ವೆಡ್ಡಿಂಗ್ ಗಿಫ್ಟ್; ಸ್ತ್ರೀ ರಕ್ಷಣೆಯ ಕಾನೂನಿನ ದುರ್ಬಳಕೆ ವಿರುದ್ಧ ಪ್ರೇಮ ಖಡಕ್ ವಾರ್
ನ್ಯಾಯಾಲಯದಲ್ಲಿ ವೆಡ್ಡಿಂಗ್ ಗಿಫ್ಟ್ ಸದ್ದು, ಗದ್ದಲ
Team Udayavani, Jun 4, 2022, 9:52 AM IST
ಕನ್ನಡದ ಖ್ಯಾತ ನಟಿ ಪ್ರೇಮ ಬಹುದಿನಗಳ ಬಳಿಕ ಮತ್ತೆ ಇದೀಗ ‘ವೆಡ್ಡಿಂಗ್ ಗಿಫ್ಟ್’ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ತಿರುವ ವಿಷ್ಯ ಈಗಾಗ್ಲೇ ನಿಮಗೆಲ್ಲಾ ತಿಳಿದೇ ಇದೆ. ವಿಕ್ರಂ ಪ್ರಭು ಅವ್ರೇ ನಿರ್ದೇಶಿಸಿ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ಈ ಸಿನಿಮಾ ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಸದ್ಯ ವೆಡ್ಡಿಂಗ್ ಗಿಫ್ಟ್ ಚಿತ್ರದ ಟೀಸರ್ ಹೊರಬಿದ್ದಿದೆ.
ಟೈಟಲ್ ಕೇಳಿದಾಗಲೇ ಇದೊಂದು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಯಾವುದೋ ಒಂದು ಕಥೆ ಈ ಸಿನಿಮಾದಲ್ಲಿರಲಿದೆ ಎನ್ನುವುದು ತಿಳಿದಿತ್ತು. ಸದ್ಯ ಹೊರಬಂದಿರುವ ಟೀಸರ್ ಚಿತ್ರದ ಕಥೆ ಬಗ್ಗೆ ಮತ್ತಷ್ಟು ವಿಚಾರಗಳನ್ನು ರಿವೀಲ್ ಮಾಡಿದೆ. ಮದುವೆ ಬಳಿಕ ಆ ಸಂಸಾರದಲ್ಲಿ ಕೌಟುಂಬಿಕ ಕಲಹಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಕೆಲವೊಮ್ಮೆ ಆ ಕಲಹಕ್ಕೆ ಹೆಣ್ಣೆ ಮುಖ್ಯ ಕಾರಣಕರ್ತಳಾಗಿ, ಆ ಪ್ರಕರಣ ಹೆಚ್ಚು ತೀವ್ರತೆ ಪಡೆದು ನ್ಯಾಯಾಲಯದವರೆಗೂ ಹೋಗಿರುವ ಸಾಕಷ್ಟು ಉದಾಹರಣೆಗಳಿವೆ. ಪ್ರಸ್ತುತ ಸಮಾಜದಲ್ಲಿ ನಡೆಯುವ ಇಂತಹ ಕಥೆಗಳ ಎಳೆಯನ್ನಿ ಇಟ್ಟುಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಇರುವ ಕಾನೂನನ್ನು ಹೆಣ್ಣು ಮಕ್ಕಳೇ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದು ಈ ಚಿತ್ರಕಥೆಯ ಮುಖ್ಯ ಅಂಶ ಎನ್ನಬಹುದು. ಸದ್ಯ ಹೊರಬಂದಿರುವ ಟೀಸರ್ ನಲ್ಲಿ ಈ ಎಲ್ಲಾ ಅಂಶಗಳು ರಿವೀಲ್ ಆಗಿವೆ.
ಈ ಚಿತ್ರದಲ್ಲಿ ನಿಶಾನ್ ನಾಣಯ್ಯ ನಾಯಕರಾಗಿ ಕಾಣಿಸಿಕೊಂಡಿದ್ದರೆ, ನಟಿ ಸೋನು ಗೌಡ ನಾಯಕಿಯಾಗಿ ವಿಭಿನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಇನ್ನೂ ಸ್ಯಾಂಡಲ್ ವುಡ್ ನ ದಿಗ್ಗಜ ನಟರೊಂದಿಗೆ ತೆರೆ ಮಿಂಚಿ ಸೈ ಅನ್ನಿಸಿಕೊಂಡಿರುವ ಪ್ರತಿಭಾನ್ವಿತ ಕಲಾವಿದೆ ಪ್ರೇಮ ಈ ಸಿನಿಮಾದಲ್ಲಿ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್ ನಲ್ಲಿ ಬರುವ ಪ್ರೇಮ ಅವರ ಒಂದು ದೃಶ್ಯ ಅವರ ರೋಲ್ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಬ್ಯುಲ್ಡ್ ಮಾಡುತ್ತೆ. ಜೊತೆಗೆ ನಟ ಅಚ್ಯುತ್ ಕುಮಾರ್ ಹಾಗೂ ನಟಿ ಪವಿತ್ರ ಲೋಕೆಶ್ ಕೂಡ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ನಾನು ನಿರ್ದೇಶಕನಾಗಿದ್ದಾಗ ಬಹಳ ಸ್ಟ್ರಾಂಗ್ ಆಗಿ ಇರುತ್ತೇನೆ..: ಉಪೇಂದ್ರ
ಅಂದಹಾಗೆ ವೆಡ್ಡಿಂಗ್ ಗಿಫ್ಟ್ ಸಿನಿಮಾಗೆ ಬಾಲಚಂದ್ರ ಪ್ರಭು ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಸದ್ಯ ರಿವೀಲ್ ಆಗಿರೋ ಚಿತ್ರದ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆ ಹಾಗೂ ಕುತೂಹಲಗಳನ್ನು ಹೆಚ್ಚಿಸಿದೆ. ಹಾಗಾದರೆ ಸಿನಿಮಾ ಬಿಡುಗಡೆ ಬಳಿಕ ಯಾವ ರೀತಿ ಸದ್ದು ಮಾಡಲಿದೆಯೆಂದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.