ಬ್ಯಾಂಕ್ ಖಾತೆಗಳಿಗೆ ಇ-ಕೆವೈಸಿ ಕಡ್ಡಾಯ: ಕುಷ್ಟಗಿಯಲ್ಲಿ ಗ್ರಾಹಕರ ಪರದಾಟ
Team Udayavani, Jun 4, 2022, 3:02 PM IST
ಕುಷ್ಟಗಿ: ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳ ಸಕ್ರೀಯಗೊಳಿಸಲು ಇ-ಕೆವೈಸಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಕುಷ್ಟಗಿ ಮಾರುತಿ ವೃತ್ತದ ಎಸ್ ಬಿಐ ದಿನಕ್ಕೆ 25 ಖಾತೆಗಳ ಇ-ಕೆವೈಸಿ ನಿಗದಿಗೊಳಿಸಿರುವುದು ಗ್ರಾಹಕರು ಪರದಾಡುವಂತಾಗಿದೆ.
ಬ್ಯಾಂಕಿನೊಂದಿಗೆ ವ್ಯವಹರಿಸದ, ಆಧಾರ್ ಲಿಂಕ್, ಡಬಲ್ ಖಾತೆ ಇಂತಹ 2ಸಾವಿರ ಖಾತೆದಾರರ ಖಾತೆಗಳನ್ನು ಬ್ಯಾಂಕ್ ನಿಷ್ಕ್ರಿಯಗೊಂಡಿದೆ. ಈ ಖಾತೆಗಳ ಸಕ್ರಿಯಕ್ಕೆ ಇ-ಕೆವೈಸಿ ಸಲ್ಲಿಕೆ ಕಡ್ಡಾಯವಾಗಿದೆ. ಆದರೆ ಸದರಿ ಬ್ಯಾಂಕ್ ನಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ದಿನಕ್ಕೆ 25 ಇ-ಕೆವೈಸಿ ಅವಕಾಶ ನೀಡಲಾಗುತ್ತಿದೆ. ಆದರೆ ಬ್ಯಾಂಕ್ ಹೊರಗೆ 50ರಿಂದ 70 ರಷ್ಟು ಜನ ಗ್ರಾಹಕರು ಜಮಾಯಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಹೆಚ್ಚುವರಿ ಸಿಬ್ಬಂದಿ ತೆಗೆದುಕೊಂಡು ಸಮಸ್ಯೆ ನೀಗಿಸಬೇಕಾದ ಬ್ಯಾಂಕ್ ಸಿಬ್ಬಂದಿ ಕೊರತೆ ಮುಂದಿಟ್ಟುಕೊಂಡು ಕೇವಲ 25 ಖಾತೆದಾರರ ಇ-ಕೆವೈಸಿ ಮಾಡಿಕೊಡಲಾಗುತ್ತಿದೆ.
ಗ್ರಾಹಕ ಮುತ್ತಣ್ಣ ಬಾಚಲಾಪೂರ ಪ್ರತಿಕ್ರಿಯಿಸಿ ಬೆಳಗ್ಗೆ 6 ಕ್ಕೆ ಬಂದರೆ 25 ಜನರಿಗೆ ಚೀಟಿ ಸಿಗುತ್ತಿದ್ದು, ಬ್ಯಾಂಕಿನ ನಿಗದಿ ಸಮಯಕ್ಕೆ ಬಂದವರಿಗೆ ಸರದಿಯಲ್ಲಿ ನಿಂತರು ಪ್ರಯೋಜನೆ ಇಲ್ಲ. ಕೂಡಲೇ ಬ್ಯಾಂಕಿನವರು ಹೆಚ್ಚಿನ ಸಿಬ್ಬಂದಿ ನಿಯೋಜಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.