ಪಠ್ಯಪುಸ್ತಕದ ದೋಷ ಸರಿಪಡಿಸಲು ಒತ್ತಾಯ
Team Udayavani, Jun 5, 2022, 11:54 AM IST
ಜೇವರ್ಗಿ: ವಿಶ್ವಗುರು ಅಣ್ಣ ಬಸವಣ್ಣನ ಕುರಿತು ಪಠ್ಯಪುಸ್ತಕದಲ್ಲಿನ ದೋಷ ಸರಿಪಡಿಸಲು ಒತ್ತಾಯಿಸಿ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಶನಿವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
2022ರಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣನ ಕುರಿತು ಅಳವಡಿಸಿದ ಒಂದು ಪುಟದ ಕಿರುಬರಹದಲ್ಲಿ ಬಸವಣ್ಣನವರು ಸಾರಿದ ಹಾಗೂ ಅಳವಡಿಸಿಕೊಂಡ ವಿಷಯಗಳನ್ನು ಮರೆಮಾಚಿ ಅವರ ಚರಿತ್ರೆ ಮತ್ತು ಚಾರಿತ್ರ್ಯಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಯಾವತ್ತು ಲಿಂಗಾಯತ ಧರ್ಮ ಪರಿಪಾಲಿಸಿದ ಬಸವಣ್ಣನವರು ಶೈವ ಗುರುಗಳಿಂದ ಲಿಂಗ ದೀಕ್ಷೆ ಪಡೆದಿಲ್ಲ, ವೀರಶೈವ ಧರ್ಮ ಅಭಿವೃದ್ಧಿ ಪಡಿಸಿಲ್ಲ, ಕಾಯಕ ತತ್ವ ಪ್ರತಿಪಾದಿಸಿದ ಅವರು ಕಾಯಕವೇ ಕೈಲಾಸ ಎಂದಿದ್ದರು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ವೀರಶೈವ ಎನ್ನುವುದು 14ನೇ ಶತಮಾನದಿಂದ ಈಚೆಗೆ ಬಳಕೆಗೆ ಬಂದ ಪದ. ಸತ್ಯವನ್ನರಿಯದ ಪಠ್ಯ ರಚನೆಕಾರರು ಬಸವಣ್ಣನವರ ಆಸೆಗೆ ಅಪಚಾರ ಎಸಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಮನದಲ್ಲಿ ತಪ್ಪು ಅಭಿಪ್ರಾಯಗಳ ಬೀಜ ಬಿತ್ತಿದಂತಾಗುತ್ತದೆ. ಕೂಡಲೇ ಅಸಂಬದ್ಧ ಪದಗಳನ್ನು ತೆಗೆದು ಹಾಕಿ ಬಸವಣ್ಣನವರ ಮೂಲ ಉದ್ದೇಶಗಳನ್ನು ಅಳವಡಿಸಬೇಕೆಂದು ಒತ್ತಾಯಿಸಲಾಯಿತು.
ಈ ಕುರಿತು ಕೂಲಂಕುಷವಾಗಿ ಚರ್ಚಿಸಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವೇಶ್ವರರ ಬಗ್ಗೆ ಆಗಿರುವ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಲು ಮುಂದಾಗಬೇಕು. ಇಲ್ಲದಿದ್ದರೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಸವಾಭಿಮಾನಿಗಳು ಎಚ್ಚರಿಸಿದರು.
ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೆ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಾತ್ತಾ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಗ್ರೇಡ್-2 ತಹಶೀಲ್ದಾರ್ ಡಾ| ರಮೇಶ ಹಾಲು ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸೊನ್ನ ವಿರಕ್ತ ಮಠದ ಡಾ| ಶಿವಾನಂದ ಸ್ವಾಮೀಜಿ, ನೆಲೋಗಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಶಿವಣಗೌಡ ಹಂಗರಗಿ, ಷಣ್ಮುಖಪ್ಪಗೌಡ ಹಿರೇಗೌಡ, ಸಂಗನಗೌಡ ಪಾಟೀಲ, ಮಹಾಂತಗೌಡ ಚನ್ನೂರ, ಚಂದ್ರಶೇಖರ ಸೀರಿ, ಬಾಪುಗೌಡ ಬಿರಾಳ, ಮಹಾಂತ ಸಾಹು ಹರವಾಳ, ನೀಲಕಂಠ ಅವುಂಟಿ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಸಿದ್ರಾಮ ಕಟ್ಟಿ, ರವಿ ಕುರಳಗೇರಾ, ಶ್ರೀಹರಿ ಕರಕಿಹಳ್ಳಿ, ಮಲ್ಲನಗೌಡ ಕನ್ಯಾಕೋಳೂರ, ಸದಾನಂದ ಪಾಟೀಲ, ರವಿ ಗುತ್ತೇದಾರ, ಈರಣ್ಣಗೌಡ, ಮಲ್ಲಿಕಾರ್ಜುನ ಕೆಲ್ಲೂರ, ಮಲ್ಲಿಕಾರ್ಜುನ ಗೂಳೇದ್, ದವಲಪ್ಪ ಮದನ್, ಸಿದ್ಧು ಮದರಿ, ವಿಶ್ವರಾಧ್ಯ ಗಂವ್ಹಾರ, ಬಸವರಾಜ ಲಾಡಿ, ಬಸವರಾಜ ಮಡಿವಾಳಕರ್, ಈರಣ್ಣ ಭೂತಪುರ, ಬಸಣ್ಣ ಸರಕಾರ ಹಾಗೂ ಹಲವಾರು ಬಸವಾಭಿಮಾನಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.