![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 5, 2022, 12:01 AM IST
ಶ್ರೀರಂಗಪಟ್ಟಣ: ಪಟ್ಟಣದ ಜಾಮಿಯಾ ಮಸೀದಿಯಿಂದ ಮದ್ರಸವನ್ನು ಖಾಲಿ ಮಾಡಿಸಿ, ಮಸೀದಿ ಒಳಗಿನ ಮೂಲ ಮಂದಿರ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಹಿಂದು ಪರ ಸಂಘಟನೆಗಳು ಕರೆ ನೀಡಿದ್ದ “ಮೂಲ ಮಂದಿರ ಚಲೋ’ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿ ತಡೆಯೊಡ್ಡಿತು.
ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ತಂಡೋಪತಂಡವಾಗಿ ಜಮಾವಣೆಗೊಂಡ ಸಹ ಸ್ರಾರು ಕಾರ್ಯ ಕರ್ತರನ್ನು ತಡೆದ ಜಿಲ್ಲಾಡಳಿತ, ಅವರು ಪಟ್ಟಣದ ಒಳಗೆ ಪ್ರವೇಶಿಸದಂತೆ ತಡೆಯಿತು.
ಪೊಲೀಸರ ನಡುವೆ ಚಕಮಕಿ
ಶ್ರೀರಂಗಪಟ್ಟಣ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರದಲ್ಲಿ ಮದ್ರಸ ಇದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಇಸ್ಲಾಂ ಧಾರ್ಮಿಕ ಪಾಠ ಬೋಧಿಸಲಾಗುತ್ತಿದೆ. ಹಿಂದೂ ದೇವರ ಹಲವು ಕುರುಹು ನಾಶಪಡಿಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು. ಈ ಸಂದರ್ಭ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ಜತೆಗೆ ಮಾತಿನ ಚಕಮಕಿ ನಡೆಸಿದರು.
ಹನುಮಾನ್ ಚಾಲೀಸಾ
ಜಿಲ್ಲಾಡಳಿತ ತಡೆಯೊಡ್ಡಿದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಕಿರಂಗೂರು ವೃತ್ತದ ಬಳಿ ಇರುವ ಬನ್ನಿ ಮಂಟಪದಲ್ಲಿ ಹಿಂದೂ ಕಾರ್ಯಕರ್ತರು ಜಮಾವಣೆಗೊಂಡರು. ಬಳಿಕ ಬನ್ನಿ ಮಂಟಪದ ಆವರಣದಲ್ಲಿ ಹನುಮನನ್ನು ಪ್ರತಿಷ್ಠಾಪಿಸಿ ಹನುಮಾನ್ ಚಾಲೀಸಾ ಹಾಗೂ ರಾಮನಾಮ ಭಜನೆ ಮಾಡಿದರು.
25 ದಿನಗಳ ಗಡುವು
ಈಗಾಗಲೇ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪುರಾತತ್ವ ಇಲಾಖೆಗೆ 4-5 ಬಾರಿ ಜಾಮಿಯಾ ಮಸೀದಿಯಿಂದ ಮದ್ರಸ ಖಾಲಿ ಮಾಡಿಸಲು, ವೀಡಿಯೋ ಸರ್ವೇ ನಡೆಸಲು ಹಾಗೂ ಮಸೀದಿ ಒಳಗಿನ ಮೂಲ ಮಂದಿರ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ. ಮುಂದಿನ 25 ದಿನದೊಳಾಗಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಮುಖಂಡ ಜಿ. ಬಾಲು ಎಚ್ಚರಿಸಿದರು.
ಜಾಮಿಯಾ ಮಸೀದಿ ಪ್ರವೇಶಿಸಿದರೇ?
ಕಿರಂಗೂರು ಬನ್ನಿಮಂಟಪದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ವೇಳೆ, ನಿಷೇಧಾಜ್ಞೆ ನಡುವೆಯೂ ಪೊಲೀಸರ ಕಣ್ತಪ್ಪಿಸಿ ಮಸೀದಿ ಪ್ರವೇಶಿಸಿದ ಇಬ್ಬರು ಹನುಮಾನ್ ಚಾಲೀಸಾ ಪಠಿಸಿ ದ್ದಾರೆ. ಹಿಂದೂ ಮುಖಂಡರಿಬ್ಬರು ಮಸೀದಿಯಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅಚ್ಚರಿ ಮೂಡಿಸಿತು. ಎಲ್ಲರೂ ಒಟ್ಟಾಗಿ ಮಾಡಿದರೆ ಮಾತ್ರ ಹೋರಾಟವಲ್ಲ, ಒಬ್ಬನೇ ಒಬ್ಬ ಮಾಡಿದರೂ ಅದು ಹೋರಾಟವೇ ಎಂದು ಅವರು ಹೇಳುತ್ತಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.