ಭಾರತೀಯ ಸಂಸ್ಕೃತಿಯನ್ನು ವಾಸವಿ ಸಂಘ ಉಳಿಸುತ್ತಿದೆ: ಕನ್ನಿಕಾ ಪರಮೇಶ್ವರ್
Team Udayavani, Jun 4, 2022, 6:05 PM IST
ಕೊರಟಗೆರೆ: ಭಾರತೀಯ ಸಂಸ್ಕೃತಿ ಪರಂಪರೆ ವಿಶ್ವದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು ಅದನ್ನು ವಾಸವಿ ಸಂಘವು ಉಳಿಸಿಕೊಂಡು ಹೋಗುತ್ತಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರರವರ ಪತ್ನಿ ಕನ್ನಿಕಾ ಪರಮೇಶ್ವರ್ ತಿಳಿಸಿದರು.
ಕನ್ನಿಕಾ ಮಹಲ್‌ನಲ್ಲಿ ತಾಲೂಕು ಆರ್ಯವೈಶ್ಯ ಮಂಡಲಿ ವತಿಯಿಂದ ನಡೆದ ಶ್ರೀ ಕನ್ನಿಕಾಪರಮೇಶ್ವರಿ ಪ್ರತಿಪ್ಠಾಪನಾ ೫೦ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಕ್ಷೇತ್ರ ಶಾಸಕರಾದ ಡಾ.ಜಿ.ಪರಮೇಶ್ವರರವರು ಬರಬೇಕಿತ್ತು ಪಕ್ಷದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರುವುದರಿಂದ ಅವರ ಪ್ರತಿನಿಧಿಯಾಗಿ ನಾನು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ, ವಾಸವಿ ಮಹಿಳಾ ಸಂಘವು ಸನಾತನ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದೆ, ಹೆಣ್ಣು ಮಕ್ಕಳಿಗೆ ಬಾಗಿನ ಅರ್ಪಿಸುವ ಕಾರ್ಯ ಹಿಂದು ಸಂಸ್ಕೃತಿಯಲ್ಲಿ ಸ್ತ್ರೀ ಯರಿಗೆ ನೀಡುವ ಗೌರವವಾಗಿದೆ, ಇದಕ್ಕೆ ಜಾತಿ ಮತ ಭೇದವಿರುವುದಿಲ್ಲ ನನಗೂ ಈ ಶಾಸ್ತ್ರವನ್ನು ಸಂಘವು ಮಾಡಿರುವುದು ಅತೀವ ಸಂತಸವಾಗಿದೆ, ಈ ಧಾರ್ಮಿಕ ದೇವತಾ ಕಾರ್ಯದಿಂದ ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಆರ್ಯವೈಶ್ಯ ಜನಾಂಗದ ವಿಯಟ್ನಾಂ ದೇಶದ ರಾಯಭಾರಿ ಶ್ರೀನಿವಾಸಮೂರ್ತಿ ಮಾತನಾಡಿ ರಾಜ್ಯದಲ್ಲಿ ಆರ್ಯ ವೈಶ್ಯ ಮಹಾಸಭಾ ಜನಾಂಗದ ಬಡ ಮಕ್ಕಳಿಗೆ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದೆ, ಆರ್ಯ ವೈಶ್ಯರು ಶ್ರಮವಹಿಸಿ ದುಡಿಯುತ್ತಿದ್ದು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ ಇದರೊಂದಗೆ ಸಮಾಜದಲ್ಲಿ ಸಾಕಷ್ಟು ಸೇವೆಗಳನ್ನು ಧಾನಗಳನ್ನು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅದ್ಯಕ್ಷರಾಗಿ ಮಂಡಲಿಯ ತಾಲೂಕು ಪ್ರದಾನ ಕಾರ್ಯದರ್ಶಿ ಚಿನ್ನಿವೆಂಕಟಾಶಟ್ಟಿ ವಹಿಸಿದ್ದರು ಕಾರ್ಯಕ್ರದಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ನಿರ್ದೆಶಕ ಸಂಪಂಗಿ ಕೃಷ್ಣಯ್ಯಶಟ್ಟಿ, ವೈಶ್ಯಕೋಪರೇಟಿವ್ ಸೊಸೈಟಿ ಉಪಾದ್ಯಕ್ಷ ನಾಗೇಂದ್ರಬಾಬು, ಪ.ಪಂ ಸದಸ್ಯ ಪ್ರದೀಪ್‌ಕುಮಾರ್, ಸುವರ್ಣ ಮಹೋತ್ಸವದ ಅದ್ಯಕ್ಷ ಎಂ.ಜಿ. ಸುಧೀರ್, ಮುಖಂಡರುಗಳಾದ ಶ್ರೀನಿವಾಸಶಟ್ಟಿ, ಬದ್ರಿಪ್ರಸಾದ್, ಅಶೋಕ್, ನಂಜುಂಡ ಶಟ್ಟಿ, ನರೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.