ಸರ್ಕಾರಿ ಬಂಗಲೆಗಳನ್ನು ಕೂಡಲೇ ಬಿಡಿ; ರಾಜಕೀಯ ಪಕ್ಷಗಳಿಗೆ ಕೇಂದ್ರ ಕಟ್ಟುನಿಟ್ಟಿನ ಆದೇಶ
ಲ್ಯೂಟೆನ್ಸ್ ಪ್ರದೇಶದಲ್ಲಿ ಕಚೇರಿ ಹೊಂದಿರುವ ಪಕ್ಷಗಳು
Team Udayavani, Jun 4, 2022, 8:30 PM IST
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಲ್ಯೂಟೆನ್ಸ್ ಪ್ರದೇಶದಲ್ಲಿರುವ ಬಂಗಲೆಗಳಲ್ಲಿ ಠಿಕಾಣಿ ಹೂಡಿರುವ ರಾಜಕೀಯ ಪಕ್ಷಗಳು ಅಲ್ಲಿಂದ ಕಾಲೆ¤ಗೆಯಲೇಬೇಕಾಗಿದೆ. ಹೀಗೆಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿ ಅತ್ಯಾಧುನಿಕವಾಗಿರುವ ಕೇಂದ್ರ ಕಚೇರಿಯನ್ನು ಬಿಜೆಪಿ ಹೊಂದಿದ್ದರೂ, ಸರ್ಕಾರಿ ಬಂಗಲೆಗಳಲ್ಲಿ ಬಿಜೆಪಿ ವಾಸ್ತವ್ಯ ಹೂಡಿರುವುದನ್ನು ಮುಂದುವರಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ನಗರ ವ್ಯವಹಾರಗಳು ಮತ್ತು ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, “ವೈಯಕ್ತಿಕವಾಗಿ ಒಬ್ಬರನ್ನು ಸರ್ಕಾರಿ ಬಂಗಲೆಗಳಿಂದ ತೆರವುಗೊಳಿಸುವುದು ಕಷ್ಟ. ಈಗ ನಾವು ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ತೆರವುಗೊಳಿಸುತ್ತಿಲ್ಲ ಎಂಬ ಟೀಕೆಯನ್ನು ಇನ್ನು ಮಾಡಲಾರರು ಎಂದು ತಿಳಿದು ಕೊಂಡಿದ್ದೇನೆ’ ಎಂದು ಹೇಳಿದ್ದಾರೆ.
ಸರ್ಕಾರಿ ಬಂಗಲೆಗಳಿಂದ ರಾಜಕೀಯ ಪಕ್ಷಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಏಕೆಂದರೆ, ಎಲ್ಲಾ ರಾಜಕೀಯ ಪಕ್ಷಗಳಿಗೂ ಕಚೇರಿ ನಿರ್ಮಿಸಲು ಜಮೀನು ನೀಡಲಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ಜಮೀನು ಪಡೆದ ಮೂರು ವರ್ಷಗಳ ಒಳಗಾಗಿ ರಾಜಕೀಯ ಪಕ್ಷಗಳು ಸ್ವಂತ ಕಚೇರಿ ನಿರ್ಮಿಸಿ, ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸಬೇಕು ಎನ್ನುವುದು ಕರಾರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.