ಮಾನ್ಪಡೆ ರಾಜಿ ರಹಿತ ಹೋರಾಟಗಾರ: ಶಫಿಯೋದ್ದೀನ್
Team Udayavani, Jun 5, 2022, 12:31 PM IST
ಕಲಬುರಗಿ: ತೊಗರಿ ನಾಡಿನಲ್ಲಿ ಹೋರಾಟದ ಮೂಲಕ ಧ್ವನಿಯಾಗಿದ್ದ, ಬಡವರ, ರೈತರ ಮತ್ತು ಕಾರ್ಮಿಕ ವರ್ಗದ ಚಿಂತಕರಾಗಿದ್ದ ಕರ್ನಾಟಕ ಕಂಡ ದಿಟ್ಟ ಹೋರಾಟಗಾರ ದಿ. ಮಾರುತಿ ಮಾನ್ಪಡೆ ಜನ್ಮದಿನವನ್ನು ಬುಧವಾರ ಕಮಲಾಪುರ, ಅಂಬಲಗಾ, ಕಲಬುರಗಿ ಜಿಮ್ಸ್ ಆಸ್ಪತ್ರೆ ಸೇರಿದಂತೆ ಹಲವೆಡೆ ಆಚರಿಸಲಾಯಿತು.
ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕಲಬುರಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ವತಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಫಿಯೋದ್ದೀನ್ ಮಾತನಾಡಿ, ದಿ. ಮಾನ್ಪಡೆ ದೂರದೃಷ್ಟಿ ಮತ್ತು ಗಟ್ಟಿಯಾದ ನಿಲುವಿನ ಹೋರಾಟಗಾರರಾಗಿದ್ದರು. ಸಮಸ್ಯೆಗಳನ್ನು ಕಣ್ಣಾರೆ ಕಂಡು ಹೋರಾಟದ ಧ್ವನಿ ಎತ್ತುತ್ತಿದ್ದ ಅವರು ರಾಜೀ ಸ್ವಭಾವ ಹೊಂದಿರಲಿಲ್ಲ. ಇದರಿಂದಾಗಿಯೇ ಹಲವಾರು ಸಮಸ್ಯೆಗಳಿಗೆ ಅವರು ಉತ್ತರ ಕಂಡುಕೊಳ್ಳುತ್ತಿದ್ದರು. ಜನನಾಯಕರಾಗಿ ರೂಪಗೊಂಡಿದ್ದರು. ಪ್ರಮುಖವಾಗಿ ಕಾರ್ಮಿಕರು, ಬಡವರ ಕುರಿತು ವಿಶೇಷ ಕಾಳಜಿ ಹೊಂದಿದ್ದರು ಎಂದು ಶೋಕಿಸಿದರು.
ಡಾ| ಜಿ.ಬಿ. ದೊಡ್ಡಮನಿ, ರಾಜಶೇಖರ ಭಜಂತ್ರಿ, ಶಾಂತಪ್ಪ ಪಾಟೀಲ ಸಣ್ಣೂರ ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ ಬಕ್ಕಿ , ಕಾರ್ಯದರ್ಶಿ ನಾಗರಾಜ ಗೋಗಿ, ಚಂದ್ರು ಕಪ್ಪನೂರು, ಖಜಾಂಚಿ ನಾರಾಯಣ ರಂಗದಾಳ, ಥಾವರು ರಾಠೊಡ, ಅಶೋಕ ಪಂಚಾಳ, ಅನಿಲ ಮಾಂಗ್, ಸೈಯದ್ ರಶೀದ್, ಯುನೂಸ್ ಹಜಾರೆ , ಲತಾ ಮಂಗೇಶ್ಕರ್, ಜ್ಯೋತಿ ಸಿಂಗೆ, ಸಿದ್ಧಲಿಂಗ ಪಾಳ, ಮೈಲಾರಿ ದೊಡ್ಡಮನಿ ಮತ್ತಿತರರು ಇದ್ದರು.
ಇದೇ ವೇಳೆ ಕಮಲಾಪುರ ಮತ್ತು ಅಂಬಲಗಿಯಲ್ಲೂ ಮಾನಪಡೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷವಾಗಿ ಸಸಿಗಳನ್ನು ನೆಟ್ಟು, ಬಡ ಮಕ್ಕಳಿಗೆ ಸಿಹಿ ಹಂಚಲಾಯಿತು. ಅಂಬಲಗಿಯ ಬಸವರಾಜ ಸರಡಗಿ, ಕುಪ್ಪಣ್ಣ ಸಿಂಗೆ, ಗ್ರಾಮದ ರೈತ ಸಂಘದ ಮುಖಂಡರಾದ ಬೀರಪ್ಪ ಗಡ್ಡದ, ದುರ್ಗಪ್ಪ ಚವ್ಹಾಣ, ಮಾಳಪ್ಪ ಗಡ್ಡದ, ದಿಲೀಪ ಸರಡಗಿ, ರೈತ ಸಂಘದ ತಾಲೂಕು ಮುಖಂಡರಾದ ಸೋಮಶೇಖರ ಸಿಂಗೆ, ಬಸವರಾಜ ಮಾಡ್ಯಾಳ, ಹಾಗೂ ಕಮಲಾಪುರದ ತಾಲೂಕ ಅಧ್ಯಕ್ಷರಾದ ರೇವಪ್ಪ ಗೌಡ ಓಕಳಿ, ಕಾರ್ಯದರ್ಶಿ ಬಿಮರಾಯ ಕಲ್ಲಕುಟಗಿ, ಸುಭಾಷ ಕಲ್ಲಮೂಡ, ಚಿದಾನಂದ ಜೀವಣಗಿ, ಖಾಜಾ ಮೈನೊದ್ದೀನ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.