ಲಲಿತೋಪಾಖ್ಯಾನದಲ್ಲಿ 153 ವೇಷ! ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ
Team Udayavani, Jun 5, 2022, 6:40 AM IST
ಮಂಗಳೂರು: ಸನಾತನ ಯಕ್ಷಾಲಯದವರ 13ನೇ ವಾರ್ಷಿಕೋತ್ಸವ ಪ್ರಯುಕ್ತ ಜೂ. 5ರಂದು ನಡೆಯಲಿರುವ ಶ್ರೀದೇವಿ ಲಲಿತೋ ಪಾಖ್ಯಾನ ಯಕ್ಷಗಾನದಲ್ಲಿ ಒಂದೇ ರಂಗಸ್ಥಳದಲ್ಲಿ 153 ವೇಷಗಳನ್ನು ತರುವ ಯತ್ನ ನಡೆಯಲಿದೆ.
ಈ ಪ್ರಯತ್ನದ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೇಸ್‌ಬುಕ್ ಪೋಸ್ಟ್ ಹಾಕುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 2ರಿಂದ ರಾತ್ರಿ 10ರ ವರೆಗೆ ಯಕ್ಷಗಾನ ನಡೆಯಲಿದೆ.
ಒಂದೇ ವೇದಿಕೆಯಲ್ಲಿ 153 ವೇಷಗಳ ಪ್ರವೇಶ ಮೊದಲ ಬಾರಿಗೆ ಮಾಡಲಾಗುತ್ತಿರುವ ಪ್ರಯೋಗ ಎನಿಸಲಿದೆ. ಸಾಮಾನ್ಯವಾಗಿ ಲಲಿತೋ ಪಾಖ್ಯಾನ ಪ್ರಸಂಗವನ್ನು ವೃತ್ತಿಪರ ಮೇಳಗಳಲ್ಲಿ 25-30 ಮಂದಿ ಕಲಾವಿದರೇ ನಿರ್ವಹಿಸುತ್ತಾರೆ. ಇಲ್ಲಿ ನಾವು 153 ಮಂದಿಗೆ ಹಂಚಿದ್ದೇವೆ ಎಂದು ಯಕ್ಷಗುರು ರಾಕೇಶ್ ರೈ ಅಡ್ಕ “ಉದಯವಾಣಿ’ಗೆ ತಿಳಿಸಿದರು.
ಈ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ಸಿಎಂ, 153 ವೇಷಗಳು ಒಂದೇ ರಂಗಸ್ಥಳದಲ್ಲಿ ಮೇಳೈಸಿ ಇತಿಹಾಸ ಬರೆಯಲಿವೆ. ಯಕ್ಷಗಾನ ಪ್ರಿಯರಿಗೆ ರಸದೌತಣ ನೀಡಲಿವೆ, ಈ ವಿನೂತನ ಪ್ರಯೋಗಕ್ಕೆ ಶುಭಹಾರೈಕೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.