚೇ ರಿಗೆ ಸಂಬಂಧಿಸಿದ ಸಾರಿಗೆ ವಾಹನ ಗಳ ನೋಂದಣಿ ಹಾಗೂ ಅರ್ಹತಾ ಪತ್ರ ನವೀಕರಣ ಯಾರ್ಡ್ (ಫಿಟ್‌ನೆಸ್ ಸರ್ಟಿಫಿಕೆಟ್ ಯಾರ್ಡ್) ಮೂಲಸೌಲಭ್ಯ ಗಳಿಲ್ಲದೆ ಸೊರಗಿದೆ!
ನಗರದ ಹೃದಯ ಭಾಗದಲ್ಲಿದ್ದ ಈ ವ್ಯವಸ್ಥೆಯನ್ನು ವಾಹನ ಚಾಲಕ/ ಮಾಲಕರ ಹಾಗೂ ಸಾರಿಗೆ ಇಲಾಖೆಯ ಹಿತ ದೃಷ್ಟಿಯಿಂದ 2017ರಲ್ಲಿ ಹೊರವಲಯಕ್ಕೆ (ಕೆಪಿಟಿ ಪಕ್ಕ) ಸ್ಥಳಾಂತರಿ ಸಲಾಗಿತ್ತು. ಆದರೆ ಆವರಣ ಆಗಿ ಇಷ್ಟು ಸಮಯ ವಾದರೂ, ಹಲವಾರು ಮೂಲ ಸೌಲಭ್ಯಗಳ ಕೊರತೆ ಇಲ್ಲಿ ಈಗಲೂ ಕಾಡುತ್ತಿದೆ.
ಬಿಸಿಲು-ಮಳೆಗೆ ಆಶ್ರಯವಿಲ್ಲ!
ವಾಹನವನ್ನು ತಪಾಸಣೆಗೆ ಒಳಪಡಿ ಸಲು ಹೋಗುವವರಿಗೆ ಕುಳಿತುಕೊಳ್ಳಲು ಇಲ್ಲಿ ವ್ಯವಸ್ಥೆಯಿಲ್ಲ. ನಿಂತುಕೊಂಡು ಅಥವಾ ವಾಹನದಲ್ಲಿ ಕುಳಿತುಕೊಳ್ಳುವುದು ಇಲ್ಲಿ ಅನಿವಾರ್ಯ. ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ಇಲ್ಲಿ ಪ್ರತ್ಯೇಕ ವ್ಯವಸ್ಥೆಗಳಿಲ್ಲ. ಒಂದು ವೇಳೆ ನಿಗದಿತ ಸಮಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಾರದಿದ್ದಲ್ಲಿ ಬಿಸಿಲು/ ಮಳೆಯಲ್ಲೇ ನಿಂತು ಕೊಳ್ಳಬೇಕಾಗಿದೆ.
ದಾರಿ ಸೂಚಕ ಫಲಕಗಳಿಲ್ಲ!
ಕೆಪಿಟಿ ಪಕ್ಕದಲ್ಲಿ ಈ ಕೇಂದ್ರ ಇದ್ದರೂ, ಅಲ್ಲಿಗೆ ಎಲ್ಲಿಂದ ತೆರಳಬೇಕು ಎಂಬ ಬಗ್ಗೆ ಕೆಲವರಿಗೆ ಗೊಂದಲವಿದೆ. ದಾರಿ ಹುಡುಕಿಕೊಂಡು ಹೋಗಬೇಕಾಗಿದೆ. ದಾರಿ ತೋರುವ ಸೂಚಕ ಫಲಕವೂ ಹೆದ್ದಾರಿ ಬದಿಯಲ್ಲಿಲ್ಲ. ಇನ್ನು, ಕೇಂದ್ರದ ಹೊರಭಾಗದಲ್ಲಿರುವ ಒಂದು ಬೋರ್ಡ್ ಸಂಪೂರ್ಣ ಗಿಡ ಗಂಟಿಗಳಿಂದ ತುಂಬಿಕೊಂಡಿದೆ. ಸ್ವಚ್ಛತೆಯೂ ಇಲ್ಲಿ ಮರೆಯಾಗಿದೆ.
‘ಸೌಲಭ್ಯ ಕಲ್ಪಿಸಿ’
ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿ ಕಚೇರಿ ಇರುವುದು ಶೋಚನೀಯ. ಫಿಟ್‌ನೆಸ್ ಸರ್ಟಿಫಿಕೆಟ್ ಪಡೆದುಕೊಳ್ಳಲು ಬರುವವರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಒದಗಿಸಲು, ಕುಳಿತುಕೊಳ್ಳಲು ಹಾಗೂ ಶೌಚಾಲಯ ಮುಂತಾದ ಕನಿಷ್ಠ ಸೌಲಭ್ಯಗಳನ್ನು ಸಾರಿಗೆ ಇಲಾಖೆ ನೀಡಬೇಕು ಎಂದು ಚಾಲಕ ರಾದ ಕಿಶೋರ್ ಅವರು ‘ಸುದಿನ’ ಜತೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್‌ಟಿಒ ಕಚೇರಿ ಹಿಂಭಾಗದಲ್ಲಿದ್ದ ಕೇಂದ್ರ
ಮಂಗಳೂರಿನಲ್ಲಿ ಈ ಹಿಂದೆ ಆರ್‌ಟಿಒ ಕಚೇರಿಯ ಹಿಂಭಾಗದಲ್ಲಿಯೇ ಫಿಟ್‌ನೆಸ್ ಸರ್ಟಿಫಿಕೆಟ್‌ಯಾರ್ಡ್ ಇತ್ತು. ಸಾರಿಗೆ ಕಚೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿದ ಬಳಿಕ ಈ ಯಾರ್ಡ್‌ನಲ್ಲಿ ವಾಹನವನ್ನು ಪರೀಕ್ಷಿಸಿ ನಿಗದಿತ ಸಮಯದಲ್ಲಿ ಫಿಟ್‌ನೆಸ್ ಸರ್ಟಿಫಿಕೆಟ್ ನೀಡಲಾಗುತ್ತಿತ್ತು. ಈಗ ಫಿಟ್‌ನೆಸ್ ಸರ್ಟಿಫಿಕೆಟ್‌ಯಾರ್ಡ್ ನ್ನು ಕೆಪಿಟಿ ಬಳಿಗೆ ಸ್ಥಳಾಂತರಿಸಿದ ಕಾರಣ ನಿಗದಿತ ಶುಲ್ಕವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಪಾವತಿಸಿ ಬಳಿಕ ಕೆಪಿಟಿ ಬಳಿಯ ಯಾರ್ಡ್‌ಗೆ ವಾಹನವನ್ನು ಕೊಂಡೊಯ್ದು ತಪಾಸಣೆಗೆ ಒಳ ಪಡಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.