ಬಿಸಿಲು ನಾಡಲ್ಲಿ 18000 ಸಸಿ ನೆಟ್ಟ ಡಾಕ್ಟರ್‌ ತಂಡ


Team Udayavani, Jun 5, 2022, 12:53 PM IST

9plants

ಕಲಬುರಗಿ: ನಾನು ಬೇಸಿಕಲಿ ಮಂಗಳೂರಿನಲ್ಲಿ ಹೆಚ್ಚು ಸಮಯ ಕಳೆದು ಓದು ಮುಗಿಸಿದ್ದೆ. ಇನ್ನೇನು ಸ್ವಂತದ ಡಾಕ್ಟರಕೀ ಶುರು ಮಾಡೋಣ ಅಂತ್ಹೇಳಿ ಸ್ವಂತ ಊರು ಕಲಬುರಗಿಗೆ ಬಂದೆ. ಇಲ್ಲಿ ನೋಡಿದರೆ ಭಣ..ಭಣ.. ಬಿಸಿಲು, ಬಿಸಿಗಾಳಿ ಬೇಸಿಗೆಯಲ್ಲಿ ಬೆವರಿನ ಜಳಕ. ಹಿಂಗಾದರ ಹ್ಯಾಂಗ್‌..ಸಸಿ ನೆಡೋಣ, ಹಸಿರು ಮಾಡೋಣ ಅಂದ್ರ ಯಾರ್‌ ಬರ್ತಾರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಶುರು ಮಾಡಬೇಕಂತ್ಹೇಳಿ 2016ರ ಬೇಸಿಗೆಯಲ್ಲಿ 30 ಸಸಿ ನೆಟ್ಟೆ. ಕೆಲವರು..ಹುಚ್ಚು ಅಂದ್ರು, ಇನ್ನೂ ಕೆಲವ್ರು ತಮ್ಮಾ ಫ್ಯಾಶನ್‌ ಮಾಡಬೇಡ. ಪೇಪರನ್ಯಾಗ ಫೋಟೋ ಬರೋ ಸಲ್ವಾಗಿ ಫೋಜ್‌ ಕೊಡಬ್ಯಾಡ್‌..ಛಲೋ..ಛಲೋರು ಕೈಬಿಟ್ಟಾರ ಅಂತೆಲ್ಲಾ ನೆಗೆಟಿವ್‌ ಮಾತುಗಳ ಮಧ್ಯೆ ಇವತ್ತು 2022ರ ಹೊತ್ತಿಗೆ 18,000 ಸಾವಿರ ಸಸಿ ನೆಟ್ಟು ಗಿಡ ಮಾಡಿದ ಖುಷಿ ಇದೆ”

ಏಕ್‌ ಉಸಿರಲ್ಲಿ ಸಸಿ ನೆಡೋ ಬಿಗನಿಂಗ್‌ ಹೇಳಿಕೊಂಡದ್ದು ಡಾ|ನಾಗನಾಥ್‌ ಯಾದಗಿರಿ. ಇವರದ್ದು ತಂಡ ಇದೆ. 12 ಜನ ಎಕ್ಟೀವ್‌ ಸದಸ್ಯರಿದ್ದಾರೆ. ವಾಟ್ಸ್‌ಆ್ಯಪ್‌ ಗುಂಪು ಮಾಡಿದ್ದಾರೆ. “ಲಕ್ಷ ವೃಕ್ಷೋತ್ಸವ’ ಅಂತಾನೆ ಹೆಸರು. 150ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಎಲ್ಲರಿಗೂ ಗಿಡ ಹಚ್ಚಬೇಕು ಅನ್ನವೋ ಹಂಬಲ. ಪುರುಸೊತ್ತಿದ್ದಾಗ ಬಹುತೇಕ ಎಲ್ಲರೂ ಸೇರ್ತಾರೆ. ಉಳಿದ ಸಮಯದಲ್ಲಿ ನಾಗನಾಥ್‌ ಜತೆಯಲ್ಲಿ ಮಹಾದೇವ, ಅಣವೀರ, ಅಮಿತ್‌ ತಾಂಬೆ, ಜಗದೀಶ ಗಾಜರೆ, ನಾಗರಾಜ್‌ ಅಲ್ಲಂ, ಪದ್ಮಾಕರ ಗಚ್ಚಿನಮನಿ ಹಾಗೂ ಆಗಾಗ ಪ್ರೇರಣಾ ಕೂಡ ಕೈ ಜೋಡಿಸ್ತಾರೆ.

18000 ದಾಟಿತು ಸಂಖ್ಯೆ

ಬಿಸಿಲ ನಗರಿಯ ಸುತ್ತ ಬರೋಬ್ಬರಿ 18000 ಸಸಿ ನೆಟ್ಟಿದ್ದಾರೆ. ಅವುಗಳ ಆರೈಕೆನೂ ನಡಿತಿದೆ. ಸಸಿ ನೆಡೋದು ಅಂದ್ರೆ ಗುಂಡಿ ತೋಡಿ ಸಸಿ ಇಟ್ಟು ಮಣ್ಣು ಮುಚ್ಚೋದಲ್ಲ ಎನ್ನುವ ನಾಗನಾಥ್‌, ತುಂಬಾ ಶಾಸ್ತ್ರೀಯವಾಗಿ ಸಸಿ ಹಚ್ಚುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಮೊದ ಮೊದಲು ಅರಣ ಇಲಾಖೆಯ ಅಧಿಕಾರಿಕಾರಿಗಳು ಸಸಿ ಕೊಡತ್ತಿದ್ರು, ಈಗೀಗ ಈ ತಂಡವೇ ಸಸಿಗಳನ್ನು ತಯಾರು ಮಾಡುತ್ತಿದೆ. ಕೊರೊನಾ ಲಾಕ್‌ಡೌನ್‌ನಲ್ಲಿ ಸಸಿಗಳನ್ನು ಕೆಲವು ತಾಲೂಕಿಗೂ ಕೊಟ್ಟಿದ್ದಾರೆ. ಪರಿಸರವನ್ನು ಕಾಪಾಡುತೀವಿ ಅಂತೇನೂ ಹೇಳ್ತಿಲ್ಲ. ನಮ್ಮ ಜವಾಬ್ದಾರಿ ನಿಭಾಯಿಸುತ್ತೇವೆ ಎನ್ನೋ ಈ ತಂಡ ಶರಣ ಸಿರಸಗಿ ಮಡ್ಡಿಯಲ್ಲಿ 7000 ಗಿಡಗಳನ್ನು ನೆಟ್ಟಿದೆ. ಬೇಲೂರು ಕ್ರಾಸ್‌ನಲ್ಲಿ 3 ಸಾವಿರ, ತಾಜ್‌ ಸುಲ್ತಾನಪುರದ ಸುತ್ತ 1ಸಾವಿರ ಹೀಗೆ ನಡೆಯುತ್ತದೆ ಪಯಣ. ಇವರ ಜತೆಯಲ್ಲಿ ಆಗಾಗ ಕಾಲೇಜಿನ ಮಕ್ಕಳು ಬಂದು ಕೈ ಕೆಸರು ಮಾಡಿಕೊಂಡು ಸಸಿ ನೆಡ್ತಾರೆ. ವಿಜಿ ವುಮೆನ್ಸ್‌, ಎಸ್‌ಬಿಆರ್‌, ಸರಕಾರಿ ಕಾಲೇಜಿನ ಯುವಕರು ಬರ್ತಾರೆ. ಅವರ ಆಸಕ್ತಿ ನೋಡಿ ಇದು ಮುಂದೆ ಜವಾಬ್ದಾರಿ ಆಗಲಿ ಆಂತಾ ಮನಸ್ಸು ಬಯಸ್ತದೆ ಅಂತಾರೆ ನಾಗನಾಥ್‌

-ಸೂರ್ಯಕಾಂತ ಎಂ.ಜಮಾದಾರ

ಟಾಪ್ ನ್ಯೂಸ್

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.